ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶಿವಮೊಗ್ಗ: ಮಹಿಳೆಯರನ್ನು ಕೈ ಬೀಸಿ ಕರೆಯುತ್ತಿವೆ ಮೈಸೂರು ಸಿಲ್ಕ್ಸ್ ಸೀರೆ

|
Google Oneindia Kannada News

ಶಿವಮೊಗ್ಗ, ಜುಲೈ 26 : ಶಿವಮೊಗ್ಗದಲ್ಲಿ 5 ದಿನಗಳ ಮೈಸೂರು ಸಿಲ್ಕ್ಸ್ ಸೀರೆಗಳ ಪ್ರದರ್ಶನ ಮತ್ತು ಮಾರಾಟಕ್ಕೆ ಚಾಲನೆ ಸಿಕ್ಕಿದೆ. ಸರ್ಕಾರಿ ನೌಕರರು ಸುಲಭ ಕಂತಿನಲ್ಲಿ ರೇಷ್ಮೆ ಉತ್ಪನ್ನಗಳನ್ನು ಖರೀದಿಸಲು ಅವಕಾಶ ಕಲ್ಪಿಸಲಾಗಿದೆ.

ಶಿವಮೊಗ್ಗ ನಗರದ ಕನ್ನಡ ಸಂಘದ ಸಭಾಂಗಣದಲ್ಲಿ ಮೈಸೂರು ಸಿಲ್ಕ್ಸ್ ಸೀರೆಗಳ ಪ್ರದರ್ಶನ ಮತ್ತು ಮಾರಾಟಕ್ಕೆ ಅಪರ ಜಿಲ್ಲಾಧಿಕಾರಿ ಜಿ.ಅನುರಾಧ ಚಾಲನೆ ನೀಡಿದರು. "110ವರ್ಷಗಳ ಭವ್ಯ ಇತಿಹಾಸ ಹೊಂದಿರುವ ರಾಜ್ಯ ಸರ್ಕಾರದ ಹೆಮ್ಮೆಯ ಸಂಸ್ಥೆ ಮೈಸೂರು ಸಿಲ್ಕ್ಸ್ ಉತ್ಪಾದಿಸುತ್ತಿರುವ ಗುಣಮಟ್ಟದ ಮೈಸೂರು ರೇಷ್ಮೆ ಉತ್ಪನ್ನಗಳು ನಾಡಿನ ಶ್ರೇಷ್ಟತೆ ಹಾಗೂ ಪರಂಪರೆಯ ಪ್ರತೀಕ" ಎಂದು ಹೇಳಿದರು.

ಸೀರೆಗೆ ಸೀರೆನೇ ಸಾಟಿ! ಟ್ವಿಟ್ಟರ್ ನಲ್ಲಿ ಸೀರೆಯಲ್ಲಿ ಮಿಂಚಿದ ನೀರೆಯರುಸೀರೆಗೆ ಸೀರೆನೇ ಸಾಟಿ! ಟ್ವಿಟ್ಟರ್ ನಲ್ಲಿ ಸೀರೆಯಲ್ಲಿ ಮಿಂಚಿದ ನೀರೆಯರು

"ಧಾರ್ಮಿಕ ಹಾಗೂ ಸಾಂಪ್ರದಾಯಿಕ ಕಾರ್ಯಕ್ರಮಗಳಲ್ಲಿ ಮಹತ್ವದ ಸ್ಥಾನ ಪಡೆದಿರುವ ಮೈಸೂರು ರೇಷ್ಮೆಗೆ ಜಾಗತಿಕ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಇದೆ. ಮೈಸೂರು ಉತ್ಪನ್ನಗಳಿಗೆ ಕೇಂದ್ರ ಸರ್ಕಾರವು ಜಿಯೋ ಟ್ಯಾಗ್‍ನ್ನು ಅಳವಡಿಸಲು ಅನುಮತಿ ನೀಡಿದೆ. ಈ ಉತ್ಪನ್ನಗಳ ಖರೀದಿಯಿಂದ ಗ್ರಾಹಕರು ಸಂತುಷ್ಟರಾಗಿದ್ದಾರೆ" ಎಂದರು.

10 ರುಪಾಯಿಗೆ ಸೀರೆ ಮಾರಾಟ; ಹೈದರಾಬಾದ್ ಶಾಪಿಂಗ್ ಮಾಲ್ ನಲ್ಲಿ ಕಾಲ್ತುಳಿತ10 ರುಪಾಯಿಗೆ ಸೀರೆ ಮಾರಾಟ; ಹೈದರಾಬಾದ್ ಶಾಪಿಂಗ್ ಮಾಲ್ ನಲ್ಲಿ ಕಾಲ್ತುಳಿತ

Mysore Silk Saree Exhibition And Sale In Shivamogga

"ರಾಮನಗರ, ಕೊಳ್ಳೆಗಾಲದಲ್ಲಿ ಬೆಳೆಯುವ ಗುಣಮಟ್ಟದ ಕಚ್ಚಾ ರೇಷ್ಮೆಯನ್ನು ನೇರವಾಗಿ ರೈತರಿಂದ ಹೆಚ್ಚಿನ ದರದಲ್ಲಿ ಸಂಸ್ಥೆಯೇ ಖರೀದಿಸಿ, ಕೌಶಲ್ಯ ಹೊಂದಿರುವ ಶ್ರಮಿಕರಿಂದ ಗುಣಮಟ್ಟದ ಉತ್ಪನ್ನಗಳನ್ನು ಉತ್ಪಾದಿಸಿ, ಗ್ರಾಹಕರಿಗೆ ಒದಗಿಸುತ್ತಿರುವ ಏಕೈಕ ಸಂಸ್ಥೆಯಾಗಿದೆ" ಎಂದು ಬಣ್ಣಿಸಿದರು.

ಚಾಮುಂಡಿ ಬೆಟ್ಟದ ದೇವಾಲಯದಲ್ಲಿ ಹರಕೆ ಸೀರೆ ಮಾರಾಟದಿಂದ ಬರುವ ಆದಾಯವೆಷ್ಟು?ಚಾಮುಂಡಿ ಬೆಟ್ಟದ ದೇವಾಲಯದಲ್ಲಿ ಹರಕೆ ಸೀರೆ ಮಾರಾಟದಿಂದ ಬರುವ ಆದಾಯವೆಷ್ಟು?

ಸೀರೆಗಳ ದರ ಎಷ್ಟು : ಸೀರೆಗಳ ಪ್ರದರ್ಶನ ಮತ್ತು ಮಾರಾಟ ಮೇಳದಲ್ಲಿ ರೂ. 6,100 ರಿಂದ 1.25ಲಕ್ಷ ರೂ.ಗಳ ವರೆಗಿನ ಮೌಲ್ಯದ ವಿವಿಧ ವಿನ್ಯಾಸದ ಸೀರೆಗಳು ಇವೆ. ಸರ್ಕಾರಿ ನೌಕರರು ಸುಲಭ ಕಂತಿನಲ್ಲಿ ರೇಷ್ಮೆ ಉತ್ಪನ್ನಗಳನ್ನು ಖರೀದಿಸಲು ಅವಕಾಶ ಕಲ್ಪಿಸಲಾಗಿದೆ.

ಮೈಸೂರು ಸಿಲ್ಕ್ ಸಂಸ್ಥೆಯ ಮಾರುಕಟ್ಟೆ ವ್ಯವಸ್ಥಾಪಕ ಭಾನುಪ್ರಸಾದ್ ಮಾತನಾಡಿ, " 50 ವರ್ಷಗಳ ಹಿಂದೆ ಮೈಸೂರು ಸಿಲ್ಕ್ ಸೀರೆಗಳನ್ನು ಖರೀದಿ ಮಾಡಿದ ಗ್ರಾಹಕರಿಂದ ಸೀರೆಗಳನ್ನು ಪಡೆದು ವಿಧಾನಸೌಧದ ಮುಂಭಾಗದಲ್ಲಿ ಸಾರ್ವಜನಿಕ ಪ್ರದರ್ಶನಕ್ಕೆ ಇರಿಸಲಾಗುವುದು. ನಂತರ ಮಾಲೀಕರಿಗೆ ರೂ.20,000 ನಗದು ಪುರಸ್ಕಾರದೊಂದಿಗೆ ಅವುಗಳನ್ನು ಗ್ರಾಹಕರಿಗೆ ಹಿಂದಿರುಗಿಸಲಾಗುವುದು" ಎಂದರು.

"ಕಳೆದ ವರ್ಷ ಮೈಸೂರು ಸಿಲ್ಕ್ ಸಂಸ್ಥೆಯು 199 ಕೋಟಿ ರೂ.ಗಳ ಆರ್ಥಿಕ ವಹಿವಾಟನ್ನು ನಡೆಸಿ, ದಾಖಲೆ ನಿರ್ಮಿಸಿದೆ. ಪ್ರಸ್ತುತ ಸಾಲಿನಲ್ಲಿ ಬಿಡುಗಡೆಗೊಳಿಸಿರುವ ಹೊಸ ವಿನ್ಯಾಸದ ಸೀರೆಯು ಗ್ರಾಹಕರ ಅಭಿರುಚಿ ಹಾಗೂ ಅಭಿಪ್ರಾಯವನ್ನು ಆಧರಿಸಿ ತಯಾರಿಸಲಾಗಿದ್ದು, ಮಾರುಕಟ್ಟೆಯಲ್ಲಿ ವಿಶೇಷ ಬೇಡಿಕೆ ಹೊಂದಿದೆ" ಎಂದು ಹೇಳಿದರು.

English summary
5 days of Mysore silk saree exhibition and sale in began at Shivamogga. 6,000 to 1 lakh Rs sarees for sale.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X