• search
  • Live TV
ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

100 ರೂ. ನೀಡಿ ಅಂಚೆ ಕಚೇರಿಯಲ್ಲಿ ಡಿಜಿಟಲ್ ಖಾತೆ ತೆರೆಯಿರಿ

|

ಶಿವಮೊಗ್ಗ, ಸೆಪ್ಟೆಂಬರ್ 28: ಶಿವಮೊಗ್ಗದ ಎಲ್ಲಾ ಗ್ರಾಮೀಣ ಮತ್ತು ನಗರ ಅಂಚೆ ಕಚೇರಿಗಳ ಮುಖಾಂತರ ಮತ್ತು ಅಂಚೆಯಣ್ಣನ ಮೂಲಕ ಅಂಚೆ ಡಿಜಿಟಲ್ ಖಾತೆ ತೆರೆಯಲು ವಿಶೇಷ ವ್ಯವಸ್ಥೆಗಳನ್ನು ಮಾಡಲಾಗಿದೆ. ಸೆಪ್ಟಂಬರ್ 29ರಂದು ಈ ಅಭಿಯಾನ ನಡೆಯಲಿದೆ.

ಡಿಜಿಟಲ್ ಅಂಚೆ ಖಾತೆ (ಐಪಿಪಿಬಿ) ಖಾತೆ ತೆರೆಯುವ ವಿಶೇಷ ಅಭಿಯಾನ ಇದಾಗಿದೆ. ಜನರು ತಮ್ಮ ಸಮೀಪದ ಅಂಚೆ ಕಚೇರಿ ಅಥವಾ ತಮ್ಮ ಪ್ರದೇಶದ ಅಂಚೆಯಣ್ಣನ ಮುಖಾಂತರ ರೂ.100 ಪ್ರಾರಂಭಿಕ ಠೇವಣಿ ನೀಡಿ ಖಾತೆ ತೆರೆಯಬಹುದು, ಎಲ್ಲಾ ಬ್ಯಾಂಕಿಂಗ್ ವ್ಯವಸ್ಥೆಯನ್ನು ಪಡೆಯಬಹುದು.

ಹುಬ್ಬಳ್ಳಿ ಮಂದಿ ಕೆಂಗಣ್ಣಿಗೆ ಗುರಿಯಾದ ಕೇಂದ್ರ ಸರ್ಕಾರ ಹುಬ್ಬಳ್ಳಿ ಮಂದಿ ಕೆಂಗಣ್ಣಿಗೆ ಗುರಿಯಾದ ಕೇಂದ್ರ ಸರ್ಕಾರ

ಈ ವ್ಯವಸ್ಥೆಯು ಕಾಗದ ರಹಿತವಾಗಿದೆ. ಕೇವಲ ಆಧಾರ್ ಸಂಖ್ಯೆ ಮತ್ತು ಮೊಬೈಲ್ ಸಂಖ್ಯೆಯನ್ನು ನೀಡಿ ಖಾತೆ ತೆರೆಯಬಹುದಾಗಿದೆ. ಈ ಖಾತೆಯಿಂದ ಎಲ್ಲಾ ರೀತಿಯ ಡಿಜಿಟಲ್ ವ್ಯವಹಾರ ಮಾಡಬಹುದು.

ಅಂಚೆ ಕಚೇರಿಯಲ್ಲೇ ಸ್ಯಾನಿಟೈಸರ್, ಮಾಸ್ಕ್ ಮಾರಾಟ ಅಂಚೆ ಕಚೇರಿಯಲ್ಲೇ ಸ್ಯಾನಿಟೈಸರ್, ಮಾಸ್ಕ್ ಮಾರಾಟ

ಈ ಖಾತೆಯಿಂದ ಹಣ ವರ್ಗಾವಣೆ (NEFT, IMPS, AEPS) ಮೊಬೈಲ್ ರೀಚಾರ್ಜ್, ನೀರಿನ ಬಿಲ್, ವಿದ್ಯುತ್ ಬಿಲ್, ಗ್ಯಾಸ್ ಬಿಲ್ ಎಲ್ಲಾ ರೀತಿಯ ಬಿಲ್ ಪಾವತಿಗಳು ಅಂಚೆ ಕಚೇರಿಯ RD, SB, PPF ಸುಕನ್ಯ ಸಮೃದ್ಧಿ ಖಾತೆ, ಹಿರಿಯ ನಾಗರೀಕರ ಖಾತೆಗಳ ವ್ಯವಹಾರಗಳನ್ನು ಮನೆಯಲ್ಲೇ ಕುಳಿತು ಮೊಬೈಲ್ ಮುಖಾಂತರ ಮಾಡಬಹುದು.

ಅಂಚೆ ಮತಗಳ ಚಲಾವಣೆ; ವಯೋಮಿತಿ ಇಳಿಕೆ ಇಲ್ಲ ಅಂಚೆ ಮತಗಳ ಚಲಾವಣೆ; ವಯೋಮಿತಿ ಇಳಿಕೆ ಇಲ್ಲ

ಸರ್ಕಾರದ ಎಲ್ಲಾ ರೀತಿಯ ನೇರ ಹಣ ವರ್ಗಾವಣೆಗಳಾದ ವಿಧವಾ ವೇತನ, ವೃದ್ಧಾಪ್ಯ ವೇತನ, ಅಂಗವಿಕಲರ ವೇತನ, ಗ್ಯಾಸ್ ಸಬ್ಸಿಡಿ ಹಾಗೂ ಎಲ್ಲಾ ರೀತಿಯ ಸಬ್ಸಿಡಿ ಹಣವನ್ನು ಈ ಖಾತೆಗೆ ಪಡೆಯಬಹುದಾಗಿದೆ.

ಈ ಖಾತೆದಾರರಿಗೆ ಅಂಚೆಯಣ್ಣನ ಮುಖಾಂತರ ಮನೆ ಬಾಗಿಲಲ್ಲೇ ಹಣ ಕಟ್ಟುವ ಹಾಗೂ ಹಣ ಹಿಂಪಡೆಯುವ ನಗದು ವ್ಯವಹಾರಗಳನ್ನು ನಿರ್ವಹಿಸುವ ಸೌಲಭ್ಯಗಳನ್ನು ಒದಗಿಸಲಾಗುತ್ತದೆ. ಈ ಖಾತೆ ತೆರೆಯುವ ಮುಖಾಂತರ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಡಿಜಿಟಲ್ ಬ್ಯಾಂಕಿಂಗ್ ಯೋಜನೆಗಳನ್ನು ಜಾರಿಗೆ ತರಲು ಜನರು ಸಹಕರಿಸಬೇಕು ಎಂದು ಮನವಿ ಮಾಡಲಾಗಿದೆ.

English summary
People can open India Post Payments Bank (IPPB) with just 100 Rs. People of Shivamogga rural and city people can open account with the help of aadhar number.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X