ಶಿವಮೊಗ್ಗ : ರವಿ ಪೂಜಾರಿ ಬೆದರಿಕೆ ಬಗ್ಗೆ ತನಿಖೆಗೆ ವಿಶೇಷ ತಂಡ

ಶಿವಮೊಗ್ಗ, ನವೆಂಬರ್ 24 : ತೀರ್ಥಹಳ್ಳಿಯ ಚಿನ್ನ, ಬೆಳ್ಳಿ ಉದ್ಯಮಿಯೊಬ್ಬರಿಗೆ ಭೂಗತ ಪಾತಕಿ ರವಿ ಪೂಜಾರಿ ಕರೆ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿದ್ದಾನೆ. ಪ್ರಕರಣದ ತನಿಖೆಗೆ ವಿಶೇಷ ತಂಡವನ್ನು ರಚನೆ ಮಾಡಲಾಗಿದೆ.

ಉದ್ಯಮಿ ಮೊದಲು ಭೂಗತ ಪಾತಕಿ ರವಿ ಪೂಜಾರಿ ಕರೆಯನ್ನು ನಿರ್ಲಕ್ಷಿಸಿದ್ದರು. ಪದೇ-ಪದೇ ಕರೆ ಬಂದ ನಂತರ ಶಿವಮೊಗ್ಗ ಎಸ್ಪಿ ಅಭಿನವ್ ಖರೆ ಅವರಿಗೆ ಮಾಹಿತಿ ನೀಡಿದ್ದರು. ಎಸ್ಪಿ ಅವರ ಸಲಹೆಯಂತೆ ದೂರನ್ನು ದಾಖಲು ಮಾಡಿದ್ದಾರೆ.

Thirthahalli jeweller receives threat calls from Ravi Pujari

ಉದ್ಯಮಿಗೆ ಕರೆ ಮಾಡಿದ ರವಿ ಪೂಜಾರಿ 25 ಕೋಟಿ ಹಣ ನೀಡದಿದ್ದರೆ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ. ಉದ್ಯಮಿ ದೂರನ್ನು ಸ್ವೀಕರಿಸಿರುವ ಪೊಲೀಸರು, ಅವರ ಕುಟುಂಬಕ್ಕೆ ಭದ್ರತೆ ಒದಗಿಸಿದ್ದಾರೆ.

ಡಿಸಿಬಿಗೆ ತನಿಖೆ ಹಸ್ತಾಂತರ : ರವಿ ಪೂಜಾರಿ ಕರೆ ಮಾಡಿ, ಬೆದರಿಕೆ ಹಾಕಿರುವ ಪ್ರಕರಣದ ತನುಖೆಯನ್ನು ಜಿಲ್ಲಾ ಅಪರಾಧ ಪತ್ತೆ ದಳಕ್ಕೆ ವಹಿಸಲಾಗಿದೆ. ತನಿಖಾ ತಂಡ ದೂರವಾಣಿ ಕರೆಗಳ ಮಾಹಿತಿಯನ್ನು ಸಂಗ್ರಹಣೆ ಮಾಡುತ್ತಿದೆ.

ಭೂಗತ ಪಾತಕಿ ರವಿ ಪೂಜಾರಿ ಹಲವು ಬಾರಿ ರಾಜ್ಯದ ವಿವಿಧ ಉದ್ಯಮಿಗಳಿಗೆ ಕರೆ ಮಾಡಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾನೆ. ಕಳೆದ ವರ್ಷ ಶಿವಮೊಗ್ಗದ ಅಡಿಕೆ ವರ್ತಕರಿಗೂ ಬೆದರಿಕೆ ಕರೆ ಬಂದಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+