ಶಾಸಕ ಹರತಾಳು ಹಾಲಪ್ಪ ಕೋವಿಡ್‌ನಿಂದ ಗುಣಮುಖ; ಡಿಸ್ಚಾರ್ಜ್
ಶಿವಮೊಗ್ಗ, ಆಗಸ್ಟ್ 11 : ಶಿವಮೊಗ್ಗ ಜಿಲ್ಲೆಯ ಸಾಗರ ಕ್ಷೇತ್ರದ ಬಿಜೆಪಿ ಶಾಸಕ ಹರತಾಳು ಹಾಲಪ್ಪ ಕೋವಿಡ್ -19 ಸೋಂಕಿನಿಂದ ಗುಣಮುಖರಾಗಿದ್ದಾರೆ. ಬೆಂಗಳೂರಿನ ಆಸ್ಪತ್ರೆಯಿಂದ ಮಂಗಳವಾರ ಅವರು ಡಿಸ್ಚಾರ್ಜ್ ಆಗಿದ್ದಾರೆ.
Recommended Video
ಕೊರೊನಾ ಸೋಂಕಿನಿಂದ ಗುಣಮುಖರಾದ ಹರತಾಳು ಹಾಲಪ್ಪ ಬೆಂಗಳೂರು ನಗರದ ಶಿವಾನಂದ ಸರ್ಕಲ್ ಬಳಿಯ ಮಲ್ಲಿಗೆ ಆಸ್ಪತ್ರೆಯಿಂದ ಮಂಗಳವಾರ ಡಿಸ್ಚಾರ್ಜ್ ಆದರು. ಆಸ್ಪತ್ರೆಯ ಸಿಬ್ಬಂದಿ ಹೂಗುಚ್ಛಕೊಟ್ಟು ಅವರನ್ನು ಬೀಳ್ಕೊಟ್ಟರು.
ಎಂಎಸ್‌ಐಎಲ್ ಅಧ್ಯಕ್ಷರಾಗಿ ನೇಮಗೊಂಡಿದ್ದ ಹರತಾಳು ಹಾಲಪ್ಪ ಜುಲೈ 30ರಂದು ಬೆಂಗಳೂರಿನಲ್ಲಿ ಕಚೇರಿ ಪೂಜೆ ಸಲ್ಲಿಸಿ ಅಧಿಕಾರ ವಹಿಸಿಕೊಂಡಿದ್ದರು. ಬಳಿಕ ಬೆಂಗಳೂರಿನಲ್ಲಿಯೇ ಇದ್ದ ಅವರಿಗೆ ಕೋವಿಡ್ ಸೋಂಕು ತಗುಲಿದ್ದು, ಆಗಸ್ಟ್ 4ರಂದು ಖಚಿತವಾಗಿತ್ತು.

ತಮ್ಮ ಫೇಸ್ ಬುಕ್ ಪುಟದಲ್ಲಿ "ನಾನು ಕೋವಿಡ್ - 19 ಪರೀಕ್ಷೆಗೆ ಒಳಗಾಗಿದ್ದು ಇದೀಗ ಬಂದ ವರದಿಯ ಪ್ರಕಾರ ನನಗೆ, ನನ್ನ ಪತ್ನಿ, ಕಾರು ಚಾಲಕ ಹಾಗೂ ಓರ್ವ ಸಿಬ್ಬಂದಿಗೆ ಪಾಸಿಟಿವ್ ಎಂದು ದೃಢಪಟ್ಟಿದೆ, ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದೇವೆ" ಎಂದು ಹರತಾಳು ಪೋಸ್ಟ್ ಹಾಕಿದ್ದರು.
ಆಗಸ್ಟ್ 4ರಂದು ಆಸ್ಪತ್ರೆಗೆ ದಾಖಲಾಗಿದ್ದ ಅವರು ಆಗಸ್ಟ್ 11ರಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ನಿಯಮಗಳ ಪ್ರಕಾರ ಇನ್ನು ಕೆಲವು ದಿನಗಳ ಕಾಲ ಅವರ ಹೋಂ ಕ್ವಾರಂಟೈನ್‌ನಲ್ಲಿರಬೇಕು.
ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರು ಸಹ ಕೋವಿಡ್‌ನಿಂದ ಗುಣಮುಖರಾಗಿ ಸೋಮವಾರ ಮಣಿಪಾಲ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದರು.












Click it and Unblock the Notifications