ಸಾಗರ ಮಾರಿಕಾಂಬಾಗೆ ಬಾಗೀನ ಅರ್ಪಿಸಿದ ಪ್ರಮೋದಾದೇವಿ
ಶಿವಮೊಗ್ಗ, ಫೆಬ್ರವರಿ 25: ಸಾಗರ ಮಾರಿಕಾಂಬಾ ದೇವಿಗೆ ಮೈಸೂರು ರಾಜಮಾತೆ ಪ್ರಮೋದಾದೇವಿ ಒಡೆಯರ್ ಅವರು ಇಂದು ಬಾಗೀನ ಸಮರ್ಪಿಸಿದರು.
ಶಿವಮೊಗ್ಗ ಜಿಲ್ಲೆಯ ಸಾಗರ ನಗರದ ಮಾರಿಕಾಂಬಾ ದೇವಿಯ ಜಾತ್ರಾ ಮಹೋತ್ಸವ ಕಳೆದ ಒಂದು ವಾರಗಳಿಂದ ಅದ್ಧೂರಿಯಾಗಿ ನಡೆಯುತ್ತಿದ್ದು, ಸಾಗರ ಮಾರಿಕಾಂಬಾ ಜಾತ್ರಾ ಮಹೋತ್ಸವಕ್ಕೆ ಈ ಬಾರಿಯೂ ಮೈಸೂರು ಸಂಸ್ಥಾನ ರಾಜಾಮಾತೆ ಪ್ರಮೋದಾ ದೇವಿ ಅವರು ಆಗಮಿಸಿ ದೇವಿಯ ದರ್ಶನವನ್ನು ಪಡೆದುಕೊಂಡರು.
ಜಾತ್ರಾ ಮಹೋತ್ಸವ ಆಗಮಿಸಿ ಮಾರಿಕಾಂಬಾ ದೇವಿಗೆ ಬಾಗೀನ ಸಮರ್ಪಿಸಿದರು. ರಾಜಮಾತೆ ಪ್ರಮೋದದೇವಿ ಒಡೆಯರ್ ಬಳಿಕ ಕಾರ್ಗಲ್ ನ ಚಾಂಮುಡೇಶ್ವರಿ ದೇವಾಲಯಕ್ಕೆ ಭೇಟಿ ನೀಡಲಿದ್ದಾರೆ.

ಪ್ರತಿ ಮೂರು ವರ್ಷಕ್ಕೊಮ್ಮೆ ನಡೆಯುವ ಸಾಗರ ಮಾರಿಕಾಂಬಾ ಜಾತ್ರೆಗೆ ಮೈಸೂರು ಸಂಸ್ಥಾನದ ರಾಜಮನೆತನದಿಂದ ಬಾಗೀನ ನೀಡುವ ಸಂಪ್ರದಾಯ ಇದೆ. ಅದೇ ರೀತಿ ರಾಜಮಾತೆ ಪ್ರಮೋದಾದೇವಿ ಇಂದು ಆಗಮಿಸಿ ಸಂಪ್ರದಾಯವನ್ನು ಮುಂದುವರಿಸಿದ್ದಾರೆ.












Click it and Unblock the Notifications