ಶಿವಮೊಗ್ಗ ನಗರದಲ್ಲಿ ಸಂಚಾರ ದಟ್ಟಣೆ; ಡಿಸಿ ಖಡಕ್ ಆದೇಶ

ಶಿವಮೊಗ್ಗ, ಡಿಸೆಂಬರ್ 15; ಶಿವಮೊಗ್ಗ ನಗರದಲ್ಲಿ ಅಧಿಕ ವಾಹನ ದಟ್ಟಣೆ ಉಂಟಾಗಿ ಸುಗಮ ಸಂಚಾರ ಅಡಚಣೆಯುಂಟಾಗುತ್ತಿರುವ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿಗಳು ಖಡಕ್ ಆದೇಶವೊಂದನ್ನು ಹೊರಡಿಸಿದ್ದಾರೆ.

ಶುಕ್ರವಾರ ಜಿಲ್ಲಾಧಿಕಾರಿ ಡಾ. ಸೆಲ್ವಮಣಿ ಆರ್. ಅಧಿಸೂಚನೆ ಹೊರಡಿಸಿ ವಾಹನಗಳ ಪಾರ್ಕಿಂಗ್ ವ್ಯವಸ್ಥೆಯಲ್ಲಿ ಕೆಲವು ಬದಲಾವಣೆ ಮಾಡಿದ್ದಾರೆ. ನಗರದ ಬಿ. ಹೆಚ್. ರಸ್ತೆಯಲ್ಲಿ ವಾಹನ ನಿಲುಗಡೆ ನಿಷೇಧಿಸಿ ಆದೇಶಿಸಿದ್ದಾರೆ.

Traffic Congestion In Shivamogga City No Parking Order By DC

ಶಿವಮೊಗ್ಗ ನಗರದ ಪೂರ್ವ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಬಿ. ಹೆಚ್. ರಸ್ತೆಯಲ್ಲಿ ಎ. ಎ. ಸರ್ಕಲ್‌ನ ವೆಂಕಟೇಶ್ವರ ಸ್ವೀಟ್ ಹೌಸ್‌ನಿಂದ ಶಿವಪ್ಪನಾಯಕ ಸರ್ಕಲ್ ಜ್ವರಾರಿ ಮೆಡಿಕಲ್ ಶಾಪ್‍ ತನಕ ರಸ್ತೆಯಲ್ಲಿ ಸಂಚಾರಕ್ಕೆ ಅಡಚಣೆ ಉಂಟಾಗುತ್ತಿತ್ತು.

ಆದ್ದರಿಂದ ಅಧಿಕ ವಾಹನ ದಟ್ಟಣೆ ಉಂಟಾಗಿ ಸುಗಮ ಸಂಚಾರ ಅಡಚಣೆಯುಂಟಾಗುತ್ತಿರುವ ಹಿನ್ನಲೆಯಲ್ಲಿ ಎಲ್ಲಾ ವಿಧದ ವಾಹನಗಳ ನಿಲುಗಡೆಯನ್ನು ನಿಷೇಧಿಸಿ ಆದೇಶ ಹೊರಡಿಸಿದ್ದಾರೆ. ಪೊಲೀಸರು ಮೇಲ್ವಿಚಾರಣೆ ನಡೆಸಲಿದ್ದು, ವಾಹನ ನಿಲ್ಲಿಸಿದರೆ ದಂಡ ಕಟ್ಟಬೇಕಾಗುತ್ತದೆ.

ದ್ವಿಚಕ್ರ ವಾಹನ, ಕಾರು ಪಾರ್ಕಿಂಗ್ ನಿಷೇಧ; ಶಿವಮೊಗ್ಗ ನಗರದ ಪೂರ್ವ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಸವಳಂಗ ರಸ್ತೆಯಲ್ಲಿ ಕರ್ನಾಟಕ ಸಂಘ ಸಿಗ್ನಲ್‍ನಿಂದ ಉಷಾ ನರ್ಸಿಂಗ್ ಹೋಂವರೆಗೆ ಸುಗಮ ಸಂಚಾರ ದೃಷ್ಠಿಯಿಂದ ದ್ವಿಚಕ್ರ ಮತ್ತು ಕಾರ್‌ಗಳ ಪಾರ್ಕಿಂಗ್‍ ಕುರಿತು ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.

ವಾಹನಗಳ ನಿಲುಗಡೆ ನಿಷೇಧಿತ ಸ್ಥಳಗಳು. ಬಸವೇಶ್ವರ (ಡಿವಿಎಸ್) ಸರ್ಕಲ್‍ನ ಸುತ್ತ 50 ಮೀ, ಮಹಾವೀರ ಸರ್ಕಲ್‍ನ ಸುತ್ತ 50 ಮೀ., ಶಿವಮೂರ್ತಿ ಸರ್ಕಲ್ ಸುತ್ತ 50 ಮೀ, ಅಕ್ಕಮಹಾದೇವಿ (ಉಷಾ ನರ್ಸಿಂಗ್ ಹೋಂ) ಸರ್ಕಲ್ ಸುತ್ತ 50 ಮೀ ಹಾಗೂ ಕಮಲಾ ನರ್ಸಿಂಗ್ ಹೋಂನಿಂದ ಗಾಂಧಿನಗರ ಕ್ರಾಸ್‍ವರೆಗೆ ಎಲ್ಲಾ ವಾಹನಗಳ ನಿಲುಗಡೆ ನಿಷೇಧಿಸಲಾಗಿದೆ.

ದ್ವಿ-ಚಕ್ರ ವಾಹನಗಳ ನಿಲುಗಡೆ ಸ್ಥಳ. ಮೋರ್ ಸೂಪರ್ ಮಾರ್ಕೇಟ್‍ನಿಂದ ಶಿವಮೊಗ್ಗ ಡ್ರಗ್ ಹೌಸ್‍ವರೆಗೆ ಎಡಬದಿ, ಪದ್ಮ ಜ್ಯೂವೆಲ್ಲರಿಯಿಂದ ಸುಶೋಧ ಆಸ್ಪತ್ರೆವರೆಗೆ ಎಡಬದಿ ಮತ್ತು ವಿಜಯ ಕಾಂಪ್ಲೇಕ್ಸ್ ನಿಂದ ಬೀಬಾ ಶಾಪ್‍ವರೆಗೆ ಬಲಬದಿ ದ್ವಿ-ಚಕ್ರ ವಾಹನ ನಿಲುಗಡೆ ಮಾಡಬಹುದಾಗಿದೆ.

ನಾಲ್ಕು ಚಕ್ರ ವಾಹನಗಳ ನಿಲುಗಡೆ. ಚನ್ನಪ್ಪ ಲೇಔಟ್ 2ನೇ ಕ್ರಾಸ್‌ಯಿಂದ ಕಮಲಾ ನರ್ಸಿಂಗ್ ಹೋಂವರೆಗೆ ಎಡಬದಿ, ವೆಸ್ಟ್‍ಸೈಡ್ ಕಾಂಪ್ಲೇಕ್ಸ್ (ಜಯನಗರ 2ನೇ ಪ್ಯಾರಲಲ್ ರಸ್ತೆ) ನಿಂದ ಫೈರ್ ಫಾಕ್ಸ್ ಸೈಕಲೋತ್ಸವವರೆಗೆ ಬಲಬದಿ ಕಾರ್‌ಗಳನ್ನು ನಿಲುಗಡೆ ಮಾಡಬಹುದಾಗಿದೆ ಎಂದು ಆದೇಶದಲ್ಲಿ ಸೂಚನೆ ನೀಡಲಾಗಿದೆ.

ರಾಷ್ಟ್ರೀಯ ಹಸಿರು ನ್ಯಾಯಾಧೀಕರಣದ ಅಧ್ಯಕ್ಷ ನ್ಯಾಯಮೂರ್ತಿ ಸುಭಾಷ್ ಬಿ. ಅಡಿ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯ ಸ್ವಚ್ಚತೆ, ತ್ಯಾಜ್ಯ ನಿರ್ವಹಣೆ ಹಾಗೂ ಪರಿಸರಕ್ಕೆ ಸಂಬಂಧಿಸಿದಂತೆ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಹಾಗೂ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯನ್ನು ನಡೆಸಿದ್ದರು.

ಮಲೆನಾಡಿನ ಹೆಬ್ಬಾಗಿಲೆನಿಸಿರುವ ಶಿವಮೊಗ್ಗ ಜಿಲ್ಲೆ ಸ್ವಚ್ಚ, ಸುಂದರ ಹಾಗೂ ಸದಾ ಹಸಿರಾಗಿರುವಂತೆ ಸರ್ಕಾರದ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಸಾರ್ವಜನಿಕರು ಸಹ ಸಹಕರಿಸುವಂತೆ ಹಾಗೂ ಇರುವ ವ್ಯವಸ್ಥೆಯನ್ನು ಅದು ಇರುವಂತೆಯೇ ಮುಂದಿನ ಪೀಳಿಗೆಗೆ ಕೊಡುಗೆಯಾಗಿ ನೀಡುವ ಅಗತ್ಯವಿದೆ ಎಂದು ಹೇಳಿದ್ದರು.

ಕೇಂದ್ರ ಸರ್ಕಾರದ ಸ್ಮಾರ್ಟ್‌ ಸಿಟಿ ಯೋಜನೆಗೆ ಆಯ್ಕೆಯಾದ ರಾಜ್ಯದ ನಗರಗಳಲ್ಲಿ ಶಿವಮೊಗ್ಗ ಸಹ ಒಂದು. ನಗರ ಪರಿಸರ ವಿಭಾಗದಲ್ಲಿ ಶಿವಮೊಗ್ಗ ನಗರಕ್ಕೆ 2022ನೇ ಸಾಲಿನಲ್ಲಿ ಪ್ರಶಸ್ತಿಯೂ ಸಿಕ್ಕಿದೆ. ಯೋಜನೆಯಡಿ ನಗರ ರಸ್ತೆಯನ್ನು ಅಭಿವೃದ್ಧಿಗೊಳಿಸಲಾಗುತ್ತಿದೆ. ಸಿಮೆಂಟ್ ಬ್ಲಾಕ್ ಚರಂಡಿಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಪಾದಚಾರಿಗಳಿಗೆ ಅನುಕೂಲವಾಗುವಂತೆ ಫುಟ್‌ಪಾತ್ ನಿರ್ಮಾಣ ಮಾಡಲಾಗುತ್ತಿದೆ. ವಾಹನಗಳ ನಿಲುಗಡೆಗೆ ಸಹ ವ್ಯವಸ್ಥೆ ಮಾಡಲಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+