ಪಕ್ಷ ಬಿಟ್ಟವರ ಬಗ್ಗೆ ನಾನು ಮಾತನಾಡುವುದಿಲ್ಲ : ಯಡಿಯೂರಪ್ಪ

ಪ್ರಶ್ನೆ : ಕ್ಷೇತ್ರದಲ್ಲಿ ನಿಮ್ಮ ನಿಜವಾದ ಎದುರಾಳಿ ಯಾರು?

ಯಡಿಯೂರಪ್ಪ: ಈ ಬಗ್ಗೆ ಪ್ರತಿಕ್ರಿಯೆ ಇದು ಸೂಕ್ತ ಸಮಯವಲ್ಲ. ನಂ.2 ಪಟ್ಟಕ್ಕಾಗಿ ಜೆಡಿಎಸ್ ಮತ್ತು ಕಾಂಗ್ರೆಸ್ ನಲ್ಲಿ ಪೈಪೋಟಿ ನಡೆದಿದೆ. ಈ ಬಗ್ಗೆ ಇಷ್ಟು ಬೇಗ ಪ್ರತಿಕ್ರಿಯೆ ನೀಡುವುದಿಲ್ಲ. ಎಲ್ಲವನ್ನು ಜನರು ತೀರ್ಮಾನಿಸುತ್ತಾರೆ.

ಪ್ರಶ್ನೆ : ಬಿಪಿ ಹರೀಶ್, ಲಕ್ಷ್ಮೀನಾರಾಯಣ್ ಪಕ್ಷ ಬಿಡಲು ಕಾರಣವೇನು?

ಯಡಿಯೂರಪ್ಪ: ಪಕ್ಷದಲ್ಲಿ ಇಲ್ಲದವರ ಬಗ್ಗೆ ನಾನು ಏನು ಮಾತನಾಡುವುದಿಲ್ಲ. ಅವರು ಎಲ್ಲೇ ಇರಲಿ ಚೆನ್ನಾಗಿರಲಿ ಎಂದು ಆಶಿಸುತ್ತೇನೆ. ಪಕ್ಷ ಬಿಟ್ಟ ಮೇಲೆ ಅವರ ಬಗ್ಗೆ ಏಕೆ ಚರ್ಚೆ ಮಾಡಬೇಕು.

Shimoga BJP candidate BS Yeddyurappa interview3

ಪ್ರಶ್ನೆ : ರಾಜ್ಯದಲ್ಲಿ ಎಷ್ಟು ಸ್ಥಾನ ಗಳಿಸುತ್ತೀರಿ? ಸಮೀಕ್ಷೆ ಗಳ ಬಗ್ಗೆ ಏನು ಹೇಳುತ್ತೀರಿ?

ಯಡಿಯೂರಪ್ಪ : ದೇಶದಲ್ಲಿ ಹಲವಾರು ಸಮೀಕ್ಷೆಗಳು ನಡೆಯುತ್ತಿವೆ. ಎಲ್ಲಾ ಸಮೀಕ್ಷೆಗಳು ಎನ್ ಡಿಎ ಮತ್ತು ಬಿಜೆಪಿಗೆ ಹೆಚ್ಚು ಸ್ಥಾನ ನೀಡುತ್ತಿವೆ. ದಿನದಿಂದ ದಿನಕ್ಕೆ ಬಿಜೆಪಿಗೆ ಶಕ್ತಿ ಹೆಚ್ಚುತ್ತಿದೆ. ನಾನು ಇಲ್ಲಿಯವರೆಗೆ ವಿವಿಧ ಜಿಲ್ಲೆಗಳಲ್ಲಿ ಪ್ರಚಾರ ನಡೆಸಿದ್ದೇನೆ. ಖಂಡಿತ ರಾಜ್ಯದಲ್ಲಿ 20 ಸ್ಥಾನಗಳನ್ನು ಗಳಿಸುತ್ತೇವೆ.

ಪ್ರಶ್ನೆ : ರಾಜ್ಯದಲ್ಲಿ ಇನ್ನೂ ಯಾವ ಜಿಲ್ಲೆಗಳಲ್ಲಿ ನೀವು ಪ್ರಚಾರ ಮಾಡುತ್ತೀರಿ?

ಯಡಿಯೂರಪ್ಪ : ಮೈಸೂರು, ಚಿಕ್ಕಮಗಳೂರು, ಚಾಮರಾಜನಗರ, ಕಾರವಾರ, ದಾವಣಗೆರೆಯಲ್ಲಿ ಪ್ರಚಾರ ಮಾಡಬೇಕಾಗಿದೆ. ನರೇಂದ್ರ ಮೋದಿ ಅವರ ಜೊತೆ ಹಾವೇರಿ ಮತ್ತು ಚಿಕ್ಕಮಗಳೂರಿನಲ್ಲಿ ಪ್ರಚಾರ ನಡೆಸುತ್ತೇನೆ. ನಂತರ ಶಿಕಾರಿಪುರದಲ್ಲಿ ಪ್ರಚಾರ ನಡೆಸಬೇಕು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+