ಶಿವಮೊಗ್ಗದಲ್ಲಿ ಉದ್ವಿಗ್ನ: ಕೆಎಸ್ ಈಶ್ವರಪ್ಪ ಕಾಂಗ್ರೆಸ್ ಸರ್ಕಾರಕ್ಕೆ ಕೊಟ್ಟ ವಾರ್ನಿಂಗ್?
ಬೆಂಗಳೂರು, ಅಕ್ಟೋಬರ್ 02: ಮಲೆನಾಡು ಜಿಲ್ಲೆಯ ಶಿವಮೊಗ್ಗ ಜಿಲ್ಲೆಯಲ್ಲಿ ಈದ್ ಮಿಲಾದ್ ಆಚರಣೆ ವೇಳೆ ಮೆರವಣಿಗೆ ನಡೆಸುವಾಗಿ ಗಲಾಟೆ ಆಗಿದೆ. ಪೊಲೀಸರ ಮೇಲೆ ಕಲ್ಲು ತೂರಾಟ ನಡೆದಿದ್ದು, ಸದ್ಯ ಅಲ್ಲೀಗ ಉದ್ವಿಗ್ನ ಸ್ಥಿತಿ ಉಂಟಾಗಿದೆ. ಈ ಸಂಬಂಧ ಪ್ರತಿಕ್ರಿಯಿಸಿರುವ ಬಿಜೆಪಿ ನಾಯಕ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಪೊಲೀಸರು ವಿರುದ್ಧ ಹರಿಹಾಯ್ದಿದ್ದಾರೆ. ಹಿಂದು ಸಮಾಜಕ್ಕೂ ತಲ್ವಾರ್ ಹಿಡಿದು ಈ ರೀತಿ ಉತ್ತರ ಕೊಡಲು ಬರುತ್ತದೆ ಎಂದು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಈಶ್ವರಪ್ಪ ಅವರ ವಿಡಿಯೋವನ್ನು ಕರ್ನಾಟಕ ಬಿಜೆಪಿ ಟ್ವೀಟ್ ಮಾಡಿದೆ. ಅದರಲ್ಲಿ 'ಪೊಲೀಸರು ರಾಜ್ಯ ಸರ್ಕಾರ ಸರ್ಕಾರಕ್ಕೆ ಹೆದರಿದ್ದಾರೆ. ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರು ಶಿವಮೊಗ್ಗದ ಈದ ಮಿಲಾದ್ ವೇಳೆ ಯಾರೂ ತಲ್ವಾರ್ ಹಿಡಿದಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ಇದು ಖಂಡನೀಯ ಎಂದರು.

ರಾಜ್ಯ ಕಾಂಗ್ರೆಸ್ ಸರ್ಕಾರ ಮುಸ್ಲಿಮರು ಗುಲಾಮರಾಗಿದ್ದಾರೆ. ವ್ಯವಸ್ಥಿತವಾಗಿ ಈದ್ ಮಿಲಾದ್ ಮೆರವಣಿಗೆಯನ್ನು ನಡೆಸಲಾಗಿದೆ. ಹಿಂದುಗಳನ್ನು ಪ್ರಚೋದಿಸುವಂತೆ ವಿವಿಧ ಏರಿಯಾಗಳಲ್ಲಿ ಔರಂಗಜೇಬ, ಟಿಪ್ಪವಿನಂತರ ದೇಶದ್ರೋಹಿಗಳ ದೊಡ್ಡ ಪೋಟೋ ಹಿಡಿದು ಮೆರವಣಿಗೆ ಮಾಡಿದ್ದಾರೆ.
ಹಿಂದೂ ಸಮಾಜ ಹೆದರಿಸಲು ಮೆರವಣಿಗೆ
ಈ ಫೋಟೊದಲ್ಲಿರುವವರುಯಾರಿಗೂ ಸ್ಪೋರ್ತಿ ಕೊಟ್ಟಿಲ್ಲ. ಇದು ಮುಸ್ಲಿಂರ ಹಬ್ಬವಲ್ಲ. ಹಿಂದು ಸಮಾಜವನ್ನು ಹೆದರಿಸಲು ಮಾಡಿದ ಮೆರವಣಿಗೆ ಇದು ಎಂದು ಅವರು ಗಂಭೀರ ಆರೋಪ ಮಾಡಿದರು. ಇದಕ್ಕೆ ಹಿಂದೂಗಳು ಹೆದರಲ್ಲ. ನಾವು ಗೊಂದಲ ಇಲ್ಲದೇ ರಾಗಿಗುಡ್ಡದಲ್ಲಿ ಗಣೇಶ ವಿಜರ್ಸನೆ ಮಾಡಿದ್ದೇವೆ ಎಂದು ಅವರು ಟಾಂಗ್ ನೀಡಿದರು.
ಕಾಂಗ್ರೆಸ್ ಸರ್ಕಾರದಲ್ಲಿ ಪೊಲೀಸರು ಅಸಹಾಯಕರಾಗಿದ್ದಾರೆ. ಮತಾಂಧರ ಕಿಡಿಗೇಡಿತನಕ್ಕೆ ಅವರದೇ ಭಾಷೆಯಲ್ಲಿ ಉತ್ತರ ನೀಡಲು ಹಿಂದೂ ಸಮಾಜವೂ ಸಿದ್ಧವಿದೆ. ಕಾಂಗ್ರೆಸ್ ಸರ್ಕಾರ ಮತಾಂಧರ ಗುಲಾಮನಂತೆ ವರ್ತಿಸುತ್ತಿದೆ.
— BJP Karnataka (@BJP4Karnataka) October 2, 2023
- ಶ್ರೀ @eshwarappa, ಮಾಜಿ ಸಚಿವರು
ಪೂರ್ಣ ವಿಡಿಯೋ ವೀಕ್ಷಿಸಿ: https://t.co/eicnS4SL0r pic.twitter.com/ax0QFAvGmH
ಅದೇ ರಾಗಿಗುಡ್ಡದಲ್ಲಿಯೇ ಮುಸ್ಲಿಂರ ಮೆರವಣಿಗೆ ವೇಳೆ 150-200 ಜನ ಕಲ್ಲು, ಲಾಠಿ, ಖಡ್ಗ ಹಿಡಿದು ಓಡಾಟ ನಡೆಸಿದ್ದಾರೆ. ಪೊಲೀಸ್ ಅಧಕಾರಿಗಳು ನಿಗದಿಪಡಿಸಿದ ಜಾಗ ಬಿಟ್ಟು ಶಿವಮೊಗ್ಗ ಜಿಲ್ಲೆಯಾದ್ಯಂತ ಓಡಾಡಿದ್ದಾರೆ. ಮೆರವಣಿಗೆ ನಡೆಸಿದ್ದಾರೆ. ಸಂಜೆ 6ರವರೆಗೆ ಮಾತ್ರ ಅವಕಾಶ ನೀಡಲಾಗಿತ್ತು. ಹೀಗಿದ್ದರೂ ಸಹಿತ 7.30 ಗಂಟೆವರೆಗೆ ಮೆರವಣಿಗೆ ಮಾಡಿದ್ದಾರೆ.
ಹಿಂದು ಸಮಾಜ ಜಗ್ಗುವುದಿಲ್ಲ: ಈಶ್ವರಪ್ಪ
ಇದರಿಂದ ಗಲಾಟೆ ನಡೆದಿದೆ. ಇದೇ ರೀತಿ ತಲ್ವಾರ ಹಿಡಿದು ಹಿಂದು ಸಮಾಜಕ್ಕೂ ಉತ್ತರ ನೀಡಲು ಬರುತ್ತದೆ ಎಂದು ಅವರು ಮುಸ್ಲಿಂ ಗುಂಡಾಗಳಿಗೆ ಗೃಹ ಸಚಿವರಿಗೆ, ಸರ್ಕಾರಕ್ಕೆ ತಿಳಿಸುತ್ತೇನೆ. ಈ ರೀತಿಯ ಘಟನೆಗಳಿಗೆ ಹಿಂದೂ ಸಮಾಜ ಜಗ್ಗುವುದಿಲ್ಲ ಎಂದು ಅವರು ಗುಡುಗಿದರು.

ಘಟನೆಗೆ ಬೇಸರ ವ್ಯಕ್ತಪಡಿಸಿದ ಅವರು ಗೃಹ ಇಲಾಖೆ, ಶಿವಮೊಗ್ಗ ಪೊಲೀಸರು ಬದುಕಿದ್ದಾರೆಯೇ?, ರಾಜ್ಯದ ಸರ್ಕಾರ ಇದಿಯಾ?, ಇದು ಸಣ್ಣ ಪುಟ್ಟ ಘಟನೆ ಅಲ್ಲ, ಹೀಗಿದ್ದರೂ ಪೊಲೀಸರು ಕ್ರಮ ಕೈಗೊಳ್ಳುತ್ತೇವೆ ಎನ್ನುತ್ತಿದ್ದಾರೆ. ಹಿಂದು ಸಮಾಜವನ್ನು ಹಗುರವಾಗಿ ಪರಿಗಣಿಸಬಾರದು ಎಂದು ಕೆಎಸ್ ಈಶ್ವರಪ್ಪ ಹೇಳಿದರು.
ಶಿವಮೊಗ್ಗದ ಈದ್ ಮಿಲಾದ್ ಆಚರಣೆ ವೇಳೆ ಗಲಾಟೆ ನಡೆದಿದೆ. ಕಿಡಿಗೇಡಿಗಳ ಗುಂಪು ಯುವಕರ ಮೇಲೆ ಕಲ್ಲು ತೂರಾಟ ನಡೆಸಿದೆ. ಇದರಿಂದ ಪರಿಸ್ಥಿತಿ ಉದ್ವಿಗ್ನಗೊಂಡಿದೆ. ಬೂದಿ ಮುಚ್ಚಿದ ಕೆಂಡಂದಂತಿದ್ದು, ಈ ಭಾಗದಲ್ಲಿ ನಿಷೇಧಾಜ್ಞೆ ಸೆಕ್ಷನ್ 144 ವಿಧಿಸಲಾಗಿದೆ. ಪ್ರಕರಣ ಸಂಬಂಧ ಪೊಲೀಸರು 10ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ.
-
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
ಕಾಂತಾರ ವಿವಾದ: ಮೈಸೂರು ಚಾಮುಂಡಿ ಬೆಟ್ಟಕ್ಕೆ ಬರ್ತೀನಿ, ಕ್ಷಮೆಯೂ ಕೇಳ್ತೀನಿ ಎಂದ ನಟ ರಣವೀರ್ ಸಿಂಗ್












Click it and Unblock the Notifications