ಭದ್ರಾವತಿಯಲ್ಲಿ ಕೂದಲೆಳೆ ಅಂತರದಲ್ಲಿ ತಪ್ಪಿದ ಭಾರೀ ಅನಾಹುತ

ಶಿವಮೊಗ್ಗ, ಆಗಸ್ಟ್.16:ಭದ್ರಾ ನದಿ ತುಂಬಿ ಹರಿಯುತ್ತಿರುವ ಬೆನ್ನಲ್ಲೇ ಭದ್ರಾವತಿಯ ಜನತೆ ಬೆಚ್ಚಿ ಬೀಳುವ ಮತ್ತೊಂದು ಸಂಗತಿ ನಡೆದಿದೆ.

ತುಂಗಾನದಿಯ ನೀರು ಕೂಡ ಅಪಾಯ ಮಟ್ಟದಲ್ಲಿ ಹರಿಯುತ್ತಿದ್ದು, ಮಂಗಳವಾರ ತುಂಗಾ ನೀರು ಭದ್ರಾವತಿ ನಗರ ಬಸ್ ನಿಲ್ದಾಣ ಬಿಎಚ್ ರಸ್ತೆಗೆ ನುಗ್ಗಿತು.

ಪರಿಣಾಮ ಕಾರ್ಪೊರೇಶನ್ ಬ್ಯಾಂಕ್ ಬಳಿಯಿರುವ ಪೆಟ್ರೋಲ್ ಬಂಕ್ ಗೂ ನುಗ್ಗಿತು. ಸಂಜೆ ವೇಳೆಗೆ ನೀರು ಭಾರೀ ಪ್ರಮಾಣದಲ್ಲಿ ಹೆಚ್ಚಾಗಿತ್ತು. ಆದರೆ ಸಂಜೆ ವೇಳೆಗೆ ಇಲ್ಲಿನ ಬಂಕ್ ನಿಂದ ಅಪಾರ ಪ್ರಮಾಣದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಸೋರಿಕೆಯಾಗಿ ಇಲ್ಲಿ ನಿಂತಿರುವ ನೆರೆ ನೀರಿನೊಂದಿಗೆ ಬೆರೆತಿದ್ದು ಭಾರೀ ಆತಂಕಕ್ಕೆ ಕಾರಣವಾಯಿತು.

ಇಡೀ ಪ್ರದೇಶದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ವಾಸನೆ ಹರಡಿದ್ದು, ಎಲ್ಲಿ ಸ್ಫೋಟಗೊಳ್ಳುವುದೋ ಎಂಬ ಆತಂಕ ಮೂಡಿತ್ತು. ಈ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಅಗ್ನಿಶಾಮಕ ದಳ ಹಾಗೂ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿತ್ತು. ನಗರದಲ್ಲಿ ವಿದ್ಯುತ್ ಸಂಪರ್ಕವನ್ನು ನಿಲ್ಲಿಸಲಾಯಿತು. ಆನಂತರ ಯಾವುದೇ ರೀತಿಯ ಅನಾಹುತ ಸಂಭವಿಸದಂತೆ ಮುಂಜಾಗ್ರತಾ ಕ್ರಮ ಕೈಗೊಡ್ಡಿದ್ದರಿಂದ ಯಾವುದೇ ಅನಾಹುತ ಸಂಭವಿಸಲಿಲ್ಲ.

Precautionary steps prevented massive disaster in Bhadravathi


ಆರ್ ಎಸ್ಎಸ್ ಕಾರ್ಯಕರ್ತರ ಸೇವೆ

ಪೆಟ್ರೋಲ್ ಹಾಗೂ ಡೀಸೆಲ್ ಸೋರಿಕೆಯಾಗಿ ಇಲ್ಲಿನ ನೆರೆ ನೀರಿನೊಂದಿಗೆ ಭಾರೀ ಪ್ರಮಾಣದಲ್ಲಿ ಸೇರಿರುವ ಹಿನ್ನೆಲೆಯಲ್ಲಿ ಇಲ್ಲಿ ಯಾರಿಗೂ ಮೊಬೈಲ್ ಬಳಸದಂತೆ ಹಾಗೂ ವಾಹನ ಸಂಚರಿಸದಂತೆ ನಿರ್ಬಂಧಿಸಿ ವಾಹನಗಳನ್ನು ಸ್ಥಳದಲ್ಲಿಯೇ ನಿಲ್ಲಿಸಿ, ಇಳಿದು ತಳ್ಳಿಕೊಂಡು ಹೋಗುವಂತೆ ಸವಾರರಿಗೆ ಪೊಲೀಸರು ಸೂಚಿಸಿದರು.

ಯಾವುದೇ ರೀತಿಯ ಅನಾಹುತ ಸಂಭವಿಸದಿರಲು ಇಲ್ಲಿ ನೆರೆದಿರುವ ಜನರನ್ನು ಚದುರಿಸುವ ಹಾಗೂ ತಿಳಿ ಹೇಳಿ ದೂರ ಕಳುಹಿಸುವ ಕಾರ್ಯಕ್ಕೆ ರಾಷ್ಟ್ರೀಯ ಸ್ವಯಂ ಸೇವಕ ಸಂಘ(ಆರ್ಎಸ್ಎಸ್)ದ ಕಾರ್ಯಕರ್ತರು ಕೈಜೋಡಿಸಿದ್ದರು.

ನೀರು ಕಡಿಮೆಯಾಗಿ ಪರಿಸ್ಥಿತಿ ಸುಧಾರಿಸುವವರೆಗೂ ಕಾರ್ಯಕರ್ತರು ಸೇವಾ ನಿರತರಾಗಿದ್ದು ವಿಶೇಷವಾಗಿತ್ತು. ಇಲ್ಲಿ ನಿಂತಿರುವ ಪೆಟ್ರೋಲ್ ಮಿಶ್ರಿತ ನೀರಿನಲ್ಲಿಯೇ ಸುಮಾರು 15ರಿಂದ 20 ಕಾರ್ಯಕರ್ತರು ಪೊಲೀಸರಂತೆಯೇ ಶ್ರಮವಹಿಸಿ ಭದ್ರತಾ ಕಾರ್ಯ ಮಾಡಿದರು.

Precautionary steps prevented massive disaster in Bhadravathi

ಅಂದಹಾಗೆ ಹೊಸ ಸೇತುವೆ ಮೇಲೆ ಭದ್ರಾ ನೀರು ಹರಿದು ಸೇತುವೆಯ ಕಂಬಿಗಳು ಮುರಿದುಹೋಗಿದೆ. ಬೆಳಗ್ಗೆಯಿಂದ ಜನರು ಸೇತುವೆ ಮುರಿದು ಹೋಗಿದೆ ಎಂದು ಹೇಳುತ್ತಿದ್ದು, ನೀರು ಕಡಿಮೆಯಾಗುವ ವರೆಗೂ ಸೇತುವೆ ಸ್ಥಿತಿ ತಿಳಿಯುವುದಿಲ್ಲ.

ಒಟ್ಟಿನಲ್ಲಿ ನಗರದಲ್ಲಿ ಸಂಭಸುತ್ತಿದ್ದ ಭಾರಿ ಅನಾಹುತ ಅಂತ್ಯವಾಗಿದ್ದು ಜನರ ಜೀವನ ಸುಧಾರಿಸುವ ಹಂತ ತಲುಪಿದೆ. ಮಳೆ ಪ್ರಮಾಣ ಕಡಿಮೆಯಾಗಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+