Get Updates
Get notified of breaking news, exclusive insights, and must-see stories!

ಸಾಗರ-ಶಿವಮೊಗ್ಗ-ವಿಜಯಪುರ ಸ್ಲೀಪರ್ ಪಲ್ಲಕ್ಕಿ ಬಸ್, ವೇಳಾಪಟ್ಟಿ

ಶಿವಮೊಗ್ಗ, ನವೆಂಬರ್ 21: ಕೆಎಸ್ಆರ್‌ಟಿಸಿ ಈಗಾಗಲೇ 'ಪಲ್ಲಕ್ಕಿ' ಮಾದರಿಯ ನಾನ್ ಎಸಿ ಸ್ಲೀಪರ್ ಬಸ್‌ಗಳನ್ನು ಸಾಗರ, ಸೊರಬ, ಶಿಕಾರಿಪುರ ಶಿವಮೊಗ್ಗ ಮಾರ್ಗವಾಗಿ ಬೆಂಗಳೂರಿಗೆ ಸಂಚಾರ ನಡೆಸುತ್ತಿದೆ. ಇದೇ ಮಾದರಿ ಮತ್ತೊಂದು ಮಾರ್ಗದಲ್ಲಿ 'ಪಲ್ಲಕ್ಕಿ' ಬಸ್ ಸೇವೆ ಆರಂಭವಾಗಿದೆ.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್ಆರ್‌ಟಿಸಿ) ಶಿವಮೊಗ್ಗ ವಿಭಾಗದ ಸಾಗರ ಘಟಕದಿಂದ ಸಾಗರ- ಶಿವಮೊಗ್ಗ-ವಿಜಯಪುರ ಮಾರ್ಗ ವಯಾ ಹರಿಹರ, ಹೊಸಪೇಟೆ, ಇಳಕಲ್ 'ಪಲ್ಲಕ್ಕಿ' ಬಸ್ ಸೇವೆ ಆರಂಭಿಸಲಾಗಿದೆ.

Sagara Shivamogga Vijayapura KSRTC Pallaki Non Ac Sleeper Bus Schedule

ನವೆಂಬರ್ 19ರಂದು ಈ ಮಾರ್ಗದಲ್ಲಿ ನೂತನವಾಗಿ 2 ನಾನ್ ಎಸಿ ಸ್ಲೀಪರ್ 'ಪಲ್ಲಕ್ಕಿ' ಬಸ್‌ಗಳ ಸಂಚಾರ ಆರಂಭವಾಗಿದೆ ಎಂದು ಕರಾರಸಾನಿ ವಿಭಾಗೀಯ ನಿಯಂತ್ರಣಾಧಿಕಾರಿಗಳು ತಿಳಿಸಿದ್ದಾರೆ. ಮಲೆನಾಡು ಮತ್ತು ಉತ್ತರ ಕರ್ನಾಟಕ ಭಾಗಕ್ಕೆ ಸಂಪರ್ಕಿಸುವ ಬಸ್ ಇದಾಗಿದೆ.

ಪಲ್ಲಕ್ಕಿ ಬಸ್ ವೇಳಾಪಟ್ಟಿ; ಕೆಎಸ್ಆರ್‌ಟಿಸಿ ಅಕ್ಟೋಬರ್ ತಿಂಗಳಿನಲ್ಲಿ 'ಪಲ್ಲಕ್ಕಿ' ಹೆಸರಿನ ನೂತನ ಬಸ್‌ ಸೇವೆಯನ್ನು ಆರಂಭಿಸಿದೆ. ಈ ಬಸ್‌ಗಳು ಸ್ಲೀಪರ್‌ ಮಾದರಿಯದ್ದು, ಆದರೆ ಎಸಿ ಸೌಲಭ್ಯವನ್ನು ಹೊಂದಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಮತ್ತು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಈ ಬಸ್‌ ಸೇವೆಗೆ ಚಾಲನೆ ಕೊಟ್ಟಿದ್ದರು. ಈ ಬಸ್‌ಗಳಿಗೆ 'ಪಲ್ಲಕ್ಕಿ' ಎಂಬ ಹೆಸರು ನೀಡಿದ್ದು ಸ್ವತಃ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ.

ಸಾಗರ-ಶಿವಮೊಗ್ಗ-ವಿಜಯಪುರ ವಯಾ ಹರಿಹರ, ಹೊಸಪೇಟೆ, ಇಳಕಲ್ ಮಾರ್ಗದ 'ಪಲ್ಲಕ್ಕಿ' ಬಸ್ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಈ ಬಸ್ ಸಾಗರದಿಂದ ರಾತ್ರಿ 7.30ಗೆ ಹೊರಟು ವಿಜಯಪುರಕ್ಕೆ ಬೆಳಗ್ಗೆ 5.30ಕ್ಕೆ ತಲುಪಲಿದೆ ಹಾಗೂ ವಿಜಯಪುರದಿಂದ ರಾತ್ರಿ 7.30ಗೆ ಹೊರಟು ಸಾಗರಕ್ಕೆ ಬೆಳಗ್ಗೆ 5.30ಕ್ಕೆ ತಲುಪಲಿದೆ.

ಕೆಎಸ್ಆರ್‌ಟಿಸಿ ಈಗಾಗಲೇ 'ಪಲ್ಲಕ್ಕಿ' ಮಾದರಿಯ ನಾನ್ ಎಸಿ ಸ್ಲೀಪರ್ ಬಸ್‌ಗಳನ್ನು ಸಾಗರ, ಸೊರಬ, ಶಿಕಾರಿಪುರ ಶಿವಮೊಗ್ಗ ಮಾರ್ಗವಾಗಿ ಬೆಂಗಳೂರಿಗೆ ಆರಂಭಿಸಿದೆ. ಶಿವಮೊಗ್ಗ ವಿಭಾಗದ ಸಾಗರ ಘಟಕ ಪ್ರಯಾಣಿಕರ ಬೇಡಿಕೆಯಂತೆ ಸಾಗರ-ಸೊರಬ-ಶಿಕಾರಿಪುರ ಮಾರ್ಗವಾಗಿ ಬೆಂಗಳೂರಿಗೆ ಈ ಬಸ್ ಸೇವೆ ಆರಂಭಿಸಿದೆ.

ಸಾಗರ-ಸೊರಬ-ಬೆಂಗಳೂರು (ವಯಾ ಶಿಕಾರಿಪುರ, ಶಿವಮೊಗ್ಗ, ಭದ್ರಾವತಿ) ಮಾರ್ಗದಲ್ಲಿ ಎರಡು ನಾನ್ ಎಸಿ ಸ್ಲೀಪರ್ ಬಸ್‌ಗಳ ಸಂಚಾರ ನಡೆಸುತ್ತಿವೆ. ಸಾಗರ-ಸೊರಬ-ಬೆಂಗಳೂರು ಮಾರ್ಗದ ಬಸ್ ಸಾಗರದಿಂದ ರಾತ್ರಿ 9ಕ್ಕೆ ಹೊರಡಲಿದೆ. ಸೊರಬಕ್ಕೆ 10 ಗಂಟೆ, ಶಿಕಾರಿಪುರಕ್ಕೆ 11ಗಂಟೆ, 12 ಗಂಟೆಗೆ ಶಿವಮೊಗ್ಗ ತಲುಪಲಿದೆ. ಭದ್ರಾವತಿಯಿಂದ ರಾತ್ರಿ 12.30ಕ್ಕೆ ಹೊರಟು, ಬೆಂಗಳೂರು ನಗರಕ್ಕೆ ಬೆಳಗ್ಗೆ 6.30ಕ್ಕೆ ತಲುಪಲಿದೆ.

ಬೆಂಗಳೂರು-ಸೊರಬ-ಸಾಗರ ಮಾರ್ಗದ ಬಸ್ ಬೆಂಗಳೂರು ನಗರದಿಂದ ರಾತ್ರಿ 9.25ಕ್ಕೆ ಹೊರಡಲಿದೆ. ಭದ್ರಾವತಿಗೆ ರಾತ್ರಿ 1.50, ಶಿವಮೊಗ್ಗಕ್ಕೆ ರಾತ್ರಿ 2.20, ಶಿಕಾರಿಪುರಕ್ಕೆ ಮುಂಜಾನೆ 3.20, ಸೊರಬಕ್ಕೆ 5.40, ಸಾಗರವನ್ನು 6.40ಕ್ಕೆ ತಲುಪಲಿದೆ.

ಈ ನಾನ್ ಎಸಿ 'ಪಲ್ಲಕ್ಕಿ' ಸ್ಲೀಪರ್ ಬಸ್‌ಗಳಲ್ಲಿ ಸಂಚಾರ ನಡೆಸಲು ಆನ್‍ಲೈನ್ ಮೂಲಕ ಮುಂಗಡ ಟಿಕೆಟ್ ಬುಕ್ಕಿಂಗ್ ವ್ಯವಸ್ಥೆಯನ್ನು ಮಾಡಲಾಗಿದೆ. ಪ್ರಯಾಣಿಕರು www.ksrtc.in ವೆಬ್‌ಸೈಟ್ ಮೂಲಕ ಟಿಕೆಟ್ ಬುಕ್ ಮಾಡಿಕೊಳ್ಳಬಹುದು.

ಕೆಎಸ್ಆರ್‌ಟಿಸಿಯ 'ಪಲ್ಲಕ್ಕಿ' ಹೆಸರಿನ ಬಸ್‌ 11.3 ಮೀಟರ್ ಉದ್ದವಿದೆ. ಬಿಎಸ್‌-6 ತಂತ್ರಜ್ಞಾನ ಮಾದರಿ ಹೆಚ್‌ಪಿ ಇಂಜಿನ್ ಹೊಂದಿದೆ. 30 ಸೀಟುಗಳನ್ನು ಹೊಂದಿದ್ದು, ಪ್ರತಿ ಸೀಟುಗಳಿಗೆ ಮೊಬೈಲ್, ಲ್ಯಾಪ್‌ಟಾಪ್ ಚಾರ್ಜಿಂಗ್ ವ್ಯವಸ್ಥೆ ಇದೆ.

ಈ ಬಸ್‌ಗಳಲ್ಲಿ ಆಡಿಯೋ ಸ್ಪೀಕರ್ ಮೂಲಕ ಜನರಿಗೆ ಮಾಹಿತಿ ನೀಡುವ ವ್ಯವಸ್ಥೆ ಮಾಡಲಾಗಿದೆ. ಚಾಲಕರಿಗೆ ಸಹಾಯಕವಾಗಲು ಬಸ್‌ ಹಿಂಭಾಗದಲ್ಲಿ ಸಹ ಕ್ಯಾಮರಾ ಅಳವಡಿಕೆ ಮಾಡಲಾಗಿದೆ. ಈ ಮಾದರಿ ಬಸ್‌ಗಳು ಕರ್ನಾಟಕದ ವಿವಿಧ ಜಿಲ್ಲೆ ಮತ್ತು ಹೊರ ರಾಜ್ಯಗಳಿಗೆ ಸಹ ಸಂಚಾರ ನಡೆಸುತ್ತಿವೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+