ಶಿರಸಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಿನ್ನದ ಸರ ನುಂಗಿದ ಹಸು: 35 ದಿನಗಳ ಕಾಲ ಸಗಣಿ ಮೇಲ್ವಿಚಾರಣೆ

|
Google Oneindia Kannada News

ಶಿರಸಿ, ಡಿಸೆಂಬರ್ 20: ಕರ್ನಾಟಕದ ಶಿರಸಿ ತಾಲೂಕಿನಿಂದ ವಿಚಿತ್ರ ಘಟನೆಯೊಂದು ಬೆಳಕಿಗೆ ಬಂದಿದೆ. ಇಲ್ಲಿ ಹಸುವೊಂದು ತನ್ನ ಮಾಲೀಕನ ಬೆಲೆಬಾಳುವ ಚಿನ್ನದ ಸರವನ್ನು ನುಂಗಿದೆ. ವ್ಯಕ್ತಿ ತನ್ನ 20 ಗ್ರಾಂ ತೂಕದ ಚಿನ್ನದ ಸರವನ್ನು ಮರಳಿ ಪಡೆಯಲು ಸುಮಾರು 35 ದಿನಗಳ ಕಾಲ ಹಸುವಿನ ಸಗಣಿಯನ್ನು ಹುಡುಕಿದ್ದಾನೆ. ಆದರೆ ಅವನಿಗೆ ಸರ ಸಿಗಲಿಲ್ಲ. ಕೊನೆಗೆ ಚಿನ್ನದ ಸರ ಸಿಕ್ಕರೂ, ಇದಕ್ಕಾಗಿ ಹಸುವಿನ ಮಾಲೀಕರು ಸಾಕಷ್ಟು ಸಂಕಷ್ಟಗಳನ್ನು ಎದುರಿಸಬೇಕಾಯಿತು. ಇದೀಗ ಈ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.

ಸಿಕ್ಕಿರುವ ಮಾಹಿತಿ ಪ್ರಕಾರ, ಕರ್ನಾಟಕದ ಶಿರಸಿ ತಾಲೂಕಿನ ಹೆಪ್ಪನಹಳ್ಳಿಯಲ್ಲಿ ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಇಲ್ಲಿನ ನಿವಾಸಿ ಶ್ರೀಕಾಂತ್ ಹೆಗಡೆ ಅವರ ನಾಲ್ಕು ವರ್ಷದ ಹಸು ಮೇವಿನೊಂದಿಗೆ 20 ಗ್ರಾಂ ಚಿನ್ನದ ಸರವನ್ನು ನುಂಗಿ ಹಾಕಿದೆ. ಇದನ್ನು ತಿಳಿದಾಗ ಅವರು ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಈ ಘಟನೆ ದೀಪಾವಳಿ ಸಮಯದಲ್ಲಿ ನಡೆದಿದೆ. ಹಸುವಿನ ಮಾಲೀಕರು ಹಬ್ಬದ ಮರುದಿನ ಗೋವಿನ ಪೂಜೆ ಮಾಡಿದರು. ಈ ಸಂದರ್ಭದಲ್ಲಿ ಹಸು ಹಾಗೂ ಕರುವಿಗೆ ಸ್ನಾನ ಮಾಡಿಸಿ ಪೂಜೆ ಸಲ್ಲಿಸಿದರು.

ಪೂಜೆ ವೇಳೆ ಚಿನ್ನ ನುಂಗಿದ ಹಸು

ಪೂಜೆ ವೇಳೆ ಚಿನ್ನ ನುಂಗಿದ ಹಸು

ಭಾರತದಲ್ಲಿ ಹಸುವಿಗೆ ತಾಯಿಯ ಸ್ಥಾನಮಾನವನ್ನು ನೀಡಲಾಗಿದೆ. ಅನೇಕ ಭಾಗಗಳಲ್ಲಿ ಅವಳನ್ನು ಲಕ್ಷ್ಮಿ ದೇವಿಯೆಂದು ಪೂಜಿಸಲಾಗುತ್ತದೆ. ಗೋಪೂಜೆಯ ಸಂದರ್ಭದಲ್ಲಿ ಹಸುವನ್ನು ಹೂವುಗಳು ಮತ್ತು ಮಾಲೆಗಳೊಂದಿಗೆ ಅಮೂಲ್ಯವಾದ ಆಭರಣಗಳಿಂದ ಅಲಂಕರಿಸಲಾಗುತ್ತದೆ. ಪೂಜೆ ಮುಗಿದ ನಂತರ ಆಭರಣಗಳನ್ನು ವಾಪಸ್ ತೆಗೆದುಕೊಳ್ಳಲಾಗುತ್ತದೆ. ಪೂಜೆಯ ವೇಳೆ ಶ್ರೀಕಾಂತ್ ಕರುವಿಗೆ ಚಿನ್ನದ ಸರ ತೊಡಿಸಿದ್ದು, ಕೊನೆಗೆ ಅದನ್ನು ಕಳಚಿ ಹೂಗಳ ಸಮೇತ ಹಸುವಿನ ಮುಂದೆ ಇಟ್ಟಿದ್ದಾರೆ. ಈ ವೇಲೆ ಹಸು ಸರವನ್ನು ನುಂಗಿದೆ ಎಂದು ಹೇಳಲಾಗುತ್ತಿದೆ.

35 ದಿನಗಳವರೆಗೆ ಪ್ರತಿನಿತ್ಯ ಹಸುವಿನ ಸಗಣಿ ಮೇಲ್ವಿಚಾರಣೆ

35 ದಿನಗಳವರೆಗೆ ಪ್ರತಿನಿತ್ಯ ಹಸುವಿನ ಸಗಣಿ ಮೇಲ್ವಿಚಾರಣೆ

ಇದಾದ ನಂತರ ಸರ ಕಳೆದು ಹೋಗಿದೆ ಎಂದು ಹುಡುಕಲಾಗಿದೆ. ಸಾಕಷ್ಟು ಪ್ರಯತ್ನದ ನಂತರವೂ ಚಿನ್ನದ ಸರ ಪತ್ತೆಯಾಗಿಲ್ಲ. ಆದರೆ ನಂತರ ಹಸು ಹೂವಿನ ಮಾಲೆಯೊಂದಿಗೆ ಸರವನ್ನು ನುಂಗಿರಬಹುದು ಎಂದು ಅಂದಾಜಿಸಲಾಗಿದೆ. ಆಗ ಸಗಣಿ ಮೂಲಕ ಚಿನ್ನದ ಸರ ಹೊರಬರಬಹುದು ಎಂದು ಕಾಯಲು ಪ್ರಾರಂಭಿಸಿದ್ದಾರೆ. ವರದಿಯ ಪ್ರಕಾರ, ಶ್ರೀಕಾಂತ್ ಅವರ ಕುಟುಂಬವು ಸುಮಾರು 30 ರಿಂದ 35 ದಿನಗಳವರೆಗೆ ಪ್ರತಿನಿತ್ಯ ಹಸುವಿನ ಸಗಣಿ ಮೇಲ್ವಿಚಾರಣೆ ಮತ್ತು ಪರೀಕ್ಷೆಯನ್ನು ನಡೆಸಿದೆ.

ಹಸುವಿನ ಹೊಟ್ಟೆಯಲ್ಲಿ ಚಿನ್ನ ಪತ್ತೆ

ಹಸುವಿನ ಹೊಟ್ಟೆಯಲ್ಲಿ ಚಿನ್ನ ಪತ್ತೆ

ಇಷ್ಟು ದಿನ ಕಾದರೂ ಚಿನ್ನದ ಸರ ಹೊರಬರದಿದ್ದಾಗ ಪಶುವೈದ್ಯರ ಸಹಾಯ ಪಡೆದಿದ್ದಾರೆ. ಮೊದಮೊದಲು ಸಂಪೂರ್ಣ ವಿಷಯ ತಿಳಿದು ವೈದ್ಯರೂ ಅಚ್ಚರಿಗೊಂಡರು. ಆದರೆ ಹಸುವನ್ನು ಮೆಟಲ್ ಡಿಟೆಕ್ಟರ್ ಮೂಲಕ ಪರೀಕ್ಷಿಸಿದಾಗ ಅದರ ಹೊಟ್ಟೆಯಲ್ಲಿ ಚೈನ್ ಪತ್ತೆಯಾಗಿದೆ. ಇದಾದ ನಂತರ ಹಲವು ತನಿಖೆಗಳಲ್ಲಿ ಹಸುವಿನ ಹೊಟ್ಟೆಯಲ್ಲಿ ಸರ ಎಲ್ಲೆಲ್ಲಿ ಸಿಕ್ಕಿಹಾಕಿಕೊಂಡಿದೆ ಎಂಬುದು ಪತ್ತೆಯಾಗಿದೆ. ನಂತರ ಕುಟುಂಬದವರ ಮನವಿ ಮೇರೆಗೆ ವೈದ್ಯರು ಹಸುವಿಗೆ ಶಸ್ತ್ರಚಿಕಿತ್ಸೆ ನಡೆಸಿ ಸರವನ್ನು ಹೊರತೆಗೆದಿದ್ದಾರೆ.

ಹಸುವಿನಿಂದ ಚಿನ್ನದ ಸರ ಪಡೆದ ಮಾಲೀಕ

ಹಸುವಿನಿಂದ ಚಿನ್ನದ ಸರ ಪಡೆದ ಮಾಲೀಕ

ಈ ಇಡೀ ಘಟನೆಯಲ್ಲಿ ಹಸುವಿನ ಆರೋಗ್ಯಕ್ಕೆ ಯಾವುದೇ ಹಾನಿಯಾಗಿಲ್ಲ. ಆದರೆ ಚಿನ್ನದ ಸರದ ತೂಕ 20 ಗ್ರಾಂನಿಂದ ಕೇವಲ 18 ಗ್ರಾಂಗೆ ಇಳಿದಿದೆ. ಸರದ ಒಂದು ಸಣ್ಣ ಭಾಗ ನಾಪತ್ತೆಯಾಗಿದೆ ಎಂದು ಹೇಳಲಾಗುತ್ತಿದೆ. ಒಳ್ಳೆಯ ವಿಷಯವೆಂದರೆ ಕುಟುಂಬವು ತಮ್ಮ ಅಮೂಲ್ಯವಾದ ಸರವನ್ನು ಮರಳಿ ಪಡೆದಿದೆ. ನಾವು ಮಾಡಿದ ತಪ್ಪಿನಿಂದ ಹಸು ಇಷ್ಟೆಲ್ಲ ಸಂಕಷ್ಟಕ್ಕೆ ಸಿಲುಕಿದೆ ಎಂದು ಕುಟುಂಬದವರು ಪಶ್ಚಾತ್ತಾಪ ಪಡುತ್ತಾರೆ. ಈ ಸುದ್ದಿ ಇಂಟರ್‌ನೆಟ್‌ನಲ್ಲಿ ಭಾರೀ ವೈರಲ್ ಆಗಿದೆ.

English summary
A very strange incident has come to light from Sirsi Taluk of Karnataka. Here a cow swallowed the precious gold chain of its own owner.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X