ರಸ್ತೆ ಅಪಘಾತದಲ್ಲಿ ರಿಪ್ಪನ್ ಪೇಟೆ ಪೊಲೀಸ್ ಸ್ಥಳದಲ್ಲೇ ಸಾವು

ಶಿವಮೊಗ್ಗ, ಜೂನ್.19: ತೀರ್ಥಹಳ್ಳಿ ತಾಲೂಕು ಮಂಡಗದ್ದೆ ಸಮೀಪ ಸೇತುವೆ ತಡೆಗೋಡೆಗೆ ಕಾರು ಗುದ್ದಿದ ಪರಿಣಾಮ ರಿಪ್ಪನ್ ಪೇಟೆಯ ಪೊಲೀಸ್ ರಾಘವೇಂದ್ರ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಮಾರುತಿ ಸ್ವಿಫ್ಟ್ ಕಾರಿನಲ್ಲಿ ತೆರಳುತ್ತಿದ್ದ ಸಂದರ್ಭ ಈ ಘಟನೆ ನಡೆದಿದ್ದು, ಮೃತ ದೇಹವನ್ನನ್ನು ತೀರ್ಥಹಳ್ಳಿಯ ಜೆಸಿ ಆಸ್ಪತ್ರೆಗೆ ರವಾನಿಸಲಾಗಿದೆ. ಕಾರಿನಲ್ಲಿ ಒಬ್ಬರೇ ಪ್ರಯಾಣಿಸುತ್ತಿದ್ದು ಎಲ್ಲಿಗೆ ತೆರಳುತ್ತಿದ್ದರು ಎಂಬ ಮಾಹಿತಿ ತನಿಖೆಯಿಂದ ತಿಳಿಯಬೇಕಿದೆ. ಪ್ರಕರಣ ತೀರ್ಥಹಳ್ಳಿ ಮಾಳೂರು ಠಾಣೆಯಲ್ಲಿ ದಾಖಲಾಗಿದೆ .

ಮೈಸೂರಿನಲ್ಲಿ ನಂಜನಗೂಡಿನ ಕಪಿಲಾ ನದಿಯ ಡಿ.ದೇವರಾಜ ಅರಸು ಸೇತುವೆ ಬಳಿ ಜೂನ್.6 ರಂದು ಸೇತುವೆಯ ತಡೆಗೋಡೆಗೆ ಕಾರು ಡಿಕ್ಕಿ ಹೊಡೆದು ಬಳಿಕ ಸೇತುವೆ ಮೇಲೆಯೇ ನಿಂತಿತ್ತು. ಕಾರಿನಲ್ಲಿದ್ದವರು ಬೆಂಗಳೂರು ಮೂಲದವರು.

Ripponpet police Raghavendra died at spot on road accident.

ಚಾಲಕ ವೇಗವಾಗಿ ಬಂದು ಕಪಿಲಾ ನದಿಯ ಸೇತುವೆಗೆ ಡಿಕ್ಕಿ ಹೊಡೆದಿದ್ದಾನೆ. ಡಿಕ್ಕಿ ಹೊಡೆದ ರಭಸಕ್ಕೆ ಕಾರು ಸೇತುವೆಯ ತಡೆಗೋಡೆಯ ಮೇಲೆಯೇ ಅಡ್ಡಲಾಗಿ ನಿಂತಿದೆ. ಒಂದು ವೇಳೆ ಕಾರು ಸೇತುವೆ ತಡೆಗೋಡೆ ಮೇಲೆ ನಿಲ್ಲದೆ ಕೆಳಗೆ ಬಿದ್ದಿದ್ದರೆ, ಭಾರೀ ಅವಘಡ ಸಂಭವಿಸುತ್ತಿತ್ತು.

Ripponpet police Raghavendra died at spot on road accident.

ಸದ್ಯ ಈ ಘಟನೆಯಿಂದ ಅದೃಷ್ಟವಶಾತ್ ಯಾವುದೇ ಅಪಾಯ ಸಂಭವಿಸಲಿಲ್ಲ. ಕಾರು, ಬೈಕ್ ಸವಾರರು ತಡೆಗೋಡೆಗೆ ಡಿಕ್ಕಿ ಹೊಡೆದು ಸಾವನ್ನಪ್ಪುವ ಘಟನೆ ಇತ್ತೀಚೆಗೆ ಹೆಚ್ಚುತ್ತಿರುವುದನ್ನು ನಾವು ಇಲ್ಲಿ ಕಾಣಬಹುದಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+