ಭದ್ರಾವತಿಯ ವಿಐಎಸ್‌ಎಲ್‌ಗೆ 150 ಎಕರೆ ಗಣಿ ಮಂಜೂರು

ಶಿವಮೊಗ್ಗ, ಫೆಬ್ರವರಿ 28 : ಭದ್ರಾವತಿಯ ವಿಐಎಸ್‌ಎಲ್‌ಗೆ 150 ಎಕರೆ ಗಣಿ ಪ್ರದೇಶವನ್ನು ಕೇಂದ್ರ ಸರ್ಕಾರ ಮಂಜೂರು ಮಾಡಿದೆ. ಕರ್ನಾಟಕ ಸರ್ಕಾರದ ಪ್ರಸ್ತಾವನೆಯಂತೆ ಬಳ್ಳಾರಿ ಜಿಲ್ಲೆಯಲ್ಲಿ ಗಣಿ ಮಂಜೂರು ಮಾಡಲಾಗಿದೆ.

ಫೆ.20ರಂದು ಕೇಂದ್ರ ಸರ್ಕಾರ ಈ ಕುರಿತು ಅಧಿಕೃತ ಆದೇಶ ಹೊರಡಿಸಿದೆ. ಬಳ್ಳಾರಿ ಜಿಲ್ಲೆಯ ರಾಮನದುರ್ಗದಲ್ಲಿ ಗಣಿ ಮಂಜೂರು ಮಾಡಬಹುದು ಎಂದು ಕರ್ನಾಟಕ ಸರ್ಕಾರ ಪ್ರಸ್ತಾವನೆ ಸಲ್ಲಿಸಿತ್ತು. ಇದಕ್ಕೆ ಕೇಂದ್ರ ಒಪ್ಪಿಗೆ ನೀಡಿದೆ.

150 ಎಕರೆ ಗಣಿ ಪ್ರದೇಶವನ್ನು 10 ವರ್ಷಗಳ ಕಾಲ ವಿಐಎಸ್‌ಎಲ್‌ಗೆ ನೀಡಲಾಗಿದೆ. ಕಾರ್ಖನೆಯ ಕಾರ್ಮಿಕರು ಕೇಂದ್ರ ಸರ್ಕಾರದ ತೀರ್ಮಾನವನ್ನು ಸ್ವಾಗತಿಸಿದ್ದಾರೆ. ಸಂಸ್ಥೆಗೆ ಗಣಿ ಮಂಜೂರು ಮಾಡಬೇಕು ಎಂದು ಕಾರ್ಮಿಕರು ಹೋರಾಟ ಮಾಡುತ್ತಿದ್ದರು.

Union government reserved 150 acres of land to VISP

ಆಗಸ್ಟ್ 7, 2017ರಂದು ಕರ್ನಾಟಕ ಸರ್ಕಾರ 150 ಎಕರೆ ಪ್ರದೇಶವನ್ನು ವಿಐಎಸ್‌ಎಲ್‌ಗೆ ನೀಡಲು ಒಪ್ಪಿಗೆ ನೀಡಿತ್ತು. ಈ ಕುರಿತು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. 2004ರಲ್ಲಿ ಕೆಮ್ಮನಗುಂಡಿ ಗಣಿಯ ಒಪ್ಪಂದ ಮುಗಿದ ಬಳಿಕ ವಿಐಎಸ್‌ಎಲ್‌ಗೆ ಸ್ವಂತ ಗಣಿ ಮಂಜೂರು ಆಗಿರಲಿಲ್ಲ.

2015ರಲ್ಲಿ ಕೇಂದ್ರ ಉಕ್ಕು ಮತ್ತು ಗಣಿ ಖಾತೆ ಸಚಿವ ನರೇಂದ್ರ ಸಿಂಗ್ ತೋಮರ್ ವಿಐಎಸ್‌ಎಲ್‌ಗೆ ಭೇಟಿ ನೀಡಿದ್ದರು. ಆಗ ಗಣಿ ಮಂಜೂರು ಮತ್ತು ಕಾರ್ಖನೆ ಪುನಶ್ಚೇತನಕ್ಕೆ 868 ಕೋಟಿ ರೂ.ಗಳ ಪ್ಯಾಕೇಜ್ ನೀಡುವುದಾಗಿ ಘೋಷಣೆ ಮಾಡಿದ್ದರು.

ಸ್ವಂತ ಗಣಿ ಇಲ್ಲದ ಕಾರಣ ಕಾರ್ಖನೆ ನಷ್ಟದಲ್ಲಿತ್ತು. ಕಾರ್ಮಿಕರ ಸ್ಥಿತಿ ಅಂತಂತ್ರವಾಗಿತ್ತು. ಶಾಶ್ವತ ಗಣಿ ಮಂಜೂರು ಮಾಡುವಂತೆ ಕಾರ್ಮಿಕರು ಪ್ರತಿಭಟನೆಯನ್ನು ನಡೆಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+