ಶಿರಸಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶಿರಸಿ- ಕುಮಟಾ ಹೆದ್ದಾರಿ 18 ತಿಂಗಳು ಬಂದ್! ಸಂಚಾರಕ್ಕೆ ನಿರ್ಬಂಧ

|
Google Oneindia Kannada News

ಶಿರಸಿ, ಅಕ್ಟೋಬರ್ 10: ಬಹುನಿರೀಕ್ಷಿತ ಶಿರಸಿ- ಕುಮಟಾ- ಬೇಲೇಕೇರಿ ರಾಷ್ಟ್ರೀಯ ಹೆದ್ದಾರಿ 766 ಇಇ ವಿಸ್ತರಣೆ ಕಾಮಗಾರಿ ನಡೆಯುವ ಕಾರಣ, ಅ.12ರಿಂದ 18 ತಿಂಗಳ ಕಾಲ ಶಿರಸಿಯಿಂದ ಕುಮಟಾ ಹಾಗೂ ರಾಷ್ಟ್ರೀಯ ಹೆದ್ದಾರಿ 66ರ ಬೇಲೇಕೇರಿ ಕ್ರಾಸ್ ನಿಂದ ಬೇಲೇಕೇರಿ ಬಂದರಿನವರೆಗೆ ರಸ್ತೆಯನ್ನು ಬಂದ್ ಮಾಡಲಾಗುತ್ತಿದೆ.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಈ ರಸ್ತೆಯನ್ನು 18 ತಿಂಗಳ ಕಾಲ ಬಂದ್ ಮಾಡಲು ಅನುಮತಿ ನೀಡುವಂತೆ ಜಿಲ್ಲಾಧಿಕಾರಿಗೆ ಪತ್ರ ಬರೆದು ಮನವಿ ಮಾಡಿತ್ತು. ಭಾರತ್ ಮಾಲಾ ಫೇಸ್- 1 ಅಡಿಯಲ್ಲಿ ಬೇಲೇಕೇರಿ ಬಂದರನ್ನು ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕಿಸುವ ಈ ಮಹತ್ವಾಕಾಂಕ್ಷಿ ಯೋಜನೆಯಲ್ಲಿ, ಬೇಲೇಕೇರಿ ಬಂದರು ಲಿಂಕ್ ರೋಡ್ ನಿಂದ 4.25 ಕಿ.ಮೀ. ಹಾಗೂ ಶಿರಸಿಯಿಂದ ಕುಮಟಾವರೆಗೆ 60 ಕಿ.ಮೀ. ರಸ್ತೆಯು ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೊಳ್ಳಲಿದ್ದು, ಅಂದಾಜು 370 ಕೋಟಿ ರೂ. ವೆಚ್ಚದಲ್ಲಿ ರಸ್ತೆ ಕಾಮಗಾರಿ ನಡೆಯಲಿದೆ.

 ಶಿವಮೊಗ್ಗ; ಬೈಪಾಸ್ ನಲ್ಲಿ ವಾಹನ ದಟ್ಟಣೆ ತಪ್ಪಿಸಲು ಮತ್ತೊಂದು ನೂತನ ಸೇತುವೆ ನಿರ್ಮಾಣ ಶಿವಮೊಗ್ಗ; ಬೈಪಾಸ್ ನಲ್ಲಿ ವಾಹನ ದಟ್ಟಣೆ ತಪ್ಪಿಸಲು ಮತ್ತೊಂದು ನೂತನ ಸೇತುವೆ ನಿರ್ಮಾಣ

 ಈ ತಿಂಗಳಲ್ಲೇ ಕಾಮಗಾರಿ ಪ್ರಾರಂಭ

ಈ ತಿಂಗಳಲ್ಲೇ ಕಾಮಗಾರಿ ಪ್ರಾರಂಭ

ಕಾಮಗಾರಿ ಈ ತಿಂಗಳಲ್ಲೇ ಪ್ರಾರಂಭವಾಗಲಿದ್ದು, ಕಾಮಗಾರಿ ಸಂಪೂರ್ಣವಾಗಿ ಮುಗಿಯುವ ತನಕ ರಸ್ತೆಯನ್ನು ಬಂದ್ ಮಾಡಿ, ಪರ್ಯಾಯ ರಸ್ತೆ ಮಾರ್ಗ ಸೂಚಿಸಿ ಕಾಮಗಾರಿ ನಡೆಸಲು ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್ ಆದೇಶಿಸಿದ್ದಾರೆ.

 ಪರ್ಯಾಯ ಮಾರ್ಗ ಯಾವುದು?

ಪರ್ಯಾಯ ಮಾರ್ಗ ಯಾವುದು?

ಶಿರಸಿ- ಕುಮಟಾ ರಸ್ತೆಯನ್ನು ಬಂದ್ ಮಾಡಿರುವ ಕಾರಣ ಮುಖ್ಯವಾಗಿ ಕುಮಟಾ ಒಂದೇ ಅಲ್ಲದೇ, ಕಾರವಾರ, ಅಂಕೋಲಾ ಹೋಗುವ ವಾಹನಗಳಿಗೂ ತೊಂದರೆ ಆಗುತ್ತದೆ. ಅವುಗಳಿಗೆ ಪರ್ಯಾಯ ಮಾರ್ಗವಾಗಿ ಕಾರವಾರ, ಅಂಕೋಲಾ ಹೋಗುವವರಿಗೆ ಯಲ್ಲಾಪುರದ ಮೇಲೆ ಎನ್‌ಎಚ್ 63ರಲ್ಲಿ ಸಂಚರಿಸಬಹುದಾಗಿದೆ.
ಹೊನ್ನಾವರ ಭಾಗದಿಂದ ಮಾವಿನಗುಂಡಿ ಮೂಲಕ ಸಾಗಿ ಸಿದ್ದಾಪುರ ತಲುಪಿ, ಅಲ್ಲಿಂದ ಶಿರಸಿಗೆ ತಲುಪಬಹುದಾಗಿದೆ. ಶಿರಸಿಯಿಂದ ಕುಮಟಾ ಹೋಗುವವರು ಸಿದ್ದಾಪುರದ ಮೇಲೆ ಬಡಾಳ್ ಮೂಲಕ ಹೋಗುವಂತೆ ಪರ್ಯಾಯ ಮಾರ್ಗವನ್ನು ಸೂಚಿಸಲಾಗಿದ್ದು, ಇದೊಂದು ಮಾರ್ಗದಲ್ಲಿ ಲಘು ವಾಹನಗಳಿಗೆ ಮಾತ್ರ ಅವಕಾಶ ನೀಡಲಾಗಿದೆ.

ಬಸ್ ಸಂಚಾರಕ್ಕೆ ಸಮಸ್ಯೆ

ಬಸ್ ಸಂಚಾರಕ್ಕೆ ಸಮಸ್ಯೆ

ಶಿರಸಿಯಿಂದ ಕುಮಟಾ, ಕಾರವಾರ ಮಾರ್ಗದಲ್ಲಿ ನಿತ್ಯ 183 ಬಸ್ ಗಳು ಸಂಚರಿಸುತ್ತಿವೆ. ದೇವನಳ್ಳಿ- ವಡ್ಡಿ ಮಾರ್ಗವಾಗಿ ಬಸ್ ಬಿಟ್ಟರೆ ಅನುಕೂಲ ಆಗಲಿದೆ. ಆದರೆ, ಗ್ರಾಮೀಣ ಸಾರಿಗೆಗೆ ಸ್ವಲ್ಪ ಸಮಸ್ಯೆ ಉಂಟಾಗಲಿದೆ. ಶಿರಸಿ ಕಾನಸೂರು ಮಾರ್ಗವಾಗಿ ಹೇರೂರು, ಗೊಳಿಮಕ್ಕಿ, ಹೆಗ್ಗರಣಿ, ಅಮೀನಳ್ಳಿ, ಶಿರಸಿ- ಬಂಡಲ, ಶಿರಸಿ ಹೆಗಡೆಕಟ್ಟಾ, ಮಂಜುಗುಣಿ ಮಾರ್ಗಗಳ ಮೂಲಕ ಬಸ್ ಸಂಚಾರ ಕೈಗೊಂಡರೆ ಸಮಸ್ಯೆಗೆ ಪರಿಹಾರ ಸಾಧ್ಯವಾಗಲಿದೆ ಎನ್ನುತ್ತಾರೆ ಸಾರಿಗೆ ಶಿರಸಿ ಘಟಕದ ವ್ಯವಸ್ಥಾಪಕ ಸಿದ್ದು ಕಂಕನವಾಡಿ.

ರಂಜದಕಟ್ಟೆ ಸೇತುವೆ ಸಿದ್ಧ; ಉಡುಪಿ-ಮಂಗಳೂರಿನ ಪ್ರಯಾಣಿಕರು ನಿರಾಳರಂಜದಕಟ್ಟೆ ಸೇತುವೆ ಸಿದ್ಧ; ಉಡುಪಿ-ಮಂಗಳೂರಿನ ಪ್ರಯಾಣಿಕರು ನಿರಾಳ

 ಕಾಮಗಾರಿಯಿಂದ ಇಂಟರ್ನೆಟ್ ಸೌಲಭ್ಯಕ್ಕೂ ತೊಡಕು

ಕಾಮಗಾರಿಯಿಂದ ಇಂಟರ್ನೆಟ್ ಸೌಲಭ್ಯಕ್ಕೂ ತೊಡಕು

ಇನ್ನು, ಕಾಮಗಾರಿ ನಡೆಯುವ ರಸ್ತೆಯುದ್ದಕ್ಕೂ 4- 5 ಗ್ರಾಮ ಪಂಚಾಯಿತಿಗಳು ಸಿಗುತ್ತವೆ. ಕಾಮಗಾರಿಯಿಂದ ನೀರಿನ ಕಾಮಗಾರಿ ಹಾಗೂ ಇಂಟರ್ನೆಟ್ ಸೌಲಭ್ಯಕ್ಕೆ ತೊಡಕಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

English summary
Due to the road widening work on Sirsi-Kumata-Belekeri National Highway 766 EE, road will be closed till 18 months and vehicles banned,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X