ಚುನಾವಣಾ ರಾಜಕೀಯ ನಿವೃತ್ತಿಗೆ ಶಶಿಭೂಷಣ್ ಹೆಗಡೆ ನಿರ್ಧಾರ
ಶಿರಸಿ, ಮೇ 27: ನಿರಂತರ ಸೋಲಿನಿಂದ ಮುಖಭಂಗ ಅನುಭವಿಸಿರುವ ಜೆಡಿಎಸ್ ನ ಶಶಿಭೂಷಣ್ ಹೆಗಡೆ ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಲು ನಿರ್ಧರಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಜೆಡಿಎಸ್ ಅಭ್ಯರ್ಥಿಯಾಗಿದ್ದ ಶಶಿಭೂಷಣ ಹೆಗಡೆ ಬಿಜೆಪಿಯ ವಿಶ್ವೇಶ್ವರ ಹೆಗಡೆ ಅವರ ಪ್ರತಿಸ್ಪರ್ಧಿಯಾಗಿ ನಿಂತು ಸೋಲನುಭವಿಸಿದ್ದರು.

"ಈ ಬಾರಿ ಚುನಾವಣೆಯಲ್ಲಿ ಜಯಗಳಿಸುವ ವಿಶ್ವಾಸವಿತ್ತು. ಆದರೆ ಜನತೆ ನನ್ನನ್ನು ಏಕೆ ಗೆಲ್ಲಿಸಲಿಲ್ಲ ಎಂಬುದು ಯಕ್ಷಪ್ರಶ್ನೆಯಾಗಿದೆ. ಜನಾದೇಶಕ್ಕೆ ತಲೆಬಾಗುತ್ತೇನೆ. ಚುನಾವಣಾ ರಾಜಕೀಯದಿಂದ ನಾನು ದೂರವಿರಲು ನಿರ್ಧರಿಸಿದ್ದೇನೆ. ಈ ಕುರಿತು ಪಕ್ಷಾಧ್ಯಕ್ಷ ಕುಮಾರಸ್ವಾಮಿ ಅವರೊಂದಿಗೆ ಮಾತುಕತೆ ನಡೆಸುತ್ತೇನೆ" ಎಂದು ಶಶಿಭೂಷಣ್ ಹೆಗಡೆ ಹೇಳಿದ್ದಾರೆ.












Click it and Unblock the Notifications