ಬ್ಲ್ಯಾಕ್‌ಮೇಲ್‌ಗೆ ಹೆದರಿ ಆತ್ಮಹತ್ಯೆ: ಯುವಕ ಸಾವು, ಯುವತಿ ಸ್ಥಿತಿ ಗಂಭೀರ

ಶಿವಮೊಗ್ಗ, ನವೆಂಬರ್ 21: ಅವರಿಬ್ಬರೂ ಪ್ರೇಮಿಗಳು. ಮದುವೆಯಾಗಿ ಸುಖ ಸಂಸಾರ ನಡೆಸುವ ಕನಸು ಕಂಡವರು. ಆದರೆ ಆಗಿದ್ದೆ ಬೇರೆ.

ಇಬ್ಬರು ಒಟ್ಟಿಗೆ ಇರುವುದನ್ನು ನೋಡಿದ ಕಿಡಿಗೇಡಿಗಳು ಬ್ಲಾಕ್ ಮೇಲ್ ಮಾಡಿದ್ದರು.‌ ಕಿಡಿಗೇಡಿಗಳಿಗೆ ಪ್ರೇಮಿಗಳು ಸಾಕಷ್ಟು ಹಣವನ್ನೂ ನೀಡಿದ್ದರು. ಆದರೆ ಕಿಡಿಗೇಡಿಗಳ ಬ್ಲಾಕ್ ಮೇಲ್ ಹೆಚ್ಚಾಗುತ್ತಿದ್ದಂತೆ ಇಬ್ಬರೂ ಆತ್ಮಹತ್ಯೆ ಮಾಡಿಕೊಳ್ಳುವ ತೀರ್ಮಾನ ಮಾಡಿದ್ದರು.

ಹುಡುಗನ ಊರಿನಲ್ಲೇ ಆತನ ಜೊತೆಗೆ ಹುಡುಗಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ವಿಷ ಸೇವಿಸಿ ಒದ್ದಾಡುತ್ತಿದ್ದ ಇಬ್ಬರನ್ನು ಗಮನಿಸಿದ ಗ್ರಾಮಸ್ಥರು ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಿದ್ದರು. ‌

Shivamogga lovers suicide blackmail threat youth dead girl serious

ಆದರೆ ಹುಡುಗ ಬದುಕಲೇ ಇಲ್ಲ. ಹುಡುಗಿ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾಳೆ. ಬ್ಲಾಕ್ ಮೇಲ್ ಮಾಡಿದ ಯುವಕರ ವಿರುದ್ಧ ಪ್ರಕರಣ ದಾಖಲಾಗಿದೆ.

ಶಿವಮೊಗ್ಗ ತಾಲೂಕು ಮಂಡಘಟ್ಟ ಗ್ರಾಮದ ಯುವಕ ಸಂಜಯ್ ರಾಗಿಹೊಸಹಳ್ಳಿಯ ಯುವತಿಯನ್ನು ಪ್ರೀತಿಸುತ್ತಿದ್ದ. ಇಬ್ಬರೂ ಮದುವೆಯಾಗಲು ನಿರ್ಧರಿಸಿದ್ದರು. ಈ ವಿಷಯ ಹುಡುಗನ ಮನೆಯಲ್ಲೂ ತಿಳಿದಿತ್ತು.

ಪ್ರೇಮಿಗಳಿಬ್ಬರೂ ಒಟ್ಟಿಗೆ ಇದ್ದ ವಿಡಿಯೋವನ್ನು ಕಿಡಿಗೇಡಿಗಳು ಮಾಡಿಕೊಂಡಿದ್ದರು. ಜೊತೆಗೆ ಆರಂಭದಲ್ಲಿ ಸಂಜಯ್ ಗೆ ಕರೆ ಮಾಡಿ ಐದು ಸಾವಿರ ಹಣ ಕೊಡು ವಿಡಿಯೋ ಡಿಲೀಟ್ ಮಾಡುತ್ತೇವೆ ಎಂದಿದ್ದರು.‌ ಅದರಂತೆ ಸಂಜಯ್ ಹಣವನ್ನೂ ನೀಡಿದ್ದ.

ಆದರೆ ಇದೇ ರೀತಿ ಹಲವು ಬಾರಿ ಕಿಡಿಗೇಡಿಗಳು ಸಂಜಯ್ ನಿಂದ ಹಣ ಪಡೆದಿದ್ದಾರೆ. ಕೊನೆಗೆ ಐದು ಲಕ್ಷ‌ ರೂಪಾಯಿ ಹಣ ನೀಡಬೇಕು. ಇಲ್ಲದಿದ್ದರೆ ನಿಮ್ಮ ವಿಡಿಯೋವನ್ನು ವಾಟ್ಸಪ್, ಯೂ ಟ್ಯೂಬ್ ಹಾಗೂ ಫೇಸ್ ಬುಕ್ ನಲ್ಲಿ ಹರಿಬಿಡುವುದಾಗಿ ಹೆದರಿಸಿದ್ದಾರೆ. ಆಗ ಪ್ರೇಮಿಗಳಿಬ್ಬರೂ ಭಯಗೊಂಡಿದ್ದಾರೆ.

ನಮ್ಮ ಬಳಿ ಇಷ್ಟು ಹಣ ಕೊಡಲು ಸಾಧ್ಯವಿಲ್ಲ.‌ ಹಣ ಕೊಟ್ಟಿಲ್ಲ ಎಂದರೆ ನಮ್ಮ ವಿಡಿಯೋ ವೈರಲ್ ಮಾಡುತ್ತಾರೆ ಎಂದು ಭಯಗೊಂಡಿದ್ದಲ್ಲದೆ ಅಂದೇ ಆತ್ಮಹತ್ಯೆಯ ತೀರ್ಮಾನ ಮಾಡಿದ್ದಾರೆ.

ಸಂಜಯ್ ಪ್ರೇಯಸಿಯನ್ನು ತನ್ನ ಊರಿಗೆ ಕರೆದುಕೊಂಡು ಬಂದಿದ್ದಾನೆ. ಮಂಡಘಟ್ಟ ಗ್ರಾಮದ ಕೆರೆ ಸಮೀಪ ಇಬ್ಬರೂ ವಿಷ ಸೇವಿಸಿದ್ದಾರೆ. ವಿಷ ಸೇವಿಸಿದ ಬಳಿಕ ಸಂಜಯ್ ತನಗೆ ಕೆಲವರು ಬ್ಲಾಕ್ ಮೇಲ್ ಮಾಡಿದ್ದರಿಂದ ಇಬ್ಬರೂ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇವೆ ಎಂದು ತನ್ನ ಸ್ನೇಹಿತರಿಗೆ ತಿಳಿಸಿದ್ದಾನೆ.

ಕೂಡಲೇ ಆತನ ಸ್ನೇಹಿತರು ಗ್ರಾಮಸ್ಥರು ಹಾಗೂ ಮನೆಯವರಿಗೆ ವಿಷಯ ತಿಳಿಸಿ ಅಲ್ಲಿಗೆ ಧಾವಿಸಿದ್ದಾರೆ. ಅಸ್ವಸ್ಥಗೊಂಡಿದ್ದ ಪ್ರೇಮಿಗಳನ್ನು ಗ್ರಾಮಸ್ಥರು ಆಸ್ಪತ್ರೆಗೆ ದಾಖಲಿಸಿದ್ದಾರೆ.‌

ದುರಾದೃಷ್ಟವಶಾತ್ ಸಂಜಯ್ ಮಂಗಳವಾರ ಬೆಳಗ್ಗೆ ಸಾವನ್ನಪ್ಪಿದ್ದಾನೆ. ಯುವತಿಯ ಸ್ಥಿತಿ ಗಂಭೀರವಾಗಿದ್ದು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.

ಪ್ರೇಮಿಗಳಿಗೆ ಬ್ಲಾಕ್ ಮೇಲ್ ಮಾಡಿದ್ದು ಶಿವಮೊಗ್ಗ ತಾಲೂಕು ಆಯನೂರಿನ ಯಾಸಿನ್, ಯಾಸಿರ್, ಅಯಾನ್, ಉಸ್ಮಾನ್ ಎನ್ನುವುದು ಖಚಿತಗೊಂಡಿದ್ದು, ಅವರ ವಿರುದ್ಧ ಕುಂಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆಯನೂರು, ತ್ಯಾವರೆಕೊಪ್ಪ ಭಾಗದಲ್ಲಿ ಇಂಥ ಬ್ಲಾಕ್ ಮೇಲ್ ಹಾಗೂ ಹೆದ್ದಾರಿ ದರೋಡೆ ಪ್ರಕರಣಗಳು ಹೆಚ್ಚಿದ್ದು, ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+