ಲಂಚ ಸ್ವೀಕರಿಸುತ್ತಿದ್ದ ಶಿಕಾರಿಪುರ ಸರ್ವೆ ಅಧಿಕಾರಿಯ ಬಂಧನ
ಶಿವವೊಗ್ಗ, ಜೂನ್ 29 : ಕೃಷಿಕರೊಬ್ಬರಿಂದ ಲಂಚ ಸ್ವೀಕರಿಸುತ್ತಿದ್ದ ಶಿಕಾರಿಪುರದ ಸರ್ವೆ ಅಧಿಕಾರಿ ಭಾಸ್ಕರ್ ರನ್ನು ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ರೆಡ್ ಹ್ಯಾಂಡ್ ಆಗಿ ಬಲೆಗೆ ಕೆಡವಿದ್ದಾರೆ.
ಭಾಸ್ಕರ್ ರವರು ಜಮೀನಿನ ಸರ್ವೆ ಮಾಡಿಕೊಡಲು ರೈತರೊಬ್ಬರ ಬಳಿ 3000 ಲಂಚ ಕೇಳಿದ್ದರು. ಅದರಂತೆ ಕೃಷಿಕರಿಂದ 2000 ರೂಪಾಯಿ ಲಂಚ ಸ್ವೀಕರಿಸುತ್ತಿದ್ದ ಸಂದರ್ಭ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಅವರನ್ನು ಬಂಧಿಸಿದ್ದಾರೆ.

ಜಮೀನಿನ ಸರ್ವೆ ಮಾಡಿ ಹದ್ದುಬಸ್ತು ಮಾಡಿಕೊಡಲು 3 ಸಾವಿರ ರು. ಲಂಚ ನೀಡುವಂತೆ ಒತ್ತಾಯಿಸಿರುತ್ತಾರೆ. ನಂತರ 2 ಸಾವಿರ ನೀಡುವಂತೆ ಒಪ್ಪಿಕೊಂಡಿರುತ್ತಾರೆ. ಈ ಬಗ್ಗೆ ಅರ್ಜಿದಾರ ಶಿವಮೊಗ್ಗ ಜಿಲ್ಲಾ ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರು ಸಲ್ಲಿಸಿದ್ದರು.
ಈ ಹಿನ್ನೆಲೆಯಲ್ಲಿ ಶಿಕಾರಿಪುರ ತಾಲೂಕು ಭೂಮಾಪಕ ಕಚೇರಿಗೆ ಆಗಮಿಸಿದ ಎಸಿಬಿ ಅಧಿಕಾರಿಗಳು ಕೃಷಿಕರೊಬ್ಬರಿಂದ ನಿಂದ ಭಾಸ್ಕರ್ ಲಂಚ ಸ್ವೀಕರಿಸುತ್ತಿದ್ದ ವೇಳೆ ದಾಳಿ ನಡೆಸಿ, ಬಂಧಿಸಿದ್ದಾರೆ.












Click it and Unblock the Notifications