29 ರೌಡಿಗಳನ್ನು ಜೈಲಿಗಟ್ಟಿದ ಶಿವಮೊಗ್ಗ ಎಸ್‌ಪಿ ಅಭಿನವ್ ಖರೆ
ಶಿವಮೊಗ್ಗ, ಸೆಪ್ಟೆಂಬರ್.09: ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆ ಹದಗೆಡದಂತೆ ಪೊಲೀಸರಿಂದ ಮುನ್ನೆಚ್ಚರಿಕೆ ಕ್ರಮ ವಹಿಸಲಾಗಿದೆ. ಈಗಾಗಲೇ ಶಾಂತಿಭಂಗ ಉಂಟುಮಾಡುತ್ತಿದ್ದ ರೌಡಿಗಳನ್ನು ಜೈಲಿಗಟ್ಟುವ ಕಾರ್ಯದಲ್ಲಿ ಪೊಲೀಸರು ತೊಡಗಿದ್ದಾರೆ.
ಮುನ್ನೆಚ್ಚರಿಕೆ ಕ್ರಮವಾಗಿ ಶಿವಮೊಗ್ಗದಲ್ಲಿ ಈವರೆಗೆ 29 ಮಂದಿ ರೌಡಿಗಳನ್ನು ಜೈಲಿಗೆ ಕಳುಹಿಸಲಾಗಿದೆ. ಅಲ್ಲದೇ ಹಲವಾರು ರೌಡಿಗಳಿಗೆ, ಪುಡಿ ರೌಡಿಗಳಿಗೆ ಪೊಲೀಸ್ ವರಿಷ್ಠಾಧಿಕಾರಿ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಈಗಾಗಲೇ ಸುಪ್ರಿಂ ಕೋರ್ಟ್ ನಲ್ಲಿ ಜಾಮೀನು ಪಡೆದು ಮತ್ತೆ ಅಪರಾಧ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದ ಕೀಲಿ ಇಮ್ರಾನ್ ನ್ನು ಮತ್ತೆ ಪೊಲೀಸರು ಜೈಲಿಗೆ ಕಳಿಸಿದ್ದಾರೆ. ಜತೆಗೆ ಸುಪ್ರಿಂ ಜಾಮೀನು ರದ್ದುಗೊಳಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ.

ಅಲ್ಲದೆ ಯಾಸಿನ್ ಖುರೇಷಿ, ಕಡೇಕಲ್ ಹಬೀಬ್,ಕಡೇಕಲ್ ನಸ್ರು ನನ್ನು ಜೈಲಿಗೆ ಕಳುಹಿಸಲಾಗಿದೆ. ಖುದ್ದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಭಿನವ್ ಖರೆ ಅವರೇ ಉಳಿದ ರೌಡಿಗಳ ಮನೆಬಾಗಿಲನ್ನು ಬಡಿಯುತ್ತಿದ್ದಾರೆ.












Click it and Unblock the Notifications