Get Updates
Get notified of breaking news, exclusive insights, and must-see stories!

ಭದ್ರಾವತಿ: ಹಿಜಾಬ್ ವಿರುದ್ಧ ಕೇಸರಿ ಶಾಲು ಧರಿಸಿ ಕಾಲೇಜಿಗೆ ಬಂದ ವಿದ್ಯಾರ್ಥಿಗಳು

ಶಿವಮೊಗ್ಗ, ಫೆಬ್ರವರಿ 1: ಉಡುಪಿ ಕಾಲೇಜಿನ ಹಿಜಾಬ್ ವಿವಾದ ಜೀವಂತವಾಗಿರುವಾಗಲೇ, ಶಿವಮೊಗ್ಗ ಜಿಲ್ಲೆ ಭದ್ರಾವತಿಯ ಪ್ರತಿಷ್ಠಿತ ಕಾಲೇಜಿನಲ್ಲೂ ಇದೇ ರೀತಿಯ ವಿವಾದ ಭುಗಿಲೆದ್ದಿದೆ. ಸಮವಸ್ತ್ರವಿದ್ದರೂ ಕೆಲವರಿಗೊಂದು, ಉಳಿದವರಿಗೊಂದು ನೀತಿ ಅನುಸರಿಸದಂತೆ ಆಗ್ರಹಿಸಿ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಕಾಲೇಜಿಗೆ ಬಂದಿದ್ದರು.

ಭದ್ರಾವತಿ ನ್ಯೂ ಟೌನ್‌ನ ಸರ್.ಎಂ. ವಿಶ್ವೇಶ್ವರಯ್ಯ ಕಾಲೇಜಿನಲ್ಲಿ ಮಂಗಳವಾರ ಹಲವು ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಬಂದಿದ್ದರು. ಎಲ್ಲಾ ವಿದ್ಯಾರ್ಥಿಗಳಿಗೂ ಸಮವಸ್ತ್ರ ಕಡ್ಡಾಯಗೊಳಿಸಬೇಕು ಎಂದು ವಿದ್ಯಾರ್ಥಿಗಳು, ಹಿಂದೂ ಸಂಘಟನೆಗಳ ಕಾರ್ಯಕರ್ತರು ಆಗ್ರಹಿಸಿದರು. ಇದರಿಂದ ಕೆಲವು ಹೊತ್ತು ಕಾಲೇಜಿನಲ್ಲಿ ಬಿಗುವಿನ ವಾತಾವರಣವಿತ್ತು.

ತರಗತಿಗೆ ಕೇಸರಿ ಶಾಲು
ಸರ್.ಎಂ.ವಿಶ್ವೇಶ್ವರಯ್ಯ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಸಮವಸ್ತ್ರ ಕಡ್ಡಾಯವಿದೆ. ಹಾಗಿದ್ದೂ ಮುಸ್ಲಿಂ ಸಮುದಾಯಕ್ಕೆ ಸೇರಿದ ವಿದ್ಯಾರ್ಥಿನಿಯರು ತರಗತಿಗಳಲ್ಲೂ ಹಿಜಾಬ್ ಧರಿಸುತ್ತಾರೆ. ಇದು ಸರಿಯಾದ ಕ್ರಮವಲ್ಲ, ಆದ್ದರಿಂದ ತಾವು ಕೇಸರಿ ಶಾಲು ಧರಿಸಿ ತರಗತಿಗೆ ಬರುತ್ತೇವೆ ಎಂದು ಕೆಲವು ವಿದ್ಯಾರ್ಥಿಗಳು ತಿಳಿಸಿದ್ದರು. ಇಂದು ಹಲವು ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ, ಕಾಲೇಜಿಗೆ ಬಂದಿದ್ದರು. ಇನ್ಮುಂದೆ ಕೇಸರಿ ಶಾಲು ಧರಿಸಿಕೊಂಡೇ ತರಗತಿಗೆ ಬರುವುದಾಗಿ ಕಾಲೇಜು ಆಡಳಿತ ಮಂಡಳಿಗೆ ತಿಳಿಸಿದರು.

Shivamogga: Students Came To College With Wearing Saffron Shallya Against Hijab in Bhadravati

ಕ್ರಮ ಕೈಗೊಂಡ ಆಡಳಿತ ಮಂಡಳಿ
ಕೇಸರಿ ಶಾಲು ಧರಿಸಿ ಬಂದ ವಿದ್ಯಾರ್ಥಿಗಳ ಜೊತೆಗೆ ಕಾಲೇಜು ಆಡಳಿತ ಮಂಡಳಿ ಚರ್ಚೆ ನಡೆಸಿತು. ವಿವಿಧ ಸಂಘಟನೆಗಳ ಪ್ರಮುಖರು ಈ ಸಭೆಯಲ್ಲಿ ಪಾಲ್ಗೊಂಡಿದ್ದರು. ಎಲ್ಲಾ ವಿದ್ಯಾರ್ಥಿಗಳಿಗು ಸಮವಸ್ತ್ರ ಕಡ್ಡಾಯಗೊಳಿಸಲಾಗಿದೆ. ತರಗತಿ ಪ್ರವೇಶಿಸುವಾಗ ಸಮವಸ್ತ್ರದಲ್ಲೇ ಇರಬೇಕು ಎಂದು ಪಟ್ಟು ಹಿಡಿದರು.

ಘಟನೆ ಕುರಿತು ಮಾತನಾಡಿದ ಸರ್.ಎಂ. ವಿಶ್ವೇಶ್ವರಯ್ಯ ಕಲಾ ಮತ್ತು ವಾಣಿಜ್ಯ ಕಾಲೇಜು ಪ್ರಾಂಶುಪಾಲ ಡಾ.ಉಮಾಶಂಕರ್, "ಕಾಲೇಜಿನಲ್ಲಿ ಸಮವಸ್ತ್ರ ಕಡ್ಡಾಯವಿದೆ. ಹಿಜಾಬ್ ಧರಿಸಿ ಬರುವ ವಿದ್ಯಾರ್ಥಿನಿಯರು, ಕಾಲೇಜಿನ ವೇಯ್ಟಿಂಗ್ ರೂಂನಲ್ಲಿ ಅದನ್ನು ತೆಗೆದು, ಸಮವಸ್ತ್ರದಲ್ಲೇ ತರಗತಿಗೆ ಬರಬೇಕು. ಗುರುವಾರದಿಂದ ಈ ನಿಯಮವನ್ನು ಕಡ್ಡಾಯಗೊಳಿಸಲಾಗಿದೆ,'' ಎಂದು ತಿಳಿಸಿದರು.

Shivamogga: Students Came To College With Wearing Saffron Shallya Against Hijab in Bhadravati

ಕಾಲೇಜಿನಲ್ಲಿ ಬಿಗುವಿನ ವಾತವರಣ
ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಇವತ್ತು ಕಾಲೇಜಿಗೆ ಭೇಟಿ ನೀಡಿದ್ದರು. ಈ ಸಂದರ್ಭ ಕೆಲ ಹೊತ್ತು ಕಾಲೇಜಿನಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಪೊಲೀಸರು ಮಧ್ಯ ಪ್ರವೇಶಿಸಿ ಪರಿಸ್ಥಿತಿ ನಿಯಂತ್ರಿಸಿದರು. ಬಳಿಕ ಕಾಲೇಜು ಆಡಳಿತ ಮಂಡಳಿ ಸಭೆ ನಡೆಸಿ, ನಿರ್ಣಯ ಪ್ರಕಟಿಸಿದ ಬಳಿಕ ಪರಿಸ್ಥಿತಿ ಶಾಂತವಾಯಿತು.

'ದಿಢೀರ್ ವಿವಾದವಲ್ಲ'
ಇನ್ನು ಹಿಜಾಬ್ ವಿವಾದ ದಿಢೀರ್ ಆರಂಭವಾಗಿದ್ದಲ್ಲ. ''ಕಳೆದ ವಾರ ವಿದ್ಯಾರ್ಥಿನಿಯೊಬ್ಬಳ ಜೊತೆಗೆ ವಿದ್ಯಾರ್ಥಿಯೊಬ್ಬ ಮಾತನಾಡುತ್ತಿದ್ದಾಗ ಗಲಾಟೆಯಾಗಿತ್ತು. ವಿದ್ಯಾರ್ಥಿನಿಯ ಸಮುದಾಯಕ್ಕೆ ಸೇರಿದ ಕೆಲವು ಯುವಕರು ಆಕೆಯೊಂದಿಗೆ ಮಾತನಾಡದಂತೆ ವಿದ್ಯಾರ್ಥಿಗೆ ಎಚ್ಚರಿಸಿದ್ದರು. ಇದರಿಂದ ವಿವಾದ ಹುಟ್ಟಿಕೊಂಡಿರುವ ಸಾಧ್ಯತೆ ಇದೆ,'' ಎಂದು ಪ್ರಾಂಶುಪಾಲ ಡಾ.ಉಮಾಶಂಕರ್ ತಿಳಿಸಿದ್ದಾರೆ.

Recommended Video

      ಪಟ್ಟ ಇರ‌್ಲಿ ಬಿಡ್ಲಿ ಯಾವತ್ತಿದ್ರೂ ನಾನೇ ನಾಯಕ ಎಂದು Rohit ಗೆ ಟಾಂಗ್ ಕೊಟ್ಟ Kohli | Oneindia Kannada

      ಸರ್.ಎಂ.ವಿಶ್ವೇಶ್ವರಯ್ಯ ಕಾಲೇಜು, ಭದ್ರಾವತಿಯ ಪ್ರತಿಷ್ಠಿತ ಕಾಲೇಜುಗಳಲ್ಲಿ ಒಂದು. ವಿವಿಧೆಡೆಯ ವಿದ್ಯಾರ್ಥಿಗಳು ಇಲ್ಲಿ ವಿದ್ಯಭ್ಯಾಸ ಮಾಡುತ್ತಿದ್ದಾರೆ. ಮುಸ್ಲಿಂ ಸಮುದಾಯಕ್ಕೆ ಸೇರಿದ ಸುಮಾರು 250 ವಿದ್ಯಾರ್ಥಿನಿಯರು ಈ ಕಾಲೇಜಿನಲ್ಲಿ ಓದುತ್ತಿದ್ದಾರೆ.

      More From
      Prev
      Next
      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+