ಮೈತ್ರಿ ನಿರ್ದೇಶಕರಿಂದ 3 ದಿನಗಳ ಅಭಿನಯ ಕಾರ್ಯಾಗಾರ
ಶಿವಮೊಗ್ಗ, ಆಗಸ್ಟ್ 30: ಮೈತ್ರಿ, ಜಟ್ಟ ಚಿತ್ರಗಳ ನಿರ್ದೇಶಕ ಬಿಎಂ ಗಿರಿರಾಜ್ ಅವರು ಮೂರು ದಿನಗಳ ಅಭಿನಯ ಕಾರ್ಯಾಗಾರವನ್ನು ಕುಪ್ಪಳಿಯಲ್ಲಿ ಹಮ್ಮಿಕೊಂಡಿದ್ದಾರೆ. ಈ ಬಗ್ಗೆ ಮಾಹಿತಿವುಳ್ಳ ಪತ್ರ ಕಳಿಸಿದ್ದಾರೆ. ಮುಂದೆ ಓದಿ...
ಗೆಳೆಯ, ಗೆಳತಿಯರೆ,
ವಿಷಯ ಸರಳ
ಮತ್ತೆ ಅಭಿನಯಕ್ಕೆ ಸಂಬಂಧಿಸಿದ ಶಿಬಿರ ಏರ್ಪಡಿಸಿದ್ದೇವೆ.
ವಿಶೇಷ ಎಂದರೆ ಈ ಬಾರಿಯ ಶಿಬಿರ ರಸರುಷಿ ಕುವೆಂಪುರವರನ್ನು ರೂಪಿಸಿದ ಕುಪ್ಪಳ್ಳಿಯಲ್ಲಿ!
ಮೂರುದಿನಗಳ ಕಾಲ ಊಟ, ವಸತಿ ಹಾಗೂ ಮಲೆನಾಡಿನ ತಂಪಿನೊಂದಿಗೆ ಅಭಿನಯ ಕಲಿಯೋರಂತೆ ಬನ್ನಿ!!

ಶಿಬಿರದ ನಿರ್ದೇಶಕರು:
ಜಟ್ಟ, ಮೈತ್ರಿ, ಅಮರಾವತಿ ಚಲನಚಿತ್ರಗಳ ಖ್ಯಾತಿಯ ಹಾಗೂ ಎರಡು ಬಾರಿ ರಾಜ್ಯಪ್ರಶಸ್ತಿ ವಿಜೇತ ನಿರ್ದೇಶಕ ಬಿ.ಎಂ ಗಿರಿರಾಜ್ ಮತ್ತು ಇವರ ತಂಡ ನಿಮ್ಮೊಂದಿಗಿರುತ್ತದೆ.
ಶಿಬಿರದ ದಿನಾಂಕ:
ಸೆಪ್ಟೆಂಬರ್ 09, 10 ಮತ್ತು 11ರಂದು (ಶುಕ್ರವಾರ, ಶನಿವಾರ, ಭಾನುವಾರ) ಮೂರು ದಿನಗಳ ಪೂರ್ಣಾವಧಿ ತೀವ್ರ ಅಭಿನಯ ಕಾರ್ಯಾಗಾರ
ಸ್ಥಳ:
ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ, ಕುಪ್ಪಳ್ಳಿ,
ತೀರ್ಥಹಳ್ಳಿ ತಾಲ್ಲೂಕು, ಶಿವಮೊಗ್ಗ ಜಿಲ್ಲೆ
ಅಭಿನಯ ಆಸಕ್ತರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ
ಹೆಚ್ಚಿನ ಮಾಹಿತಿಗಳಿಗಾಗಿ ಅಥವಾ ನಿಮ್ಮ ಪ್ರವೇಶ ಕಾಯ್ದಿರಿಸಲು ಸಂಪರ್ಕಿಸಿ
ಕೆ.ಎಸ್ ಪರಮೇಶ್ವರ 90080 99686
ಶ್ಯಾಮ್ ಸುಂದರ್ : 96201 50475
ಸವಿತ : 81475 24966
ಸ್ವರೂಪ್: 99016 47817
ಮಿಂಚಂಚೆ: [email protected]
ಮುಖಪುಸ್ತಕ: kalamadhyam
ವಾಟ್ಸ್‍ಅಪ್: 9008450040
ಕಾರ್ಯಾಗಾರದ ಅಂತ್ಯದಲ್ಲಿ ಪ್ರಮಾಣಪತ್ರ ನೀಡಲಾಗುವುದು. ಆಸಕ್ತರು ಇಂದೇ ತಮ್ಮ ಹೆಸರು ನೊಂದಾಯಿಸಿಕೊಳ್ಳಬಹುದು. (ಒನ್ಇಂಡಿಯಾ ಸುದ್ದಿ)












Click it and Unblock the Notifications