ಸಾಗರ ಅಥವ ಸೊರಬದಿಂದ ಸ್ಪರ್ಧಿಸಲು ಸಿದ್ಧ : ಹಾಲಪ್ಪ

ಶಿವಮೊಗ್ಗ, ಡಿಸೆಂಬರ್. 08 : 'ಸಾಗರ ಮತ್ತು ಸೊರಬದ ಪೈಕಿ ಒಂದು ಕ್ಷೇತ್ರದಿಂದ ಸ್ಪರ್ಧಿಸಲು ನಾನು ಸಿದ್ಧ, ಪಕ್ಷದ ವರಿಷ್ಠರ ಜೊತೆ ಈ ಕುರಿತು ಮಾತನಾಡಿದ್ದೇನೆ' ಎಂದು ಮಾಜಿ ಸಚಿವ ಹರತಾಳು ಹಾಲಪ್ಪ ಹೇಳಿದರು.

ಶಿವಮೊಗ್ಗದಲ್ಲಿ ಶುಕ್ರವಾರ ಮಾತನಾಡಿದ ಹರತಾಳು ಹಾಲಪ್ಪ ಅವರು, 'ಒಂದು ಕ್ಷೇತ್ರದಿಂದ ಸ್ಪರ್ಧಿಸಲು ನಾನು ಸಿದ್ಧನಿದ್ದೇನೆ. ಪಕ್ಷ ಏನು ಹೇಳುತ್ತದೆಯೋ? ಅದನ್ನು ನಾನು ಪಾಲಿಸುತ್ತೇನೆ' ಎಂದು ಸ್ಪಷ್ಟಪಡಿಸಿದರು.

Ready to contest in Sagar or Soraba says Hartal Halappa

'ಒಂದು ವೇಳೆ ಪಕ್ಷ ನನಗೆ ಟಿಕೇಟ್ ನೀಡಲು ನಿರಾಕರಿಸಿದರೆ ಬೇಸರವಿಲ್ಲ. ನಾನು ಸಾಮಾನ್ಯ ಕಾರ್ಯಕರ್ತ. ಪಕ್ಷ ಹೇಳಿದಂತೆ ಮಾಡುವುದು ಮಾತ್ರ ನನ್ನ ಕೆಲಸ' ಎಂದು ಹಾಲಪ್ಪ ತಿಳಿಸಿದರು.

ಸಾಗರ ಕ್ಷೇತ್ರದಿಂದ ಹರತಾಳು ಹಾಲಪ್ಪ ಅವರಿಗೆ ಟಿಕೆಟ್ ನೀಡಲಾಗುತ್ತದೆ. ಬೇಳೂರು ಗೋಪಾಲಕೃಷ್ಣ ಅವರಿಗೆ ಟಿಕೆಟ್ ಕೈ ತಪ್ಪಲಿದೆ ಎಂಬ ಸುದ್ದಿ ಶಿವಮೊಗ್ಗ ರಾಜಕಾರಣದಲ್ಲಿ ಹಬ್ಬಿತ್ತು. ಶುಕ್ರವಾರ ಈ ಸುದ್ದಿಯನ್ನು ಬೇಳೂರು ಗೋಪಾಲಕೃಷ್ಣ ತಳ್ಳಿಹಾಕಿದ್ದರು.

ಹರತಾಳು ಹಾಲಪ್ಪ ಅವರು ಸೊರಬ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸುತ್ತಿದ್ದರು. ಆದರೆ, ಈ ಬಾರಿ ಕುಮಾರ್ ಬಂಗಾರಪ್ಪ ಅವರು ಬಿಜೆಪಿ ಸೇರಿದ್ದಾರೆ. ಸೊರಬದಲ್ಲಿ ಕುಮಾರ್ ಬಂಗಾರಪ್ಪ ಅವರಿಗೆ ಟಿಕೆಟ್ ನೀಡಿ, ಸಾಗರದಲ್ಲಿ ಹಾಲಪ್ಪ ಅವರಿಗೆ ಟಿಕೆಟ್ ನೀಡಲಾಗುತ್ತದೆ ಎಂಬ ಸುದ್ದಿಗಳು ಹಬ್ಬಿದ್ದವು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+