'ಚಕ್ರವರ್ತಿ ಸೂಲಿಬೆಲೆಯಿಂದ ಕೋಮು ಪ್ರಚೋದನೆ'

ಶಿವಮೊಗ್ಗ, ಜನವರಿ 08: ಕೋಮು ಭಾವನೆ ಕೆರಳಿಸುವಂತಹ ಬರವಣಿಗೆಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕುವುದನ್ನು ಚಕ್ರವರ್ತಿ ಸೂಲಿಬೆಲೆ ಕೈಬಿಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಗ್ರಹಿಸಿದರು.

ಶಿವಮೊಗ್ಗದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲಾ ರಾಜಕೀಯ ಪಕ್ಷ ಹಾಗೂ ಸಂಘಟನೆಗಳು ಶವದ ಮೇಲೆ ರಾಜಕೀಯ ಮಾಡುವುದನ್ನ ಬಿಟ್ಟಾಗ ಶಾಂತಿ ಕಾಪಾಡಬಹುದು ಎಂದರು.

ಮಗನನ್ನು ಕಳೆದುಕೊಂಡ ತಾಯಂದಿರು ಮುಖ್ಯಮಂತ್ರಿಗಳಿಗೆ ಪತ್ರ ಬರೆಯಲಿ ಎಂದು ತಮ್ಮ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ ಎಂದರು.

ಇದು ಕೋಮು ಭಾವನೆ ಕೆರಳಿಸುವ ವಿಷಯವಾಗಿದೆ. ಈ ರೀತಿ ಸಾಮಾಜಿಕ ಜಾಲತಾಣಗಳಲ್ಲಿ ಬರೆಯುವುದನ್ನು ಕೈಬಿಡಬೇಕು ಎಂದರು.

ಕರಾವಳಿಯಲ್ಲಿ ಬುಗಿಲೆದ್ದಿರುವ ಕೋಮು ದಳ್ಳುರಿ ಶಮನಗೊಳ್ಳಲು ಶವದ ಮೇಲೆ ರಾಜಕೀಯ ಮಾಡುವುದನ್ನ ರಾಜಕೀಯ ಪಕ್ಷಗಳು ಹಾಗೂ ಸಂಘಟನೆಗಳು ಬಿಡಬೇಕು ಎಂದರು.

Sulibele provoking people: Siddaramaiah

ಕರಾವಳಿ ಹೊತ್ತಿ ಉರಿಯಲು ಆರ್.ಎಸ್.ಎಸ್. ಬಜರಂಗದಳ ಹಾಗೂ ಬಿಜೆಪಿ ಹಿಂದೂ ಗಳು ಸತ್ತರು ಎಂದು ಪ್ರತಿಭಟನೆ ನಡೆಸುತ್ತಾರೆ. ಆದರೆ ಕೋಮು ದಳ್ಳುರಿಗೆ ನಿನ್ನೆ ಮುಸ್ಲೀಂ ಯುವಕನೋರ್ವ ಸಾವನ್ನಪ್ಪಿದ್ದಾನೆ. ಇವರ ಸಾವಿಗೂ ಬಿಜೆಪಿ ಸ್ಪಂಧಿಸಬೇಕಿತ್ತು. ಆದರೆ ಈಗ ಯಾಕೆ ಸುಮ್ಮನಿದ್ದಾರೆ ಎಂದು ಪ್ರಶ್ನಿಸಿದರು.

ಚುನಾವಣೆ ಕಣಕ್ಕ ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆಯಾಗಿದೆಯಾ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಿಎಂ ಕೋರ್ ಕಮಿಟಿ, ಸ್ಟ್ಯಾಂಡಿಂಗ್ ಕಮಿಟಿ ಹಾಗೂ ಸ್ಕ್ರೀನಿಂಗ್ ಕಮಿಟಿಯಲ್ಲಿ ಚರ್ಚೆಯಾಗಿ ನಂತರ ಅಭ್ಯರ್ಥಿಗಳ ಪಟ್ಟಿ ಮಾಡಲಾಗುವುದು ಎಂದರು.

ಚುನಾವಣೆಯ ಕುರಿತು ಎಲ್ಲಾ ಎಲ್ಲಾ ದೃಶ್ಯ ಮಾಧ್ಯಮಗಳು ಈ ಬಾರಿ ಸಮೀಕ್ಷೆ ಪ್ರಕಾರ ಅತಂತ್ರ ವಿಧಾನ ಸಭೆ ಎಂದು ಬಿತ್ತರಿಸುತ್ತಿವೆ. ಆದರೆ ಜನರ ನಾಡಿ ಮಿಡಿತ ಅರಿತಿರುವ ಕಾಂಗ್ರೆಸ್ 'ಕಂಫರ್ಟಬಲ್' ಬಹುಮತದೊಂದಿಗೆ ಅಧಿಕಾರ ಹಿಡಿಯಲಿದೆ ಎಂದು ವಿವರಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+