ಶಿವಮೊಗ್ಗ: ರಾಘವೇಶ್ವರ ಶ್ರೀ ನೇತೃತ್ವಕ್ಕೆ ಪರ-ವಿರೋಧ
ಶಿವಮೊಗ್ಗ, ಏ. 10: ಸಾಗರ ತಾಲೂಕಿನ ಶರಾವತಿ ಹಿನ್ನೀರಿನ ಕಳಸವಳ್ಳಿಯಲ್ಲಿ ಇರುವ ಪವಿತ್ರ ಕ್ಷೇತ್ರ ಸಿಗಂದೂರು ಚೌಡೇಶ್ವರಿ ದೇವಸ್ಥಾನದಲ್ಲಿ ಏ.13ರಿಂದ 19ರವರೆಗೆ ಹಮ್ಮಿಕೊಂಡಿರುವ ‘ಪದಾರ್ಪಣ-25' ಕಾರ್ಯಕ್ರಮದ ಸಂಬಂಧ ಗೊಂದಲಗಳು ಉಂಟಾಗಿವೆ.
ಅಣೆಕಟ್ಟು ನಿರ್ಮಾಣದಿಂದ ದೇವಿಯ ಮೂಲ ಸ್ಥಳ ಶರಾವತಿ ಹಿನ್ನೀರಿನಲ್ಲಿ ಮುಳುಗಡೆಯಾದ ನಂತರ ಈಗಿರುವ ಜಾಗದಲ್ಲಿ ಪ್ರತಿಷ್ಠಾಪನೆ ಮಾಡಲಾಗಿತ್ತು. ಹೊಸ ಸ್ಥಳದಲ್ಲಿ ದೇವಾಲಯ ನಿರ್ಮಾಣವಾಗಿ 25 ವರ್ಷ ತುಂಬಿದ ಹಿನ್ನೆಲೆಯಲ್ಲಿ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.[ಅತ್ಯಾಚಾರ ಪ್ರಕರಣ ಎಲ್ಲಿಗೆ ಬಂತು]

ವಿವಾದವೇನು? ವಾರಗಳ ಕಾಲ ನಡೆಯುವ ಕಾರ್ಯಕ್ರಮದ ನೇತೃತ್ವವನ್ನು ಅತ್ಯಾಚಾರ ಆರೋಪ ಎದುರಿಸುತ್ತಿರುವ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿ ಸ್ವಾಮೀಜಿ ವಹಿಸಿಕೊಳ್ಳಲಿದ್ದಾರೆ ಎಂಬುದಕ್ಕೆ ಪರ-ವಿರೋಧದ ಅಭಿಪ್ರಾಯಗಳು ವ್ಯಕ್ತವಾಗಿವೆ.
‘ಅತ್ಯಾಚಾರ ಆರೋಪ ಎದುರಿಸುತ್ತಿರುವ ಸ್ವಾಮೀಜಿ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಲು ಬಿಡುವುದಿಲ್ಲ. ಮುಳುಗಡೆ ಸಂತ್ರಸ್ತರ ಕುಲದೇವರಾದ ಸಿಗಂದೂರು ದೇವಸ್ಥಾನದ ವಿಚಾರದಲ್ಲಿ ಅನವಶ್ಯಕವಾಗಿ ಸ್ವಾಮೀಜಿ ಹಸ್ತಕ್ಷೇಪ ಮಾಡುತ್ತಿದ್ದು ಗೋಕರ್ಣದಂತೆ ಸಿಗಂದೂರನ್ನೂ ಕಬಳಿಸುವ ಹುನ್ನಾರ ನಡೆದಿದೆ ಎಂಬುದು ಒಂದು ಗುಂಪಿನ ಆರೋಪ.[ಪ್ರೇಮಲತಾ ದಿವಾಕರ್ ಸಂದರ್ಶನ]
ಯಾವ ಕಾರಣಕ್ಕೂ ರಾಘವೇಶ್ವರ ಸ್ವಾಮೀಜಿ ಕಾರ್ಯಕ್ರಮದ ಮುಂದಾಳತ್ವ ವಹಿಸಲು ಬಿಡುವುದಿಲ್ಲ. ದೇವಾಲಯದ ಪ್ರಧಾನ ಅರ್ಚಕ ಎಸ್.ಪಿ.ಶೇಷಗಿರಿ ಭಟ್ ದೇವಾಲಯವನ್ನು ರಾಮಚಂದ್ರಾಪುರ ಮಠದ ಕೈ ವಶ ಮಾಡಲು ಮುಂದಾಗಿದ್ದಾರೆ ಎಂದು ಸಾಗರ ಪ್ರಾಂತ್ಯ ಯುವ ಆರ್ಯ ಈಡಿಗ ವೇದಿಕೆ ಅಧ್ಯಕ್ಷ ಸುಧಾಕರ ಕುಗ್ವೆ, ಪರಿಸರ ಹೋರಾಟಗಾರ ಕಬಸೆ ಅಶೋಕಮೂರ್ತಿ, ಸಿಗಂದೂರು ಭಕ್ತ ಮಂಡಳಿ ಸಂಚಾಲಕ ಗಿರೀಶ್ ಕೋವಿ ಸೇರಿದಂತೆ ವಿವಿಧ ಸಂಘಟನೆ ಮುಖಂಡರು ಆರೋಪ ಮಾಡಿದ್ದಾರೆ.
ಸ್ವಾಮೀಜಿಗಳೇ ಕಾರ್ಯಕ್ರಮದ ನೇತೃತ್ವ ವಹಿಸಿಕೊಳ್ಳಲಿ. ಅತ್ಯಾಚಾರ ಪ್ರಕರಣ ನ್ಯಾಯಾಲಯದಲ್ಲಿದ್ದು ಇನ್ನು ತೀರ್ಮಾನವಾಗಿಲ್ಲ. ಸ್ವಾಮೀಜಿಗಳ ಧಾರ್ಮಿಕ ಸ್ವಾತಂತ್ರ್ಯಕ್ಕೆ ಧಕ್ಕೆ ತರುವುದು ತರವಲ್ಲ ಎಂಬುದು ಮತ್ತೊಂದು ಗುಂಪಿನ ವಾದ.












Click it and Unblock the Notifications