• search
  • Live TV
ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕೊರೊನಾ ವೈರಸ್ ನಿಯಂತ್ರಿಸಲು ಶಿವಮೊಗ್ಗ ಡಿಸಿ ಹೊಸ ಪ್ಲಾನ್

By ಶಿವಮೊಗ್ಗ ಪ್ರತಿನಿಧಿ
|

ಶಿವಮೊಗ್ಗ, ಮಾರ್ಚ್ 24: ಕೊರೊನಾ ವೈರಸ್ ನಿಯಂತ್ರಿಸಲು ಶಿವಮೊಗ್ಗ ಜಿಲ್ಲಾಧಿಕಾರಿ ಕೆ.ಬಿ ಶಿವಕುಮಾರ್ ಈಗಾಗಲೇ ಜಿಲ್ಲೆಯಾದ್ಯಂತ ಐಪಿಸಿ 144 ಸೆಕ್ಷನ್ ಜಾರಿಗೊಳಿಸಿದ್ದಾರೆ.

ಕೊರೊನಾ ವೈರಸ್ ಸಂಬಂಧಿಸಿದಂತೆ ಈಗಾಗಲೇ ಮನೆಯಲ್ಲಿ ನಿಗಾದಲ್ಲಿರುವವರ ಮೇಲೆ ಇನ್ನೂ ಹೆಚ್ಚಿನ ನಿಗಾವಹಿಸಲು ಶಿವಮೊಗ್ಗ ಜಿಲ್ಲಾಧಿಕಾರಿ ಪ್ಲಾನ್ ಮಾಡಿದ್ದಾರೆ.

ನಿಗಾದಲ್ಲಿರುವವರ ಮನೆಯ ಮುಂದೆ ಪೋಸ್ಟರ್ ಹಚ್ಚಲು ಶಿವಮೊಗ್ಗ ಡಿಸಿ ಶಿವಕುಮಾರ್ ಅವರು ಹೊಸ ಕ್ರಮ ತೆಗೆದುಕೊಂಡಿದ್ದಾರೆ.

ಪೋಸ್ಟರ್ ನಲ್ಲಿ ನಿಗಾದಲ್ಲಿರುವ ವ್ಯಕ್ತಿಗಳು ಎಷ್ಟು ದಿನ ನಿಗಾದಲ್ಲಿರಬೇಕು ಎಂಬುದನ್ನು ತಿಳಿಸಿದ್ದಾರೆ.

ಮನೆಯಲ್ಲಿರುವ ಜನರ ಸಂಖ್ಯೆ ಎಷ್ಟು ಎಂಬ ಸಂಪೂರ್ಣ ಮಾಹಿತಿ ಪೋಸ್ಟರ್ ನಲ್ಲಿ ಇರಲಿದೆ. ಈ ಮನೆಗೆ ಯಾರೂ ಬರಬಾರದು ಎಂಬ ಎಚ್ಚರಿಕೆಯೂ ಪೋಸ್ಟರ್ ನಲ್ಲಿದೆ. ಹೀಗೆ ಪೋಸ್ಟರ್ ಹಚ್ಚಿದ ಮನೆಗಳನ್ನು ದೂರದಿಂದಲೇ ನಿಗಾದಲ್ಲಿಡುವ ರೂರಲ್ ಟಾಸ್ಕ್ ಫೋರ್ಸ್ ರಚನೆ ಮಾಡಲಾಗಿದೆ.

ಕಂದಾಯ ಇಲಾಖೆ, ಪಂಚಾಯತ್ ರಾಜ್ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಒಳಗೊಂಡ ಟಾಸ್ಕ್ ಫೋರ್ಸ್ ಇಂತಹ ಮನೆಗಳ ಮೇಲೆ ನಿಗಾವಹಿಸಲಿದ್ದಾರೆ.

English summary
Shivamogga DC has planned to take further care of those who are already at home with regard to coronavirus.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X