ಮೋದಿ ಮಾಡಿದ ಒಂದು ಒಳ್ಳೆ ಕೆಲಸ ಇದು ಮಾತ್ರ!

ಶಿವಮೊಗ್ಗ, ಆ.13 : ಮೂವತ್ತು ವರ್ಷಗಳಿಂದ ಬಿ.ಎಸ್.ಯಡಿಯೂರಪ್ಪ ಅವರು ಕ್ರಿಮಿನಲ್ ಮತ್ತು ಮಾಟ ಮಂತ್ರದ ರಾಜಕಾರಣ ಮಾಡಿಕೊಂಡು ಬಂದಿದ್ದಾರೆ. ಯಡಿಯೂರಪ್ಪ ಅವರಿಗೆ ಇಷ್ಟು ವರ್ಷ ಮತಹಾಕಿದ್ದು ಸಾಕು ಈ ಬಾರಿ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಶಿಕಾರಿಪುರದಲ್ಲಿ ಜನರಿಗೆ ಕರೆ ನೀಡಿದ್ದಾರೆ.

ಮಂಗಳವಾರ ಶಿಕಾರಿಪುರದಲ್ಲಿ ಉಪ ಚುನಾವಣಾ ಪ್ರಚಾರ ನಡೆಸಿದ ಸಿಎಂ ಸಿದ್ದರಾಮಯ್ಯ ಯಡಿಯೂರಪ್ಪ ವಿರುದ್ಧ ಅವರ ತವರು ಕ್ಷೇತ್ರದಲ್ಲಿ ವಾಗ್ದಾಳಿ ನಡೆಸಿದರು. ಯಡಿಯೂರಪ್ಪ ಅವರಿಗೆ ಇಷ್ಟು ವರ್ಷ ಮತ ಹಾಕಿದ್ದು ಸಾಕು, ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ಶಾಂತವೀರಪ್ಪ ಗೌಡ ಅವರನ್ನು ಗೆಲ್ಲಿಸಿ ಎಂದು ಹೇಳಿದರು. [ಶಿಕಾರಿಪುರದಲ್ಲಿ ಕಾಂಗ್ರೆಸ್, ಜೆಡಿಎಸ್ ದೋಸ್ತಿ]

ಶಿವಮೊಗ್ಗ ಸಂಸದರಾಗಿರುವ ಯಡಿಯೂರಪ್ಪ ಅವರು ಕ್ರಿಮಿನಲ್ ಮತ್ತು ಮಾಟಮಂತ್ರದ ರಾಜಕಾರಣ ಮಾಡಿಕೊಂಡು ಬಂದವರು. ಅವರನ್ನು ಸತತವಾಗಿ ಆರಿಸುತ್ತಾ ಬಂದಿದ್ದೀರಿ. ಬಿಜೆಪಿಗೆ, ಯಡಿಯೂರಪ್ಪ ಅವರಿಗೆ ಇಷ್ಟು ವರ್ಷ ಮತ ಹಾಕಿದ್ದು ಸಾಕು. ಈ ಬಾರಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಎಂದು ಜನರಲ್ಲಿ ಮನವಿ ಮಾಡಿದರು.

ಯಡಿಯೂರಪ್ಪ ಅವರು ನರೇಂದ್ರ ಮೋದಿ ಸರ್ಕಾರದಲ್ಲಿ ಕೃಷಿ ಸಚಿವರಾಗುವ ಮಹದಾಸೆಯೊಂದಿಗೆ ಹೊಸ ಸೂಟು ಹೊಲಿಸಿಕೊಂಡು ಸಿದ್ಧರಾಗಿದ್ದರು. ಅಚ್ಚೇದಿನ್ ಆಯೇಗಾ ಎಂದು ಹೇಳಿಕೊಂಡು ಅಧಿಕಾರಕ್ಕೆ ಬಂದ ಪ್ರಧಾನಿ ನರೇಂದ್ರ ಮೋದಿ ಯಡಿಯೂರಪ್ಪ ಅವರನ್ನು ಸಚಿವ ಸಂಪುಟದಿಂದ ಹೊರಗಿಟ್ಟರು. ಮೋದಿ ಮಾಡಿದ ಒಳ್ಳೆ ಕೆಲಸ ಇದೊಂದು ಮಾತ್ರ ಎಂದು ಸಿದ್ದರಾಮಯ್ಯ ಲೇವಡಿ ಮಾಡಿದರು. ಶಿಕಾರಿಪುರದ ಪ್ರಚಾರದ ಚಿತ್ರಗಳು

ಮಾಟಮಂತ್ರದ ರಾಜಕಾರಣ

ಮಾಟಮಂತ್ರದ ರಾಜಕಾರಣ

ಬಿ.ಎಸ್.ಯಡಿಯೂರಪ್ಪ ಅವರು ಮೂವತ್ತು ವರ್ಷಗಳಿಂದ ಕ್ರಿಮಿನಲ್ ಪೊಲಿಟಿಕ್ಸ್ ಮತ್ತು ಮಾಟ ಮಂತ್ರದ ರಾಜಕಾರಣ ಮಾಡಿಕೊಂಡು ಬಂದಿದ್ದಾರೆ. ಅವರಿಗೆ ಇಷ್ಟು ವರ್ಷ ಮತಹಾಕಿದ್ದು ಸಾಕು ಈ ಬಾರಿ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಶಿಕಾರಿಪುರದಲ್ಲಿ ಜನರಿಗೆ ಕರೆ ನೀಡಿದ್ದಾರೆ.

ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸಿ ಕಳುಹಿಸಿ

ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸಿ ಕಳುಹಿಸಿ

ಶಿಕಾರಿಪುರದಲ್ಲಿ ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ಶಾಂತವೀರಪ್ಪ ಗೌಡ ಅವರನ್ನು ಗೆಲ್ಲಿಸಿ ಕಳುಹಿಸಿ. ರಾಜ್ಯದಲ್ಲಿ ನಮ್ಮ ಸರ್ಕಾರವಿದ್ದು, ಇನ್ನು 3 ವರ್ಷ 9 ತಿಂಗಳು ಸಿದ್ದರಾಮಯ್ಯನೇ ಮುಖ್ಯಮಂತ್ರಿ. ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಿ ಕಳುಹಿಸಿದಲ್ಲಿ ಶಿಕಾರಿಪುರದ ಅಭಿವೃದ್ಧಿಗೆ ಕೆಲಸ ಮಾಡುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದರು.

ಹೋಗಬಾರದ ಸ್ಥಳಕ್ಕೆಲ್ಲ ಹೋಗಿ ಬಂದರು

ಹೋಗಬಾರದ ಸ್ಥಳಕ್ಕೆಲ್ಲ ಹೋಗಿ ಬಂದರು

ಬಿ.ಎಸ್.ಯಡಿಯೂರಪ್ಪ ಅವರು ಮತ್ತು ನಾನು 1983ರಲ್ಲಿ ಒಟ್ಟಿಗೆ ವಿಧಾನಸಭೆ ಪ್ರವೇಶ ಮಾಡಿದೆವು. ಆದರೆ, ಅವರು ನನಗಿಂತ ಮೊದಲು ಸಿಎಂ ಆಗಿ ಹೋಗಬಾರದ ಸ್ಥಳಕ್ಕೆಲ್ಲ ಹೋಗಿ ಬಂದರು ಎಂದು ಸಿದ್ದರಾಮಯ್ಯ ವ್ಯಂಗ್ಯವಾಡಿದರು.

ಹೊಸಸೂಟು ಹೊಲಿಸಿಕೊಂಡು ಬಂದಿದ್ದರು

ಹೊಸಸೂಟು ಹೊಲಿಸಿಕೊಂಡು ಬಂದಿದ್ದರು

ಯಡಿಯೂರಪ್ಪ ಅವರು ನರೇಂದ್ರ ಮೋದಿ ಸರ್ಕಾರದಲ್ಲಿ ಕೃಷಿ ಸಚಿವರಾಗುವ ಮಹದಾಸೆಯೊಂದಿಗೆ ಹೊಸ ಸೂಟು ಹೊಲಿಸಿಕೊಂಡು ಸಿದ್ಧರಾಗಿದ್ದರು. ಅಚ್ಚೇದಿನ್ ಆಯೇಗಾ ಎಂದು ಹೇಳಿಕೊಂಡು ಅಧಿಕಾರಕ್ಕೆ ಬಂದ ಪ್ರಧಾನಿ ನರೇಂದ್ರ ಮೋದಿ ಯಡಿಯೂರಪ್ಪ ಅವರನ್ನು ಸಚಿವ ಸಂಪುಟದಿಂದ ಹೊರಗಿಟ್ಟರು. ಮೋದಿ ಮಾಡಿದ ಒಳ್ಳೆ ಕೆಲಸ ಇದು ಮಾತ್ರ ಎಂದು ಸಿದ್ದರಾಮಯ್ಯ ಲೇವಡಿ ಮಾಡಿದರು.

ರಾಘವೇಂದ್ರ ಏನು ಕೆಲಸ ಮಾಡಿದ್ದಾರೆ

ರಾಘವೇಂದ್ರ ಏನು ಕೆಲಸ ಮಾಡಿದ್ದಾರೆ

ಬಿ.ಎಸ್.ಯಡಿಯೂರಪ್ಪ ಮತ್ತು ಅವರ ಮಕ್ಕಳು ತಾವು ಜೈಲಿಗೆ ಹೋದ್ರು, ಭ್ರಷ್ಟಾಚಾರ ಮಾಡಿದ್ರೂ ಜನರು ತಮಗೆ ಮತ ನೀಡುತ್ತಾರೆ ಎಂದು ಭಾವಿಸಿದ್ದಾರೆ. ಬಿ.ವೈ.ರಾಘವೇಂದ್ರ ಅವರು ಲೋಕಸಭೆ ಸದಸ್ಯರಾಗಿ ಮಾಡಿದ ಕೆಲಸಗಳೇನು ಎಂದು ಅವರನ್ನು ಪ್ರಶ್ನಿಸಿ ಎಂದು ಸಿದ್ದರಾಮಯ್ಯ ಹೇಳಿದರು.

ಯಾರು ಪಾಲ್ಗೊಂಡಿದ್ದರು?

ಯಾರು ಪಾಲ್ಗೊಂಡಿದ್ದರು?

ಚುನಾವಣಾ ಪ್ರಚಾರದಲ್ಲಿ ಕೆಪಿಸಿಸಿ ಅಧ್ಯಕ್ಷ ಡಾ. ಜಿ.ಪರಮೇಶ್ವರ್, ಸಚಿವರಾದ ಎಚ್.ಸಿ.ಮಹಾದೇವಪ್ಪ, ಕಿಮ್ಮನೆ ರತ್ನಾಕರ್, ಯೋಜನಾ ಆಯೋಗದ ಉಪಾಧ್ಯಕ್ಷ ಸಿ.ಎಂ.ಇಬ್ರಾಹಿಂ, ಮಾಜಿ ಶಾಸಕ ಬಿ.ಸಿ.ಪಾಟೀಲ್, ಪಕ್ಷದ ಅಭ್ಯರ್ಥಿ ಎಚ್.ಎಸ್.ಶಾಂತವೀರಪ್ಪಗೌಡ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ಪ್ರಸನ್ನಕುಮಾರ್ ಮುಂತಾದವರು ಪಾಲ್ಗೊಂಡಿದ್ದರು. [ಚಿತ್ರಕೃಪೆ : MLA Office Shimoga - 113]

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+