ತಾಕತ್ತಿದ್ದರೆ ಎಂಪಿ ಸ್ಥಾನ ಗೆದ್ದು ತೋರಿಸಿ: ದೇವೇಗೌಡರಿಗೆ ಯಡಿಯೂರಪ್ಪ ಸವಾಲು
Recommended Video

ಶಿವಮೊಗ್ಗ, ಅಕ್ಟೋಬರ್ 25: ತಾಕತ್ತಿದ್ದರೆ ಮೂರು ಎಂಪಿ ಸ್ಥಾನಗಳನ್ನು ಗೆದ್ದು ತೋರಿಸಿ ಎಂದು ಬಿಎಸ್ ಯಡಿಯೂರಪ್ಪ ಜೆಡಿಎಸ್ ನಾಯಕ ಎಚ್ ಡಿ ದೇವೇಗೌಡ ಅವರಿಗೆ ಸವಾಲು ಹಾಕಿದರು.
ಸೊರಬದಲ್ಲಿ ಪ್ರಚಾರ ನಡೆಸಿದ ಯಡಿಯೂರಪ್ಪ, ತಾವು ಸಿಎಂ ಆಗಬಾರದು ಎಂಬ ಕಾರಣಕ್ಕೆ ತಾನೇ 37 ಸೀಟುಗಳನ್ನು ಪಡೆದಿರುವ ನೀವು ಕಾಂಗ್ರೆಸ್ ಜೊತೆ ಸೇರಿಕೊಂಡು ಸರ್ಕಾರ ರಚಿಸಿರುವುದು ಎಂದು ದೇವೇಗೌಡರನ್ನು ಟೀಕಿಸಿದರು.
ದಕ್ಷಿಣದಲ್ಲಿ ಬಿಜೆಪಿಯ ಬಾಗಿಲು ಮುಚ್ಚುವುದಾಗಿ ಹೇಳಿರುವ ದೇವೇಗೌಡರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಅವರು, ದಕ್ಷಿಣ ಭಾರತದಲ್ಲಿ ಬಿಜೆಪಿ ಹೆಬ್ಬಾಗಿಲು ಮುಚ್ಚಿಸೋಕೆ ನೀವು ಯಾರು? ವೆಂಕ, ನಾಣಿ, ಸೀನ ಅಂತ ನೀವು ಇರುವುದೇ ಮೂರು ಜನ. ಮೊದಲು ಮೂರು ಲೋಕಸಭೆ ಉಪ ಚುನಾವಣೆಯಲ್ಲಿ ಗೆದ್ದುಬನ್ನಿ ಎಂದು ಸವಾಲು ಹಾಕಿದರು.

ಉಪ ಚುನಾವಣೆಯಲ್ಲಿ ಐದು ಕ್ಷೇತ್ರಗಳ ಪೈಕಿ ನಾಲ್ಕರಲ್ಲಿ ಬಿಜೆಪಿ ಈಗಾಗಲೇ ಗೆದ್ದಿದೆ. ಇನ್ನೊಂದು ಕ್ಷೇತ್ರ ಗೆಲ್ಲುವುದು ಮಾತ್ರ ಬಾಕಿ ಇದೆ ಎಂದರು.
ತಾವು ಒಂದಾಗಿರುವುದಾಗಿ ಸಿದ್ದರಾಮಯ್ಯ ಮತ್ತು ದೇವೇಗೌಡರು ಬೀಗುತ್ತಿದ್ದಾರೆ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಅವರನ್ನು ಸೋಲಿಸಿದ್ದು ಯಾರು? ದಸರಾ ವೇಳೆ ಚಾಮುಂಡೇಶ್ವರಿ ಉತ್ಸವ ನಡೆಯುವಾಗ ಸಿದ್ದರಾಮಯ್ಯ ಎಲ್ಲಿ ಹೋಗಿದ್ದರು? ಅವೆಲ್ಲವನ್ನೂ ಜನರು ಮರೆತಿಲ್ಲ. ಈ ಎರಡೂ ಪಕ್ಷಗಳ ನಡುವೆ ಯಾವ ಹೊಂದಾಣಿಕೆಯೂ ಇಲ್ಲ.
ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ ಈ ಹಿಂದೆಯೂ ಅನೇಕ ಬಾರಿ ಪರಸ್ಪರ ಆರೋಪ ಮಾಡಿಕೊಂಡಿದ್ದಾರೆ. ಅದೆಲ್ಲವನ್ನೂ ಮರೆತಂತೆ ನಟಿಸುತ್ತಿದ್ದಾರೆ ಎಂದರು.












Click it and Unblock the Notifications