ವಿದ್ಯಾರ್ಥಿ ಹೂವು ಕಿತ್ತಿದ್ದಕ್ಕೆ ಹೀನಾಯವಾಗಿ ವಿಚಾರಣೆ ನಡೆಸಿದ ಶಿರಸಿ ದೇಗುಲದ ಸಿಬ್ಬಂದಿ

ಶಿರಸಿ, ಜನವರಿ 09: ಪ್ರವಾಸಿ ವಿದ್ಯಾರ್ಥಿಯೊಬ್ಬ ದೇವಸ್ಥಾನದಲ್ಲಿ ಹೂವು ಕಿತ್ತಿದ್ದಕ್ಕೆ ದೇಗುಲದ ಸಿಬ್ಬಂದಿ ಹೀನಾಯವಾಗಿ ಆತನನ್ನು ವಿಚಾರಣೆ ನಡೆಸಿರುವ ಘಟನೆ ಇಲ್ಲಿನ ಮಾರಿಕಾಂಬಾ ದೇವಸ್ಥಾನದಲ್ಲಿ ನಡೆದಿದೆ.

ಹಳಿಯಾಳ ಮೂಲದ ವಿದ್ಯಾರ್ಥಿಗಳ ತಂಡ ಹದಿನೈದು ದಿನಗಳ ಹಿಂದೆ ಪ್ರವಾಸಕ್ಕೆಂದು ಇಲ್ಲಿಗೆ ಬಂದಿತ್ತು. ಈ ವೇಳೆ ವಿದ್ಯಾರ್ಥಿಯೊಬ್ಬ ಮಾರಿಕಾಂಬಾ ದೇವಾಲಯದಲ್ಲಿ ಹೂವನ್ನು ಕಿತ್ತಿದ್ದಾನೆ.

ಈ ಸಂಬಂಧ ವಿಷಯ ತಿಳಿದ ದೇವಸ್ಥಾನದ ಸಿಬ್ಬಂದಿ, ಆತನನ್ನು ಹೀನಾಯವಾಗಿ ವಿಚಾರಣೆ ನಡೆಸಿದ್ದಾರೆ. ಪೊಲೀಸ್ ವಶಕ್ಕೆ ನೀಡುವುದಾಗಿ ಬೆದರಿಸಿದ್ದಾರೆ. ಜತೆಗೆ, ಬೆದರಿಸಿದ ವೀಡಿಯೊ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಬಿಟ್ಟಿದ್ದಾರೆ. ಇದಕ್ಕೆ ನೆಟ್ಟಿಗರಿಂದ ಖಂಡನೆ ವ್ಯಕ್ತವಾಗಿದೆ.

Sirsi Marikamba Temple staff have been harshly questioned to student

'ಸಿಬ್ಬಂದಿ ವಿದ್ಯಾರ್ಥಿಗೆ ವಿಚಾರಣೆ ನಡೆಸುತ್ತಿರುವ ವೀಡಿಯೋ ವೈರಲ್ ಆಗಿರುವುದು ನಮ್ಮ ಗಮನಕ್ಕೂ ಬಂದಿದೆ‌. ಈಗಾಗಲೇ ಸಿಬ್ಬಂದಿಯ ಮೇಲೆ ಕ್ರಮಕ್ಕೆ ಸೂಚಿಸಿದ್ದೇನೆ. ಮುಂದೆ ಈ ರೀತಿ ಆಗದಂತೆ ನೋಡಿಕೊಳ್ಳುತ್ತೇನೆ' ಎಂದು ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ವೆಂಕಟೇಶ ನಾಯ್ಕ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+