ಕೊಲ್ಲೂರಿನಲ್ಲಿ ಹೆಚ್ಚಿದ ಭಕ್ತರ ಸಂಖ್ಯೆ: ಇಂದಿನಿಂದ 2 ಲಾಂಚ್
ಸಾಗರ, ಜೂನ್ 17: ಲಾಕ್‌ಡೌನ್ ಸಡಿಲಿಕೆಯ ನಂತರ ಕೊಲ್ಲೂರು ದೇವಸ್ಥಾನಕ್ಕೆ ಹೋಗುವ ಭಕ್ತರ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ, ಇಂದಿನಿಂದ ಎರಡು ಲಾಂಚ್ ವ್ಯವಸ್ಥೆಯನ್ನು ಮಾಡಲಾಗಿದೆ.
ಸಿಗಂದೂರು ಚೌಡೇಶ್ವರಿ ದೇವಸ್ಥಾನಕ್ಕೆ ಇನ್ನು ಭಕ್ತರ ಪ್ರದೇಶಕ್ಕೆ ಅವಕಾಶ ನೀಡಿಲ್ಲ. ಹೀಗಾಗಿ, ಕೆಲವು ದಿನಗಳಿಂದ ಒಂದು ಲಾಂಚ್ ಮಾತ್ರ ಓಡಾಟ ನಡೆಸುತ್ತಿತ್ತು. ಆದರೆ, ಇಂದಿನಿಂದ ಎರಡು ಲಾಂಚ್ ಓಡಾಟ ಮಾಡುತ್ತಿವೆ. ಎರಡು ಗಂಟೆಗೆ ಒಂದರಂತೆ ಲಾಂಚ್‌ಗಳು ಪ್ರಯಾಣಿಕರಿಗೆ ಸಿಗಲಿವೆ.
ಒಂದೇ ಲಾಂಚ್ ಇದ್ದ ಕಾರಣ ಪ್ರಯಾಣಿಕರ ಸಂಖ್ಯೆ ಹೆಚ್ಚಿತ್ತು. ಒಂದು ಲಾಂಚ್‌ನಲ್ಲಿ ಸುಮಾರು 35 ರಿಂದ 40 ಮಂದಿ ಪ್ರಯಾಣ ಮಾಡುತ್ತಿದ್ದರು. ಕೊರೊನಾ ಸೋಂಕು ಹೆಚ್ಚಾಗಿರುವ ಈ ಸಮಯದಲ್ಲಿ ಸಾಮಾಜಿಕ ಅಂತರ ಕಾಪಾಡುವುದು ಕಷ್ಟವಾಗುತ್ತಿತ್ತು. ನಿನ್ನೆ ಶಾಸಕ ಹರತಾಳು ಹಾಲಪ್ಪ ಸಿಗಂದೂರಿಗೆ ಭೇಟಿ ನೀಡಿದ್ದು, ಜನರ ಸಮಸ್ಯೆ ಆಲಿಸಿದರು.

ಒಂದೇ ಲಾಂಚ್ ಇರುವ ಕಾರಣ ಜನರಿಗೆ ಸಮಸ್ಯೆ ಆಗುತ್ತಿದ್ದು, ಇಲಾಖೆ ಅಧಿಕಾರಿಗಳೊಂದಿಗೆ ಮಾತನಾಡಿದರು. ನಂತರ ಎರಡು ಲಾಂಚ್ ವ್ಯವಸ್ಥೆ ಮಾಡಿದ್ದು, ಇಂದಿನಿಂದ ಎರಡು ಲಾಂಚ್ ಕಾರ್ಯ ನಿರ್ವಹಿಸುತ್ತಿವೆ.
ಕೊಲ್ಲೂರಿನಲ್ಲಿ ಭಕ್ತರ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಹೆಚ್ಚಿನ ಸಂಖ್ಯೆಯ ಭಕ್ತರು ದೇವಿ ದರ್ಶನಕ್ಕೆ ಹೋಗುತ್ತಿದ್ದಾರೆ. ಹೀಗಾಗಿ, ಲಾಂಚ್‌ನಲ್ಲಿ ಸಾಮಾಜಿಕ ಅಂತರ, ಸ್ಯಾನಿಟೈಸರ್, ಮಾಸ್ಕ್ ಕಡ್ಡಾಯ ಯಾವುದು ಕೂಡ ಸರಿಯಾಗಿ ನಡೆಯುತ್ತಿಲ್ಲ.












Click it and Unblock the Notifications