ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿದ್ದಂತೆ ದೇಶ‍ದ್ರೋಹಿ ಕೃತ್ಯ ಹೆಚ್ಚಳ: ಈಶ್ವರಪ್ಪಗೆ ಬೆದರಿಕೆ ಕರೆ

ಶಿವಮೊಗ್ಗ, ಮೇ 15: ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರ ಬರುತ್ತಿದ್ದಂತೆ ದೇಶ ವಿರೋಧಿ ಚುಟುವಟಿಕೆಗಳ ಸಹ ಹೆಚ್ಚುತ್ತಿವೆ ಎಂದು ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪ ಆರೋಪಿಸಿದ್ದಾರೆ. ನನಗೆ ನೆನ್ನೆ ರಾತ್ರಿ ಕಝಕಿಸ್ತಾನ್ ನಿಂದ ಬೆದರಿಕೆ ಕರೆ ಬಂದಿದೆ ಎಂದು ಅವರು ತಿಳಿಸಿದ್ದಾರೆ.

ಜಿಲ್ಲೆಯ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಬಹುಮತ ಬಂದಿದ್ದೇ ತಡ ದೇಶದ್ರೋಹಿ ಕೃತ್ಯಗಳು ಹೆಚ್ಚಾಗುತ್ತಿವೆ. ಮತ ಎಣಿಕೆ ದಿನ ಕಾಂಗ್ರೆಸ್ ವಿಜಯೋತ್ಸವದಂದು ಬೆಳಗಾವಿಯ ತಿಲಕವಾಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪಾಕಿಸ್ತಾನ್ ಪರ ಕಿಡಿಗೇಡಿಗಳು ಘೋಷಣೆ ಕೂಗಿದ್ದಾರೆ. ಈ ಕುರಿತು ಪೊಲೀಸ್ ಅಧಿಕಾರಿಗಳೇ ದೂರು ನೀಡಿದ್ದಾರೆ. ಮಲೆನಾಡಿನ ಶಿರಸಿಯಲ್ಲಿ ಸಹ ಪಾಕ್ ಭಾವುಟ ಹಾರಾಡಿದೆ ಎಂದು ಕಾಂಗ್ರೆಸ್ ವಿರುದ್ಧ ಅವರು ಆಕ್ರೋಶ ಹೊರ ಹಾಕಿದ್ದಾರೆ.

Threat Call For KS Eshwarappa, He Slams To DK Shivakumar And Siddaramaiah

ಬೆದರಿಕೆ ಕರೆ ಕುರಿತು ದೂರು

ಭಾನುವಾರ ತಡರಾತ್ರಿ ಕಝಕಿಸ್ತಾನ್ ದಿಂದ ಈ +7 (678)815 415 ನಂಬರ್ ನಿಂದ ಬೆದರಿಕೆ ಕರೆ ಬಂದಿದೆ. ಮೊಬೈಲ್ ಸೈಲೆಂಟ್ ಮೂಡಿನಲ್ಲಿಟ್ಟಿದ್ದೆ. ಹೀಗಾಗಿ ಕಾಲ್ ರಿಸೀವ್ ಮಾಡಿಲ್ಲ. ಇತ್ತೀಚೆಗೆ ಮಹಾರಾಷ್ಟ್ರ ವ್ಯಕ್ತಿ ಬಂಧಿಸಿದ ನಂತರ ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿಗೆ ಬೆದರಿಕೆ ಕರೆ ಹೋಗಿತ್ತು. ಅವರಿಗೆ ಕರೆ ಮಾಡಿ ಬೆದರಿದವನ ಹೆಸರು ಶಾಹೀರ್ ಶೇಖ್. ಈ ದುಷ್ಕರ್ಮಿ ಡೈರಿಯಲ್ಲಿ ನನ್ನ ಹೆಸರು ಸಹ ಇರುವುದನ್ನು ಪೊಲೀಸ್ ಮೂಲಗಳು ದೃಢಪಡಿಸಿದ್ದವು ಎಂದು ಅವರು ವಿವರಿಸಿದರು.

ಕ್ಷೇತ್ರದಲ್ಲಿನ ನಮ್ಮ ಪಕ್ಷ ಸಂಘಟನೆ, ಕೇಂದ್ರ ನಾಯಕರ ರೋಡ್ ಶೋ, ಇನ್ನಿತರ ಕಾರ್ಯಕ್ರಮಗಳಿಂದಾಗಿ ಇಲ್ಲಿ ಜನರು ಜಾತಿ ಬೇಧ ಮಾಡದೇ ಗೆಲುವು ನೀಡಿದ್ದಾರೆ ಎಂದರು.

2018ರಲ್ಲಿ ಶೇಕಡಾ 36 ರಷ್ಟು ಮತ ಬಂದಿತ್ತು. ಈ ಸಲ ಶೇಕಡಾ 36.4 ರಷ್ಟು ಮತ ಬಂದಿದೆ. ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವವನ್ನು ಮತದಾರರು ಬೆಂಬಲಿಸಿದ್ದಾರೆ. ಮುಂಬರುವ ದಿನಗಳಲ್ಲಿ ನಾವು (ಬಿಜೆಪಿ) ಕಾವಲು ನಾಯಿ ರೀತಿಯಲ್ಲಿ ವಿಪಕ್ಷದಲ್ಲಿದ್ದುಕೊಂಡು ಕೆಲಸ ಮಾಡುತ್ತೇವೆ ಎಂದು ತಿಳಿಸಿದರು.

Threat Call For KS Eshwarappa, He Slams To DK Shivakumar And Siddaramaiah

ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ

ಬಿಜೆಪಿಗೆ ಕೋಮುವಾದಿ ಪಕ್ಷ ಎನ್ನುವ ಸಿದ್ದರಾಮಯ್ಯನವರ ಪರ ಕುರುಬರು ಮತ್ತು ಡಿಕೆ ಶಿವಕುಮಾರ್ ಅವರ ಪರ ಒಕ್ಕಲಿಗರು ಲಾಬಿ ಮಾಡುತ್ತಿದ್ದಾರೆ. ಅಂದರೆ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಅವರು ಜಾತಿವಾದ ರಾಜಕರಾಣ ಮಾಡುತ್ತಿದ್ದಾರೆ ಎಂಬದು ಇದರಿಂದ ತಿಳಿದುಬರುತ್ತದೆ ಎಂದು ಹರಿಹಾಯ್ದರು.

ಜೆಡಿಎಸ್ ಅಭ್ಯರ್ಥಿ ವಿರುದ್ಧ ಚಿಕ್ಕಮಗಳೂರಿನ ಭೋಜೇಗೌಡ ಕೆಲಸ ಮಾಡಿದ್ದು ಅವರು ಇಂದು ಹಾಲಿನ ಅಭಿಷೇಕ ಮಾಡಿಸಿಕೊಂಡಿದ್ದಾರೆ. ಅವರ ಈ ವರ್ತನೆ ಲಜ್ಜೆಗೇಡಿತನದಿಂದ ಕೂಡಿದೆ. ಇದೆಲ್ಲವನ್ನು ಜೆಡಿಎಸ್‌ ನಾಯಕರು ಹೇಗೆ ಸಹಿಸಿಕೊಳ್ಳುತ್ತಾರೋ ಗೊತ್ತಿಲ್ಲ ಎಂದು ತಿಳಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+