ಶಿವಮೊಗ್ಗ ಗಲಭೆ: ವಿಶ್ವನಾಥ್ ಕೊಲೆ ಆರೋಪಿಗಳ ಬಂಧನ
ಶಿವಮೊಗ್ಗ, ಫೆ. 25: ಶಿವಮೊಗ್ಗ ಕೋಮುಗಲಭೆ ಸಂದರ್ಭ ನಡೆದ ವಿಶ್ವನಾಥ್ ಶೆಟ್ಟಿ ಹತ್ಯೆಗೆ ಸಂಬಂಧಿಸಿ ಕುಂದಾಪುರ ಮೂಲದ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ.
ಕುಂದಾಪುರ ಎಂ.ಕೋಡಿ ಪೋಸ್ಟ್ ನಿವಾಸಿ ಮಹ್ಮದ್ ಮುಷಾರ್ (21), ಆಶೀದ್ ಅಹ್ಮದ್ ಬಿನ್ (32), ಅರ್ಷದ್ ಅಹ್ಮದ್ ( 27 ) ಮತ್ತು ವರ್ಷದ ಮಹ್ಮದ್ ಹನೀಫ್(43) ಬಂಧಿತ ಆರೋಪಿಗಳು. ಇನ್ನೊಬ್ಬ ಆರೋಪಿ ಮೊಹೀದ್ದೀನ್ ಎಂಬಾತ ತಲೆಮರೆಸಿಕೊಂಡಿದ್ದು ಆತನ ಬಂಧನಕಕ್ಕೆ ಕ್ರಮಕೈಗೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.[ಶಿವಮೊಗ್ಗದಲ್ಲಿ ಗುರುವಾರ ನಡೆದಿದ್ದೇನು?]

ಸಮಾವೇಶದ ವೇಳೆ ಗುಂಪು ಘರ್ಷಣೆಗೆ ಕಾರಣವಾಗಿದ್ದ 96 ಜನರನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಹೋಳಿ ಹಬ್ಬ ಮುಗಿಯುವವರೆಗೂ ನಗರದಲ್ಲಿ ಬಿಗಿ ಬಂದೋಬಸ್ತ್ ಮುಂದುವರಿಸಲಾಗುವುದು. ಪ್ರಕರಣಕ್ಕೆ ಸಂಬಂಧಿಸಿ ಇಲ್ಲಿಯವರೆಗೆ 200 ಜನರನ್ನು ವಿಚಾರಣೆಗೆ ಒಳಪಡಿಸಲಾಗಿದ್ದು 180 ಜನರನ್ನು ಬಂಧಿಸಲಾಗಿದೆ ಎಂದು ಪೂರ್ವ ವಲಯ ಐಜಿಪಿ ನಂಜುಂಡಸ್ವಾಮಿ ತಿಳಿಸಿದ್ದಾರೆ.
ಭದ್ರಾವತಿ ಡಿವೈಎಸ್ಪಿ ಸದಾನಂದ ನಾಯ್ಕ ಮತ್ತು ಅವರ ತಂಡ ಈ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಇದುವರೆಗೂ ಘಟನೆಗೆ ಸಂಬಂಧಿಸಿ ಸುಮಾರು 70 ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.[ಶಿವಮೊಗ್ಗ : ಯುವಕ ಕೊಲೆ, ಪಶು ವೈದ್ಯರಿಗೆ ಚಾಕು ಇರಿತ]
ಶಾಂತಿ ಸಭೆ ವೇಳೆ ಕಿತ್ತಾಟ
ವಾತಾವರಣ ತಿಳಿಗೊಳಿಸಲು ಕರೆದಿದ್ದ ಶಾಂತಿಸಭೆ ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರ ಕಿತ್ತಾಟಕ್ಕೆ ವೇದಿಕೆಯಾಯಿತು. ಸಭೆಯಲ್ಲಿ ಗಮನಾರ್ಹವಾದ ಯಾವ ವಿಚಾರಗಳು ಚರ್ಚೆಗೆ ಬರಲಿಲ್ಲ. ಶಾಸಕ ಕೆ.ಬಿ.ಪ್ರಸನ್ನ ಕುಮಾರ್ ಮಾತನಾಡಲು ಆರಂಭಿಸಿದ ತಕ್ಷಣ ಗಲಾಟೆ ಮತ್ತಷ್ಟು ಜೋರಾಯಿತು. ಅಲ್ಲಿಗೆ ಸಭೆಯನ್ನು ಮುಕ್ತಾಯ ಮಾಡಲಾಯಿತು.












Click it and Unblock the Notifications