ಶಿವಮೊಗ್ಗ; ಜೈಲಿನಿಂದ ಬಿಡುಗಡೆಯಾಗಿದ್ದ ರೌಡಿಶೀಟರ್ ಗಿರಿ ಭೀಕರ ಹತ್ಯೆ
ಶಿವಮೊಗ್ಗ, ಫೆಬ್ರವರಿ 06: ಕಳೆದ ಆರು ತಿಂಗಳಿನಿಂದ ಶಾಂತವಾಗಿದ್ದ ಶಿವಮೊಗ್ಗದ ಜನತೆ ಇಂದು ನಡೆದ ಭೀಕರ ಹತ್ಯೆಯಿಂದಾಗಿ ಬೆಚ್ಚಿಬಿದ್ದಿದ್ದಾರೆ. ನಿನ್ನೆ ತಾನೆ ಜೈಲಿನಿಂದ ಬಿಡುಗಡೆಯಾಗಿದ್ದ ರೌಡಿ ಶೀಟರ್ ಗಿರಿ ಇಂದು ಭೀಕರವಾಗಿ ಹತ್ಯೆಯಾಗಿದ್ದಾನೆ.
ಕುಖ್ಯಾತ ರೌಡಿ ಹಂದಿ ಅಣ್ಣಿಯ ತಮ್ಮ ಗಿರಿ ಶಿವಮೊಗ್ಗ ಗೋಪಾಳದ ಸಿದ್ದೇಶ್ವರ ಸರ್ಕಲ್ ಬಳಿ ನಿಂತಿದ್ದಾಗ ದಾಳಿ ನಡೆಸಿದ ದುಷ್ಕರ್ಮಿಗಳು ಮನಸೋಇಚ್ಛೆ ಚಾಕುವಿನಿಂದ ಚುಚ್ಚಿ ಪರಾರಿಯಾಗಿದ್ದಾರೆ.

ಗಂಭೀರವಾಗಿ ಗಾಯಗೊಂಡ ಗಿರಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಹಳೆ ವೈಷಮ್ಯವೇ ಕೊಲೆಗೆ ಕಾರಣ ಎನ್ನಲಾಗಿದೆ. ಹಂದಿ ಅಣ್ಣಿ, ಗಿರಿ ಮತ್ತು ಗ್ಯಾಂಗ್ ಶಿವಮೊಗ್ಗದ ಕುಖ್ಯಾತ ಪಾತಕಿಗಳಾಗಿದ್ದ ಲವ ಹಾಗೂ ಕುಶ ಎಂಬ ಸಹೋದರರನ್ನು ಹತ್ಯೆ ಮಾಡಿದ್ದರು. ಇದೀಗ ಹಂದಿ ಅಣ್ಣಿ ತಮ್ಮ ಗಿರಿಯೂ ಭೀಕರವಾಗಿ ಕೊಲೆಯಾಗಿದ್ದಾನೆ. ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications