ಮ್ಯಾನ್ ಹೋಲ್ ಗೆ ಇಳಿದಿದ್ದ ಇಬ್ಬರು ಕಾರ್ಮಿಕರು ಉಸಿರುಗಟ್ಟಿ ಸಾವು
ಶಿವಮೊಗ್ಗ, ಆಗಸ್ಟ್.06: ಮ್ಯಾನ್ ಹೋಲ್‌ನಲ್ಲಿ ನೀರು ಮೇಲೆತ್ತುವಾಗ ಉಸಿರುಗಟ್ಟಿ ಇಬ್ಬರು ಕಾರ್ಮಿಕರು ಸಾವನ್ನಪ್ಪಿದ್ದಾರೆ.
ನಗರದ ನ್ಯೂಮಂಡ್ಲಿಯ ಬೈಪಾಸ್ ಬಳಿ ಈ ದುರ್ಘಟನೆ ಸಂಭವಿಸಿದ್ದು, ಮೃತರು ಜಗಳೂರು ತಾಲೂಕಿನ ಬಿಳಚೋಡು ಗ್ರಾಮದ ಅಂಜನಪ್ಪ (37) ಹಾಗೂ ವೆಂಕಟೇಶ್ (17) ಎಂದು ತಿಳಿದು ಬಂದಿದೆ.
ಸುಪ್ರೀಂ ಕೋರ್ಟ್ ಆದೇಶವಿದ್ದರೂ ಒಳಚಂಡಿ ಇಲಾಖೆ ಅಧಿಕಾರಿಗಳು ಕಾರ್ಮಿಕರ ಜೀವಕ್ಕೆ ಬೆಲೆ ಕೊಡದೆ ಕಾರ್ಮಿಕರನ್ನು ಮ್ಯಾನ್ ಹೋಲ್ ನಿಂದ ನೀರನ್ನು ಮೇಲಕ್ಕೆ ಎತ್ತಲು ಕಾರ್ಮಿಕರನ್ನು ಬಳಿಸಿಕೊಂಡಿರುವುದು ಕಾನೂನು ಬಹಿರವಾದ ಕೃತ್ಯವಾಗಿದೆ
ಕಳೆದ ತಿಂಗಳಿನಿಂದ ನಗರದ ವಿವಿಧೆಡೆ ಈ ಕಾರ್ಮಿಕರು ಮ್ಯಾನ್ ಹೋಲ್ ರಿಪೇರಿ ಕೆಲಸ ಮಾಡುತ್ತಿದ್ದರು. ಇಂದು ನ್ಯೂ ಮಂಡ್ಲಿ ಬಳಿ ಮ್ಯಾನ್ ಹೋಲ್ ನಲ್ಲಿದ್ದ ನೀರನ್ನು ಮೇಲೆತ್ತುವಾಗ ಈ ದುರ್ಘಟನೆ ನಡೆದಿದೆ ಎನ್ನಲಾಗಿದೆ.

ಮೃತದೇಹಗಳನ್ನು ಅಗ್ನಿಶಾಮಕ ದಳ ಸಿಬ್ಬಂದಿಗಳು ಮೇಲಕೆತ್ತಿದ್ದು, ತಿಪ್ಪೇಶ್ ಎನ್ನುವ ಮೇಸ್ರ್ರಿ ಕಾರ್ಮಿಕರನ್ನು ಶಿವಮೊಗ್ಗಕ್ಕೆ ಕರೆತಂದಿದ್ದರು ಎಂದು ಹೇಳಾಗುತ್ತಿದೆ. ದೊಡ್ಡಪೇಟೆ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.












Click it and Unblock the Notifications