ಪ್ರೇಮ ನಿರಾಕರಣೆ: ಭದ್ರಾವತಿಯಲ್ಲಿ ಯುವಕನ ಮೇಲೆ ಯುವತಿ ಹಲ್ಲೆ!

ತನ್ನನ್ನು ಮದುವೆಯಾಗು ಎಂದು ಯುವಕನೊಬ್ಬನನ್ನು ಪೀಡಿಸುತ್ತಿದ್ದ ಯುವತಿ, ಒಪ್ಪದ ಆತನ ಮೇಲೆಯೇ ಹಲ್ಲೆ ನಡೆಸಿದ ಘಟನೆ ಭದ್ರಾವತಿಯ ಹೊಸಮನೆ ಎಂಬಲ್ಲಿ ನಡೆದಿದೆ.

ಭದ್ರಾವತಿ, ಏಪ್ರಿಲ್ 3: ತನ್ನನ್ನು ಪ್ರೀತಿಸು ಎಂದು ಪೀಡಿಸಿ, ಯುವತಿಯರ ಮೇಲೆ ಯುವಕರು ಹಲ್ಲೆ ಮಾಡುವ ಸಾಕಷ್ಟು ಘಟನೆಗಳನ್ನು ನೋಡಿದ್ದೇವೆ. ಆದರೆ ಇದು ಸ್ವಲ್ಪ ವಿಚಿತ್ರವಾದ ಘಟನೆ!

ತನ್ನನ್ನು ಮದುವೆಯಾಗು ಎಂದು ಹೇಮಂತ್ ಎಂಬ ಯುವಕನನ್ನು ಪೀಡಿಸುತ್ತಿದ್ದ ಯುವತಿಯೊಬ್ಬಳು, ಒಪ್ಪದ ಆತನ ಮೇಲೆಯೇ ಹಲ್ಲೆ ನಡೆಸಿದ ಘಟನೆ ಏಪ್ರಿಲ್ 2, ಭಾನುವಾರದಂದು ಭದ್ರಾವತಿಯ ಹೊಸಮನೆ ಎಂಬಲ್ಲಿ ನಡೆದಿದೆ.[ಮುಖ್ಯಶಿಕ್ಷಕನ ಕೊಲೆಗೆ ಹೆಂಡತಿ, ಮಗಳಿಂದಲೇ ಸುಪಾರಿ]

Rejection for her love proposal: a young lady attacks a man

ವಿಶ್ವೇಶ್ವರಯ್ಯ ಉಕ್ಕಿನ ಕಾರ್ಖಾನೆಯಲ್ಲಿ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ಹೇಮಂತ್ ಎಂಬ ಯುವಕನನ್ನು ಪ್ರೀತಿಸುತ್ತಿದ್ದ ಯುವತಿಯೊಬ್ಬಳು ತನ್ನನ್ನು ಮದುವೆಯಾಗುವಂತೆ ಆತನನ್ನು ಪೀಡಿಸುತ್ತಿದ್ದಳು. ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿರದ ಆತ ಜಿಮ್ಮಿಗೆ ಹೋಗಿದ್ದ ಸಂದರ್ಭದಲ್ಲಿ ಆತನ ಮೇಲೆ ಯುವತಿ ಮತ್ತು ಆಕೆಯ ತಾಯಿ ಇಬ್ಬರೂ ಹಲ್ಲೆ ನಡೆಸಿ, ಆತನ ಬೈಕ್ ಅನ್ನೂ ಹಾನಿಗೊಳಿಸಿದ್ದರು.[ಉಳ್ಳಾಲದಲ್ಲಿ ಯುವಕನ ಮೇಲೆ ತಲವಾರಿನಿಂದ ಹಲ್ಲೆ]

ಯುವತಿ ಮತ್ತು ಆಕೆಯ ತಾಯಿಯ ಕುರಿತು ಭದ್ರಾವತಿ ಪೇಪರ್ ಟೌನ್ ಠಾಣೆಯಲ್ಲಿ ವಿಚಾರಣೆ ನಡೆಯುತ್ತಿದ್ದು, ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+