ವಿಡಿಯೋ: ಟೈಗರ್ ಜಿಂದಾ ಹೈ ಎಂದು ಅಮರ್ ಸಿಂಗ್ ಹೇಳಿದ್ದೇಕೆ?

ಸಿಂಗಪುರ, ಮಾರ್ಚ್ 03: ಸಮಾಜವಾದಿ ಪಕ್ಷದ ಮಾಜಿ ನಾಯಕ ಅಮರ್ ಸಿಂಗ್ ಅವರು ತಮ್ಮ ಸಾವಿನ ಬಗ್ಗೆ ಹಬ್ಬಿದ್ದ ಗಾಳಿಸುದ್ದಿಗೆ ಸ್ಪಷ್ಟಣೆ ನೀಡಿದ್ದಾರೆ. ನನ್ನ ಹಿತೈಷಿಗಳಿಗೆ ಈ ಸುದ್ದಿ ನಿಜವಾಗಬೇಕು ಎನಿಸಿದೆ, ಆದರೆ ನಾನು ಜೀವಂತವಿದ್ದೇನೆ, ಹುರುಪಿನಿಂದ ಇದ್ದೇನೆ ಎಂಡು ಟ್ವಿಟ್ಟರ್ ಮೂಲಕ ವಿಡಿಯೋ ಹಂಚಿಕೊಂಡಿದ್ದಾರೆ.

Recommended Video

      ತಮ್ಮ ಸಾವಿನ ಸುದ್ದಿಗೆ ಪ್ರತಿಕ್ರಿಯೆ ನೀಡಿದ ಅಮರ್ ಸಿಂಗ್ | Amar Singh | Oneindia kannada

      ಹಿರಿಯ ರಾಜಕಾರಣಿ ಅಮರ್ ಸಿಂಗ್ ಅವರು ಸದ್ಯ ಸಿಂಗಪುರದಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದು, ವೈದ್ಯರ ಚಿಕಿತ್ಸೆಯಿಂದಾಗಿ 10 ವರ್ಷ ವಯಸ್ಸಿನ ಮಗುವಿನಂಥ ಚುರುಕಾದ ಮೆದುಳು ಹೊಂದಿದ್ದೇನೆ ಎಂದಿದ್ದಾರೆ.

      Viral Video: Amar Singh tweeted‘Tiger Zinda Hai’: Dismisses Rumours of His Death

      ಟ್ವಿಟ್ಟರ್ ನಲ್ಲಿ ಏನು ಹೇಳಿಕೊಂಡಿದ್ದಾರೆ?:
      "ನಾನು ಅಮರ್ ಸಿಂಗ್, ಸಿಂಗಪುರದಿಂದ ಮಾತನಾಡುತ್ತಿದ್ದೇನೆ, ನನ್ನ ಗೆಳೆಯರೇ, ಹಿತೈಷಿಗಳೆ, ನಾನು ಮೃತರಾಗಿರುವ ಸುದ್ದಿ ಕೇಳಿರಬಹುದು, ಆದರೆ ನಾನು ಜೀವಂತವಾಗಿದ್ದು, ಗಾಳಿಸುದ್ದಿ ನಂಬಬೇಡಿ" ಎಂಬರ್ಥದಲ್ಲಿ ವಿಡಿಯೋದಲ್ಲಿ ಹೇಳಿದ್ದಾರೆ.

      ನನ್ನ ಶಸ್ತ್ರಚಿಕಿತ್ಸೆಯಾದ ನಂತರ ನಾನು ಹಿಂತಿರುಗುತ್ತೇನೆ, ನಾನು ಇಲ್ಲಿ ತನಕ ಹೇಗೆ ಜೀವಿಸಿದ್ದೆನೋ ಹಾಗೆ ಜೀವಿಸುವೆ, ವಿಮಾನದಿಂದ ಬಿದ್ದ ಬಳಿಕ 13 ದಿನಗಳ ಕಾಲ ಜೀವನ್ಮರಣ ಹೋರಾಟ ನಡೆಸಿದ್ದೇನೆ ಎಂದಿದ್ದಾರೆ.

      ಬಾಲಿವುಡ್ ನಟ ಅಮಿತಾಬ್ ಬಚ್ಚನ್ ಹಾಗೂ ಕುಟುಂಬದ ಜೊತೆ ನಡೆದುಕೊಂಡ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದ ಅಮರ್ ಸಿಂಗ್ ಅವರು ತಮ್ಮ ಅಧಿಕೃತ ಫೇಸ್ಬುಕ್ ಪುಟದಲ್ಲಿ ವಿಡಿಯೋ ಮಾಡಿ ಹಾಕಿದ್ದರು.

      ಅಮರ್ ಸಿಂಗ್, ಬಚ್ಚನ್ ಕುಟುಂಬ ಹಾಗೂ ಅನಿಲ್ ಅಂಬಾನಿ ಅನ್ಯೋನ್ಯವಾಗಿ 2016ರ ಸುಮಾರಿಗೆ ಕಾಣಿಸಿಕೊಂಡಿದ್ದರು. ನಂತರ ರಾಜಕೀಯ ಕಾರಣಕ್ಕಾಗಿ ಬಚ್ಚನ್ ಕುಟುಂಬದ ಜೊತೆ ವೈಮನಸ್ಯ ಬೆಳೆಸಿಕೊಂಡಿದ್ದು ಈಗ ಇತಿಹಾಸ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+