Breaking: ತೀರ್ಥಹಳ್ಳಿಯಲ್ಲಿ ಪತ್ರಕರ್ತನ ಮೇಲೆ ಪೊಲೀಸರಿಂದ ಹಲ್ಲೆ ಯತ್ನ
ಶಿವಮೊಗ್ಗ, ಆಗಸ್ಟ್, 21: ಪತ್ರಕರ್ತನ ಮೇಲೆ ಪೊಲೀಸ್ ಇನ್ಸ್‌ಪೆಕ್ಟರ್ ಹಲ್ಲೆ ನಡೆಸಿದ ಘಟನೆ ತೀರ್ಥಹಳ್ಳಿಯಲ್ಲಿ ಇಂದು (ಆಗಸ್ಟ್ 21) ನಡೆದಿದೆ. ಹಾಗಾದರೆ ಈ ಘಟನೆ ನಡೆಯಲು ಕಾರಣ ಏನು ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ತಿಳಿಯಿರಿ. ತಾಲ್ಲೂಕಿನ ಪ್ರಜಾವಾಣಿಯ ಅರೆಕಾಲಿಕ ವರದಿಗಾರ ನಿರಂಜನ್ ಹಲ್ಲೆಗೊಳಗಾದವರಾಗಿದ್ದಾರೆ.
ತೀರ್ಥಹಳ್ಳಿಯ ಮುರಾರ್ಜಿ ದೇಸಾಯಿ ವಸತಿ ನಿಲಯಕ್ಕೆ ಭೇಟಿ ಎಸ್ಪಿ ನೀಡಿದ್ದು, ವಿಚಾರಣೆ ಬಳಿಕೆ ಸ್ಟೇಷನ್‌ಗೆ ತೆರಳುವಾಗ ದಾರಿಯಲ್ಲಿ ಜನಸಂದಣಿ ನಿಯಂತ್ರಿಯುವ ಭರಾಟೆಯಲ್ಲಿ ಇನ್ಸ್‌ಪೆಕ್ಟರ್ ಅಶ್ವತ್ಥಗೌಡ ಎಂಬ ಪೊಲೀಸ್ ಅಧಿಕಾರಿ ಸಾರ್ವಜನಿಕರಿಗೆ ಅವ್ಯಾಚ್ಯ ಶಬ್ದಗಳಿಂದ ಬೈಯುತ್ತಿದ್ದರು. ಈ ವೇಳೆ ಇದನ್ನು ತನ್ನ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದ ಪತ್ರಕರ್ತ ವಿ.ನಿರಂಜನ್ ಮೇಲೆ ಹಲ್ಲೆ ಯತ್ನ ನಡೆಸಿದ್ದಾರೆ.

ಬಳಿಕ ಬಲವಂತವಾಗಿ ಮೊಬೈಲ್ ಕಸಿದುಕೊಂಡು ವೀಡಿಯೋ ಡಿಲೀಟ್ ಮಾಡುವಂತೆಯೂ ಇನ್ಸ್‌ಪೆಕ್ಟರ್, ಜೀಪು ಚಾಲಕನಿಂದ ಬೆದರಿಕೆ ಹಾಕಿಸಿದ್ದಾರೆ. ಅಷ್ಟೇ ಅಲ್ಲದೆ, ಠಾಣೆಗೆ ಕರೆದೊಯ್ದು ಪ್ರಕರಣ ದಾಖಲಿಸುವುದಾಗಿ ಬೆದರಿಕೆಯೊಡ್ಡಿದ್ದಾರೆ. ಈ ಸಮಯದಲ್ಲಿ ಇನ್ಸ್‌ಪೆಕ್ಟರ್ ಅಶ್ವತ್ಥ್‌ಗೌಡ ಪತ್ರಕರ್ತ ನಿರಂಜನ್ ಮೇಲೂ ದೈಹಿಕ ಹಲ್ಲೆಗೂ ಮುಂದಾಗಿದ್ದಾರೆ. ಸದ್ಯ ಪೊಲೀಸರ ದಬ್ಬಾಳಿಕೆ ವಿರೋಧಿಸಿ ಠಾಣೆಯ ಮುಂದೆ ತೀರ್ಥಹಳ್ಳಿಯ ಪತ್ರಕರ್ತರು ಧರಣಿ ಮುಂದುವರೆಸಿದ್ದಾರೆ.












Click it and Unblock the Notifications