ತೀರ್ಥಹಳ್ಳಿಯ ನಂದಿತಾಳದ್ದು ಆತ್ಮಹತ್ಯೆ, ಸಿಐಡಿ ವರದಿ

ಬೆಂಗಳೂರು, ಡಿ.9 : ತೀರ್ಥಹಳ್ಳಿಯ 8 ನೇ ತರಗತಿ ವಿದ್ಯಾರ್ಥಿನಿ ನಂದಿತಾ ಕೊಲೆ ನಡೆದಿಲ್ಲ, ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿ ಸರ್ಕಾರಕ್ಕೆ ಮಧ್ಯಂತರ ವರದಿ ನೀಡಿದೆ. ವಿಷ ಸೇವಿಸಿ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ವರದಿ ಹೇಳಿದೆ.

ನಂದಿತಾ ಅಪಹರಣ ಮತ್ತು ಕೊಲೆ ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿ ಪೊಲೀಸರು ಸೋಮವಾರ ರಾತ್ರಿ ಸರ್ಕಾರಕ್ಕೆ 223 ಪುಟಗಳ ಮಧ್ಯಂತರ ವರದಿಯನ್ನು ಸಲ್ಲಿಕೆ ಮಾಡಿದ್ದಾರೆ. ವಿಷ ಸೇವಿಸಿ ನಂದಿತಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆಕೆಯ ಮೇಲೆ ಲೈಗಿಂಕ ದೌರ್ಜನ್ಯವೂ ನಡೆದಿಲ್ಲ ಎಂದು ವರದಿ ಹೇಳಿದೆ. [ನಂದಿತಾ ಡೆತ್ ನೋಟ್ ಪತ್ತೆ]

Thirthahalli

ನಂದಿತಾ ವಿಷ ಸೇವಿಸಿದ್ದಾಳೆ, ಇದರಿಂದ ಅವಳ ಅಂಗಾಗಳು ನಿಷ್ಕ್ರಿಯಗೊಂಡು ಆಕೆಗೆ ಹೃದಯಾಘಾತವಾಗಿದೆ ಇದು ಆತ್ಮಹತ್ಯೆ ಪ್ರಕರಣ ಎಂದು ಸಿಐಡಿ ಮಧ್ಯಂತರ ವರದಿಯಲ್ಲಿ ತಿಳಿಸಿದೆ. ಆದರೆ, ಆಕೆ ತೆಗೆದುಕೊಂಡಿರುವ ವಿಷ ಯಾವುದು? ಎನ್ನುವುದು ಅಂತಿಮ ವರದಿ ಬಂದ ಬಳಿಕ ತಿಳಿಯಲಿದೆ. [ತೀರ್ಥಹಳ್ಳಿಯಲ್ಲಿ ಆಣೆ ಪ್ರಮಾಣ ರಾಜಕೀಯ]

ಡೆತ್‌ನೋಟ್ ಪತ್ತೆಯಾಗಿತ್ತು : ನಂದಿತಾ ಅಪಹರಣ ಮತ್ತು ಕೊಲೆ ನಡೆದಿಲ್ಲ ಆಕೆ ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ವಿಧಿ ವಿಜ್ಞಾನ ಪ್ರಯೋಗಾಲಯವು ಕೆಲವು ದಿನಗಳ ಹಿಂದೆ ವರದಿ ನೀಡಿತ್ತು. ಸದ್ಯ ಸಿಐಡಿಯೂ ಮಧ್ಯಂತರ ವರದಿಯೂ ಇದನ್ನೇ ಹೇಳಿದೆ.

ತೀರ್ಥಹಳ್ಳಿಯ ಸರ್ಕಾರಿ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ 8ನೇ ತರಗತಿ ವ್ಯಾಸಂಗ ಮಾಡುತ್ತಿದ್ದ ನಂದಿತಾಳನ್ನು ಮೂವರು ಯುವಕರ ಗುಂಪು ಅಪಹರಿಸಿ ಆನಂದ ಗಿರಿ ಬೆಟ್ಟಕ್ಕೆ ಕರೆದುಕೊಂಡು ಹೋಗಿ ವಿಷಪ್ರಾಶನ ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು.

ಅಸ್ವಸ್ಥ ಸ್ಥಿತಿಯಲ್ಲಿ ಪತ್ತೆಯಾಗಿದ್ದ ನಂದಿತಾ ಅ.31ರಂದು ಚಿಕಿತ್ಸೆ ಫಲಕಾರಿಯಾಗದೇ ಮಣಿಪಾಲದ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಳು. ನಂದಿತಾ ಸಾವಿನ ನಂತರ ತೀರ್ಥಹಳ್ಳಿಯಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿತ್ತು. 15 ದಿನಗಳ ಕಾಲ ಪಟ್ಟಣದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+