ಶಿವಮೊಗ್ಗ-ಬೆಂಗಳೂರು ಶತಾಬ್ದಿ ರೈಲು 6 ದಿನಕ್ಕೆ ವಿಸ್ತರಣೆ
ಶಿವಮೊಗ್ಗ, ಮಾರ್ಚ್ 05 : ಶಿವಮೊಗ್ಗ-ಬೆಂಗಳೂರು ಜನ ಶತಾಬ್ದಿ ರೈಲನ್ನು 6 ದಿನಗಳಿಗೆ ವಿಸ್ತರಣೆ ಮಾಡಲಾಗಿದೆ. ಪ್ರಸ್ತುತ ವಾರದಲ್ಲಿ ನಾಲ್ಕು ದಿನಗಳ ಕಾಲ ರೈಲು ಉಭಯ ನಗರಗಳ ನಡುವೆ ಸಂಚಾರ ನಡೆಸುತ್ತಿದೆ.
ರೈಲ್ವೆ ಇಲಾಖೆ ಶಿವಮೊಗ್ಗ-ಬೆಂಗಳೂರು ಜನ ಶತಾಬ್ದಿ ರೈಲನ್ನು 6 ದಿನಗಳಿಗೆ ವಿಸ್ತರಣೆ ಮಾಡಲು ಒಪ್ಪಿಗೆ ಕೊಟ್ಟಿದೆ. ಮಾರ್ಚ್ 7,2019 ರಿಂದ ರೈಲು ಮಂಗಳವಾರ ಹೊರತುಪಡಿಸಿ ಉಳಿದ ದಿನ ಸಂಚಾರ ನಡೆಸಲಿದೆ.
ಫೆ.3ರಂದು ಶಿವಮೊಗ್ಗ-ಬೆಂಗಳೂರು ನಡುವೆ ಜನ ಶತಾಬ್ದಿ ರೈಲು ಸಂಚಾರವನ್ನು ಆರಂಭಿಸಲಾಗಿತ್ತು. ಮೊದಲು ವಾರದ ಮೂರು ದಿನ ರೈಲು ಸಂಚಾರ ನಡೆಸಲಿದೆ ಎಂದು ಹೇಳಲಾಗಿತ್ತು, ಬಳಿಕ ಅದನ್ನು ನಾಲ್ಕು ದಿನಗಳಿಗೆ ವಿಸ್ತರಣೆ ಮಾಡಲಾಗಿತ್ತು.

ಶಿವಮೊಗ್ಗ ಟೌನ್ ನಿಲ್ದಾಣದಿಂದ ಹೊರಡುವ ರೈಲು ಬೆಂಗಳೂರಿನ ಯಶವಂತಪುರ ರೈಲು ನಿಲ್ದಾಣದ ತನಕ ಸಂಚಾರ ನಡೆಸಲಿದೆ. 14 ಬೋಗಿಯ ರೈಲಿನಲ್ಲಿ 7 ಎಸಿ ಕೋಚ್‌ಗಳಿವೆ.
#ಶಿವಮೊಗ್ಗ - #ಯಶವಂತಪುರ ಜನ ಶತಾಬ್ದಿ ಎಕ್ಸ್ ಪ್ರೆಸ್ ಮಾರ್ಚ್ 7ರಿಂದ ವಾರದಲ್ಲಿ 6 ದಿನ ಸಂಚಾರ (ಮಂಗಳವಾರ ಹೊರತುಪಡಿಸಿ)#Shivamogga - #Yeshwanthpur JanShatabdi exp to run 6 days week expect tuesday.@BYRBJP @BSYBJP ಮಲೆನಾಡಿಗರಿಗೆ ಉತ್ತಮ ರೈಲು ಸೇವೆ ಹೆಚ್ಚಿಸುವ ತಮ್ಮ ಪ್ರಯತ್ನಕ್ಕೆ ಅಭಿನಂದನೆಗಳು ಸರ್ pic.twitter.com/xpddrUyCiJ
— Karnataka Rail Users (@KARailway) March 5, 2019
ವೇಳಾಪಟ್ಟಿ : ಬೆಳಗ್ಗೆ 5.15ಕ್ಕೆ ಶಿವಮೊಗ್ಗದಿಂದ ಹೊರಡುವ ರೈಲು 10.10ಕ್ಕೆ ಯಶವಂತಪುರ ತಲುಪಲಿದೆ. ಯಶವಂತಪುರದಿಂದ ಸಂಜೆ 5.30ಕ್ಕೆ ಹೊರಡುವ ರೈಲು ರಾತ್ರಿ 10.25ಕ್ಕೆ ಶಿವಮೊಗ್ಗಕ್ಕೆ ತಲುಪಲಿದೆ. ಭದ್ರಾವತಿ, ಕಡೂರು ಮತ್ತು ತುಮಕೂರಿನಲ್ಲಿ ನಿಲುಗಡೆಗೊಳ್ಳಲಿದೆ.












Click it and Unblock the Notifications