• search
  • Live TV
ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬಿ. ಎಸ್. ಯಡಿಯೂರಪ್ಪ ಸಂಪುಟ ; ಶಿವಮೊಗ್ಗದಿಂದ ಯಾರು ಸಚಿವರು?

|

ಶಿವಮೊಗ್ಗ, ಜುಲೈ 26 : ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ರಚನೆಗೆ ವೇದಿಕೆ ಸಿದ್ಧವಾಗಿದೆ. ಬಿ. ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ. ತವರು ಜಿಲ್ಲೆ ಶಿವಮೊಗ್ಗದಲ್ಲಿ ಸಂಭ್ರಮ ಮುಗಿಲು ಮುಟ್ಟಿದೆ.

ಶಿವಮೊಗ್ಗ ಜಿಲ್ಲೆ ಬಿಜೆಪಿಯ ಭದ್ರಕೋಟೆ. ಯಡಿಯೂರಪ್ಪ ಮುಖ್ಯಮಂತ್ರಿಯಾದ ಬಳಿಕ ಅವರ ಸಂಪುಟದಲ್ಲಿ ತವರು ಜಿಲ್ಲೆಯ ಯಾವ ಶಾಸಕರು ಸ್ಥಾನ ಪಡೆಯಲಿದ್ದಾರೆ? ಎಂಬುದು ಈಗ ಕುತೂಹಲಕ್ಕೆ ಕಾರಣವಾಗಿದೆ.

ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ರಚನೆ ; ಸಿದ್ದರಾಮಯ್ಯ ಹೇಳಿದ್ದೇನು?ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ರಚನೆ ; ಸಿದ್ದರಾಮಯ್ಯ ಹೇಳಿದ್ದೇನು?

ಜಿಲ್ಲೆಯಲ್ಲಿರುವ 7 ವಿಧಾನಸಭಾ ಕ್ಷೇತ್ರಗಳ ಪೈಕಿ 6 ಕ್ಷೇತ್ರಗಳಲ್ಲಿ ಬಿಜೆಪಿಯ ಶಾಸಕರಿದ್ದಾರೆ. ಇಬ್ಬರು ವಿಧಾನ ಪರಿಷತ್ ಸದಸ್ಯರು ಇದ್ದಾರೆ. ಇವರಲ್ಲಿ ಯಾರು-ಯಾರು ಸಂಪುಟ ಸೇರಲಿದ್ದಾರೆ ಎಂಬ ಲೆಕ್ಕಾಚಾರ ಆರಂಭವಾಗಿದೆ.

3 ಶಾಸಕರು ಅನರ್ಹ, ಬಿಎಸ್ವೈ ಸಿಎಂ, ಸದನದ ಬಲಾಬಲ?3 ಶಾಸಕರು ಅನರ್ಹ, ಬಿಎಸ್ವೈ ಸಿಎಂ, ಸದನದ ಬಲಾಬಲ?

ಕೆ. ಎಸ್. ಈಶ್ವರಪ್ಪ, ಕುಮಾರ್ ಬಂಗಾರಪ್ಪ, ಹರತಾಳು ಹಾಲಪ್ಪ, ಆರಗ ಜ್ಞಾನೇಂದ್ರ ಪಕ್ಷದಿಂದ ಆಯ್ಕೆಯಾಗಿರುವ ಹಿರಿಯ ಶಾಸಕರು. ಆಯನೂರು ಮಂಜುನಾಥ್, ರುದ್ರೇಗೌಡ ವಿಧಾನ ಪರಿಷತ್ ಸದಸ್ಯರಾಗಿದ್ದಾರೆ. ಜಿಲ್ಲೆಗೆ ಎಷ್ಟು ಸಚಿವ ಸ್ಥಾನ ಸಿಗಲಿದೆ ಎಂಬುದು ಈಗ ಎದ್ದಿರುವ ಪ್ರಶ್ನೆ....

76ರ ಬಿಎಸ್ವೈ ಸಿಎಂ ಆಗಲು ಅನುಮತಿ ನೀಡಿ ನಿಯಮ ಗಾಳಿಗೆ ತೂರಿತೆ ಬಿಜೆಪಿ?76ರ ಬಿಎಸ್ವೈ ಸಿಎಂ ಆಗಲು ಅನುಮತಿ ನೀಡಿ ನಿಯಮ ಗಾಳಿಗೆ ತೂರಿತೆ ಬಿಜೆಪಿ?

ಜಿಲ್ಲೆಯ ಬಿಜೆಪಿ ಶಾಸಕರ ಪಟ್ಟಿ

ಜಿಲ್ಲೆಯ ಬಿಜೆಪಿ ಶಾಸಕರ ಪಟ್ಟಿ

* ಸಾಗರ - ಹರತಾಳು ಹಾಲಪ್ಪ
* ಶಿವಮೊಗ್ಗ ನಗರ - ಕೆ. ಎಸ್. ಈಶ್ವರಪ್ಪ
* ತೀರ್ಥಹಳ್ಳಿ - ಆರಗ ಜ್ಞಾನೇಂದ್ರ
* ಸೊರಬ - ಕುಮಾರ್ ಬಂಗಾರಪ್ಪ
* ಶಿವಮೊಗ್ಗ ಗ್ರಾಮಾಂತರ - ಅಶೋಕ್ ನಾಯ್ಕ್
* ಶಿಕಾರಿಪುರ - ಬಿ. ಎಸ್. ಯಡಿಯೂರಪ್ಪ
* ಆಯನೂರು ಮಂಜುನಾಥ್ - ಪರಿಷತ್ ಸದಸ್ಯ
* ರುದ್ರೇಗೌಡ - ಪರಿಷತ್ ಸದಸ್ಯ

ಕೆ.ಎಸ್.ಈಶ್ವರಪ್ಪಗೆ ಸಚಿವ ಸ್ಥಾನ ಖಚಿತ

ಕೆ.ಎಸ್.ಈಶ್ವರಪ್ಪಗೆ ಸಚಿವ ಸ್ಥಾನ ಖಚಿತ

ಶಿವಮೊಗ್ಗ ನಗರ ಕ್ಷೇತ್ರದ ಬಿಜೆಪಿ ಶಾಸಕ, ಮಾಜಿ ಉಪ ಮುಖ್ಯಮಂತ್ರಿ ಕೆ. ಎಸ್. ಈಶ್ವರಪ್ಪ ಯಡಿಯೂರಪ್ಪ ಸಂಪುಟ ಸೇರುವುದು ಖಚಿತ. ಇಂಧನ, ಜಲಸಂಪನ್ಮೂಲ ಸಚಿವರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ. ಶಿವಮೊಗ್ಗದಿಂದ ಸಚಿವ ಸ್ಥಾನ ಪಡೆಯುವ ಶಾಸಕರ ಪಟ್ಟಿಯಲ್ಲಿ ಈಶ್ವರಪ್ಪ ಮೊದಲ ಸ್ಥಾನದಲ್ಲಿದ್ದಾರೆ.

ಶಾಸಕ ಆರಗ ಜ್ಞಾನೇಂದ್ರ

ಶಾಸಕ ಆರಗ ಜ್ಞಾನೇಂದ್ರ

ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಎಂದೂ ಪಕ್ಷ ನಿಷ್ಠೆ ಬದಲಿಸಿದವರಲ್ಲ. ಹಿಂದೆಯೇ ಆರಗ ಜ್ಞಾನೇಂದ್ರ ಸಚಿವರಾಗಬೇಕಿತ್ತು. ಆದರೆ, ಹಿರಿಯರು ಎಂಬ ಕಾರಣಕ್ಕೆ ಸಮ್ಮಿಶ್ರ ಸರ್ಕಾರದಲ್ಲಿ ಡಿ. ಎಚ್. ಶಂಕರಮೂರ್ತಿ, ಕೆ. ಎಸ್. ಈಶ್ವರಪ್ಪ ಸಚಿವ ಸ್ಥಾನ ಪಡೆದರು. ಈ ಬಾರಿ ಜ್ಞಾನೇಂದ್ರ ಹೆಸರು ಮುಂಚೂಣಿಯಲ್ಲಿ ಕೇಳಿ ಬರುತ್ತಿದೆ.

ಕುಮಾರ್ ಬಂಗಾರಪ್ಪ

ಕುಮಾರ್ ಬಂಗಾರಪ್ಪ

ಕಾಂಗ್ರೆಸ್‌ನಲ್ಲಿದ್ದ ಕುಮಾರ್ ಬಂಗಾರಪ್ಪರನ್ನು ಬಿಜೆಪಿಗೆ ಕರೆ ತಂದಿದ್ದೆ ಯಡಿಯೂರಪ್ಪ. 2018ರ ಚುನಾವಣೆಯಲ್ಲಿ ಅವರು ಸೊರಬ ಕ್ಷೇತ್ರದಲ್ಲಿ ಗೆದ್ದಿದ್ದಾರೆ. ಎಸ್. ಎಂ. ಕೃಷ್ಣ ಅವರ ಅವಧಿಯಲ್ಲಿ ಸಚಿವರಾಗಿದ್ದ ಕುಮಾರ್ ಬಂಗಾರಪ್ಪ ಈ ಬಾರಿಯೂ ಸಚಿವರಾಗುವ ನಿರೀಕ್ಷೆ ಇದೆ.

ಹರತಾಳು ಹಾಲಪಪ್ಪಗೆ ಸಚಿವ ಸ್ಥಾನ?

ಹರತಾಳು ಹಾಲಪಪ್ಪಗೆ ಸಚಿವ ಸ್ಥಾನ?

ಸಾಗರ ಕ್ಷೇತ್ರದ ಶಾಸಕ ಹರತಾಳು ಹಾಲಪ್ಪ ಯಡಿಯೂರಪ್ಪ ಆಪ್ತರಲ್ಲಿ ಒಬ್ಬರು. ಹಿಂದೆ ಸಹ ಸಚಿವರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ. ಈ ಬಾರಿಯೂ ಅವರ ಹೆಸರು ಕೇಳಿಬರುತ್ತಿದೆ. ಹಾಲಪ್ಪ, ಕುಮಾರ್ ಬಂಗಾರಪ್ಪ ಇಬ್ಬರಲ್ಲಿ ಒಬ್ಬರು ಸಚಿವರಾಗುವುದು ಖಂಡಿತ.

ಆಯನೂರು ಮಂಜುನಾಥ್

ಆಯನೂರು ಮಂಜುನಾಥ್

ಮಾಜಿ ಸಂಸದ ಆಯನೂರು ಮಂಜುನಾಥ್ ಮತ್ತು ರುದ್ರೇಗೌಡ ವಿಧಾನ ಪರಿಷತ್ ಸದಸ್ಯರು. ಇಬ್ಬರೂ ಸಹ ಯಡಿಯೂರಪ್ಪ ಆಪ್ತರು. ಈ ಇಬ್ಬರಲ್ಲಿ ಯಾರು ಸಚಿವರಾಗಬಹುದು? ಎಂಬ ಚರ್ಚೆಗಳು ನಡೆದಿವೆ.

English summary
6 BJP MLAs and 2 MLC in Shivamogga district. Who will join Chief Minister B.S.Yeddyurappa cabinet from home town. Yeddyurappa to take oath on Friday, 26, 2019 evening.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X