ಕರ್ಫ್ಯೂ ಉಲ್ಲಂಘನೆ; ಯುವಕರಿಗೆ ನಡುರಾತ್ರಿ ಡ್ರಿಲ್ ಮಾಡಿಸಿದ ಪೊಲೀಸ್!
ಶಿವಮೊಗ್ಗ, ಜೂನ್ 27; ವಾರಾಂತ್ಯದ ಕರ್ಫ್ಯೂ ನಿಯಮ ಉಲ್ಲಂಘಿಸಿ ಅನಾವಶ್ಯಕವಾಗಿ ಓಡಾಡುತ್ತಿದ್ದವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಲ್ಲದೆ ಪೊಲೀಸ್ ಠಾಣೆ ಆವರಣದಲ್ಲೇ ನಡುರಾತ್ರಿಯಲ್ಲಿ ಡ್ರಿಲ್ ಮಾಡಿಸಿ, ಕರ್ಫ್ಯೂ ನಿಯಮ ಪಾಲನೆ ಪಾಠ ಮಾಡಿದ್ದಾರೆ.
Recommended Video
ಶಿವಮೊಗ್ಗದ ಕೋಟೆ ಠಾಣೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿದರು. ಕರ್ಫ್ಯೂ ನಿಯಮ ನಿಯಮ ಉಲ್ಲಂಘಿಸಿದವರನ್ನು ವಶಕ್ಕೆ ಪಡೆದುಕೊಂಡರು.
ಬಿ.ಹೆಚ್.ರಸ್ತೆ, ಸಹ್ಯಾದ್ರಿ ಕಾಲೇಜು, ಎಂಆರ್‌ಎಸ್ ಸರ್ಕಲ್ ಸೇರಿದಂತೆ ವಿವಿಧೆಡೆ ವಾಹನ ತಪಾಸಣೆ ನಡೆಸಿದರು. ಈ ವೇಳೆ ಅನಾವಶ್ಯಕವಾಗಿ ಓಡಾಡುತ್ತಿದ್ದ 50ಕ್ಕೂ ಹೆಚ್ಚು ಮಂದಿಯನ್ನು ವಶಕ್ಕೆ ಪಡೆಯಲಾಯಿತು. ಇದರಲ್ಲಿ ಬಹುತೇಕರು ಯುವಕರಾಗಿದ್ದರು.

ಮಿಡ್ ನೈಟ್ ಡ್ರಿಲ್; ವಶಕ್ಕೆ ಪಡೆದವರನ್ನು ಠಾಣೆಗೆ ಕರೆತರಲಾಯಿತು. ಕೋಟೆ ಠಾಣೆ ಇನ್ಸ್‌ಪೆಕ್ಟರ್ ಚಂದ್ರಶೇಖರ್ ಎಲ್ಲರಿಗೂ ಕ್ಲಾಸ್ ತೆಗೆದುಕೊಂಡರು. ಕರ್ಫ್ಯೂ ನಿಯಮ ಉಲ್ಲಂಘಿಸಿದರೆ ಆಗುವ ಪರಿಣಾಮದ ಬಗ್ಗೆ ವಿವರಿಸಿದರು. ಬಳಿಕ ನಿಮಯ ಉಲ್ಲಂಘಿಸಿದವರಿಗೆ ಪೊಲೀಸ್ ಠಾಣೆ ಆವರಣದಲ್ಲೇ, ನಡುರಾತ್ರಿಯಲ್ಲಿಯೇ ಡ್ರಿಲ್ ಮಾಡಿಸಿದರು.
ನಿಯಮ ಉಲ್ಲಂಘಿಸಿದವರ ಕಾರು, ಬೈಕುಗಳನ್ನು ವಶ ಪಡಿಸಿಕೊಳ್ಳಲಾಗಿದೆ. ಡ್ರಿಂಕ್ ಅಂಡ್ ಡ್ರೈವ್ ಮಾಡಿದವರಿಗೆ ಕೇಸ್ ಹಾಕಲಾಯಿತು. ಕೋಟೆ ಠಾಣೆ ಮತ್ತು ಡಿಎಅರ್ ಪೊಲೀಸರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ಕರ್ನಾಟಕ ಸರ್ಕಾರ ಜೂನ್ 21ರಿಂದ ಜಾರಿಗೆ ಬರುವಂತೆ ಅನ್‌ಲಾಕ್ ಘೋಷಣೆ ಮಾಡಿದೆ. ರಾಜ್ಯದಲ್ಲಿ ವಾರಾಂತ್ಯದ ಕರ್ಫ್ಯೂ ಜಾರಿಯಲ್ಲಿದೆ.
ಶುಕ್ರವಾರ ಸಂಜೆ 7 ಗಂಟೆಯಿಂದ ಜೂನ್ 28 ಸೋಮವಾರ ಬೆಳಗ್ಗೆ 5 ಗಂಟೆಯವರೆಗೆ ವಾರಂತ್ಯದ ಕರ್ಫ್ಯೂ ರಾಜ್ಯಾದ್ಯಂತ ಜಾರಿಯಲ್ಲಿರುತ್ತದೆ. ಈ ಅವಧಿಯಲ್ಲಿ ಅನಗತ್ಯವಾಗಿ ಸಂಚಾರ ನಡೆಸುವಂತಿಲ್ಲ.












Click it and Unblock the Notifications