ಶಿವಮೊಗ್ಗ: ಜೋಗ ಜಲಪಾತದಲ್ಲಿ ಬಿದ್ದು ಯುವತಿ ಆತ್ಮಹತ್ಯೆ
ಶಿವಮೊಗ್ಗ, ಜುಲೈ.06: ಬಾಂಬೆ ಪ್ರವಾಸಿ ಮಂದಿರದ ಕಡೆಯಿಂದ ಬಂದ ಮುಸ್ಲಿಂ ಯುವತಿ ರಾಜಾ ಫಾಲ್ಸ್ ನಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಿನ್ನೆ ಸಂಜೆ ಗುರುವಾರ ಬೆಳಕಿಗೆ ಬಂದಿದೆ.
ಕಾರವಾರ ಬಸ್ ನಲ್ಲಿ ಬಂದು ಜೋಗದಲ್ಲಿ ಇಳಿದು, ನಂತರ ರಾಜಾಫಾಲ್ಸ್ ನತ್ತ ತೆರಳಿ ಬಿದ್ದಿರುವ ಬಗ್ಗೆ ಮಾಹಿತಿ ದೊರೆತಿದೆ. ಯುವತಿ ಫಾಲ್ಸ್ ನಿಂದ ಬೀಳುವುದನ್ನು ನೋಡಿದ ಪ್ರವಾಸಿಗರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಯುವತಿಯ ಶವ ಹುಡುಕಲು ಪೊಲೀಸ್ ಮತ್ತು ಅಗ್ನಿಶಾಮಕ ಸಿಬ್ಬಂದಿ ಕಾರ್ಯಚರಣೆ ಆರಂಭಿಸಿದ್ದಾರೆ. ಆದರೆ ನಿನ್ನೆ ರಾತ್ರಿಯಾಗಿದ್ದರಿಂದ ಕಾರ್ಯಚರಣೆಗೆ ತೊಂದರೆಯಾದ ಕಾರಣ ಮತ್ತು ಮಳೆಯೂ ಕೂಡ ಹೆಚ್ಚಾಗಿದ್ದರಿಂದ ಬೆಳಗ್ಗೆಯಿಂದಲೇ ಯುವತಿಯ ಶವ ಪತ್ತೆ ಕಾರ್ಯಾಚರಣೆ ಆರಂಭವಾಗಿದೆ.

ಜೋಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಂತಹ ಪ್ರಕರಣಗಳು ಜೋಗದಲ್ಲಿ ನಡೆಯುತ್ತಿರುವುದು ಇದೇ ಮೊದಲೇನಲ್ಲ. ಮಳೆಗಾಲದಲ್ಲಿ ವಿಶ್ವವಿಖ್ಯಾತ ಜೋಗ ಜಲಪಾತ ವೀಕ್ಷಣೆಗೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ಈ ಸಂದರ್ಭದಲ್ಲಿ ಕೆಲ ಪ್ರವಾಸಿಗರು ಈಜಲು ಹೋಗಿ ಸಾವನ್ನಪ್ಪಿರುವ ಘಟನೆಗಳು ಸಂಭವಿಸಿವೆ.
ಅದೇ ರೀತಿ ಜಲಪಾತದ ನೀರು ಬೀಳುವ ಮೇಲ್ಭಾಗದಲ್ಲಿ ನಿಂತು ಫೋಟೋ ತೆಗೆದುಕೊಳ್ಳಲು ಸಾವಿರಾರು ಪ್ರವಾಸಿಗರು ಹಾತೊರೆಯುತ್ತಿರುತ್ತಾರೆ. ಈ ವೇಳೆ ಇಲ್ಲಿಂದ ಜಾರಿ ಬಿದ್ದು, ಅನೇಕರು ತಮ್ಮ ಪ್ರಾಣ ಕಳೆದುಕೊಂಡ ಸುದ್ದಿಗಳು ಮಾಧ್ಯಮಗಳಲ್ಲಿ ಆಗಾಗ ಬಿತ್ತರವಾಗುತ್ತಿರುತ್ತವೆ.
ಮತ್ತೇ ಕೆಲವರು ಉದ್ದೇಶಪೂರ್ವಕವಾಗಿ ಆತ್ಮಹತ್ಯೆ ಮಾಡಿಕೊಳ್ಳಲೆಂದೇ ಇಲ್ಲಿಗೆ ಬರುತ್ತಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.












Click it and Unblock the Notifications