ಅಂಕೋಲಾದ ಗದ್ದೆಗೆ ಇಳಿದು ನಾಟಿ ಮಾಡಿದ ಯಡಿಯೂರಪ್ಪ

Written By:
Subscribe to Oneindia Kannada

ಶಿರಸಿ, ಆಗಸ್ಟ್, 19: ಬಿಜೆಪಿ ರಾಜ್ಯಾಧ್ಯಕ್ಷ, ಮಾಜಿ ಸಿಎಂ ಸಂಸದ ಬಿ ಎಸ್ ಯಡಿಯೂರಪ್ಪ ಹೊಲಕ್ಕೆ ಇಳಿದು ನಾಟಿ ಮಾಡಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದ "ಕೃಷಿ ಹಬ್ಬ"ದಲ್ಲಿ ಪಾಲ್ಗೊಂಡ ಬಿಎಸ್ ವೈ ಪಕ್ಕಾ ರೈತರ ಶೈಲಿಯಲ್ಲಿ ತಲೆಗೆ ಮುಂಡಾಸು ಸುತ್ತಿಕೊಂಡು ನಾಟಿ ಮಾಡಿದ್ದಾರೆ.

ಬಿಎಸ್ ವೈಗೆ ಉತ್ತರ ಕನ್ನಡ ಸಂಸದ ಅನಂತ ಕುಮಾರ ಹೆಗಡೆ ಸಾಥ್ ನೀಡಿದರು. ಅಂಕೋಲಾ ತಾಲೂಕಿನ , ಬಾಸಗೋಡ, ಸರಯೂಬನದಲ್ಲಿ ಪಹರಿ ವೇದಿಕೆಯ 'ಕೃಷಿ ಹಬ್ಬ' ಕ್ಕೆ ಗದ್ದೆ ನಾಟಿ ಮಾಡುವ ಮೂಲಕ ಬಿಎಸ್ ವೈ ಚಾಲನೆ ನೀಡಿದರು.[ಕೇಂದ್ರ ನಾಯಕರಿಗೆ ಬಿಎಸ್ವೈ ರವಾನಿಸಿದ ಎಚ್ಚರಿಕೆ ಏನು?]

ಇದಾದ ಮೇಲೆ "ಕ್ವಿಟ್ ಇಂಡಿಯ" ಚಳವಳಿಯ 75ನೇ ವರ್ಷದ ನೆನಪಿಗೆ, ಧ್ವಜ ಸನ್ಮಾನ ಹಾಗೂ ಪಕ್ಷಸೇರ್ಪಡೆ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಉತ್ತರ ಕನ್ನಡ ಜಿಲ್ಲೆ ಮತ್ತು ಅಂಕೋಲಾ ತಾಲೂಕಿನ ಅನೇಕರು ಇದೇ ವೇಳೆ ಬಿಜೆಪಿ ಸೇರ್ಪಡೆಯಾದರು. ಗದ್ದೆ ನಾಟಿ ಮಾಡಿದ ಬಿಎಸ್ ವೈ ಚಿತ್ರಗಳನ್ನು ಮುಂದೆ ನೋಡಿಕೊಂಡು ಬನ್ನಿ...

ಗದ್ದೆಗಿಳಿದ ಮಾಜಿ ಸಿಎಂ

ಗದ್ದೆಗಿಳಿದ ಮಾಜಿ ಸಿಎಂ

ಬೀರು ಬಿಸಿಲಿನಲ್ಲಿ ಗದ್ದೆಗಿಳಿದ ಬಿಎಸ್ ವೈ ಗದ್ದೆ ನಾಟಿ ಮಾಡಿದರು.

ರೈತರಿಗೆ ಸಲಹೆ

ರೈತರಿಗೆ ಸಲಹೆ

ಗದ್ದೆ ನಾಟಿ ಬಳಿಕ ಯಡಿಯೂರಪ್ಪ ರೈತರಿಗೆ ಕೃಷಿ ಸಲಹೆಗಳನ್ನು ನೀಡಿದ್ದು ವಿಶೇಷ.

ಊಳುವಾ ಯೋಗಿಯ ನೋಡಲ್ಲಿ

ಊಳುವಾ ಯೋಗಿಯ ನೋಡಲ್ಲಿ

ಬಿಎಸ್ ಯಡಿಯೂರಪ್ಪ ಅವರೊಂದಿಗೆ ಸ್ಥಳೀಯ ಬಿಜೆಪಿ ಮುಖಂಡರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ರಾಖಿ ಹಬ್ಬ

ರಾಖಿ ಹಬ್ಬ

ಉತ್ತರ ಕನ್ನಡ ಜಿಲ್ಲೆಯ ಹಾಲಕ್ಕಿ ಗೌಡ ಸಮುದಾಯದ ಮಹಿಳೆಯರು ಬಿ ಎಸ್ ವೈಗೆ ರಾಖಿ ಕಟ್ಟಿ ಹಬ್ಬದ ಶುಭಾಶಯ ಹೇಳಿದರು.

ತ್ರಿವರ್ಣ ಧ್ವಜಕ್ಕೆ ನಮನ

ತ್ರಿವರ್ಣ ಧ್ವಜಕ್ಕೆ ನಮನ

ಕ್ವೀಟ್ ಇಂಡಿಯಾ ಚಳವಳಿಯ 75ನೇ ವರ್ಷದ ನೆನಪಿಗೆ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಬಿಎಸ್ ವೈ ಅವರಿಂದ ತ್ರಿವರ್ಣ ಧ್ವಜಕ್ಕೆ ವಂದನೆ.

ಪಕ್ಷಕ್ಕೆ ಸೇರ್ಪಡೆ

ಪಕ್ಷಕ್ಕೆ ಸೇರ್ಪಡೆ

ಉತ್ತರ ಕನ್ನಡ ಜಿಲ್ಲೆಯ ವಿವಿಧ ನಾಯಕರನ್ನು ಬಿಜೆಪಿಗೆ ಬರಮಾಡಿಕೊಂಡ ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ.

ಗೋಕರ್ಣದಲ್ಲಿ ಪೂಜೆ

ಗೋಕರ್ಣದಲ್ಲಿ ಪೂಜೆ

ಗೋಕರ್ಣದ ಮಹಾಬಲೇಶ್ವರ ದೇವಾಲಯಕ್ಕೆ ಕೇಂದ್ರ ಸಚಿವ ರೈಲ್ವೆ ಸಚಿವ ಸುರೇಶ್ ಪ್ರಭು ಭೇಟಿ ನೀಡಿ ಪೂಜೆ ಮಾಡಿದರು. ಬಿಎಸ್ ವೈ ಹಾಜರಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Sirsi: Former CM, Karnataka BJP president BS Yeddyurappa participated in 'Krashi Habba' at Ankola Taluk , Uttara Kannada District on August 19, Friday.
Please Wait while comments are loading...