• search
 • Live TV
ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕೊರೊನಾ ಬಂದಾಗಿನಿಂದ ಮೋದಿ ಹೊರಗಡೆ ಬಂದಿಲ್ಲ ಎಂದವರಿಗೆ ಪ್ರಧಾನಿ ಇಂದು ಉತ್ತರ ಕೊಟ್ಟಿದ್ದಾರೆ

|
Google Oneindia Kannada News

ಶಿವಮೊಗ್ಗ, ಜುಲೈ 3: "ಕೊರೊನಾ ಬಂದಾಗಿನಿಂದ ನರೇಂದ್ರ ಮೋದಿ ಹೊರಗೆ ಬಂದಿಲ್ಲ ಎಂದವರಿಗೆ, ತಕ್ಕ ಉತ್ತರವನ್ನು ಇಂದು ನಮ್ಮ ಪ್ರಧಾನಿಗಳು ನೀಡಿದ್ದಾರೆ"ಎಂದು ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.

   15 BBMP workers tested corona positive ಬಿಬಿಎಂಪಿ 15 ಸಿಬ್ಬಂದಿಗಳಿಗೆ ಕೊರೊನಾ ವೈರಸ್ ಸೋಂಕು|Oneindia Kannada

   ಈ ಬಗ್ಗೆ ಟ್ವಿಟ್ಟರ್ ನಲ್ಲಿ ಈಶ್ವರಪ್ಪ ಬರೆದುಕೊಂಡಿದ್ದು ಹೀಗೆ,"ಮೋದಿ ಪ್ರಧಾನಿ ಆಗಲು ಲಾಯಕ್ಕಿಲ್ಲ, ಮನೆ ಬಿಟ್ಟು ಹೊರಬಂದಿಲ್ಲ ಎಂದು ನಿನ್ನೆ ಪುಂಗಿ ಊದ್ದಿದ್ದ ನಮ್ಮ ಮಾಜಿ ಮುಖ್ಯಮಂತ್ರಿಗಳ ಗಮನಕ್ಕೆ"ಎನ್ನುವ ಒಕ್ಕಣೆಯ ಮೂಲಕ ಈಶ್ವರಪ್ಪ, ಸಿದ್ದರಾಮಯ್ಯನವರ ಕಾಲೆಳೆದಿದ್ದಾರೆ.

   ಶತ್ರುಗಳಿಗೆ ಶೌರ್ಯದ ಪರಿಚಯ ಮಾಡಿಸಿದ್ದೀರಿ ಎಂದ ಮೋದಿಶತ್ರುಗಳಿಗೆ ಶೌರ್ಯದ ಪರಿಚಯ ಮಾಡಿಸಿದ್ದೀರಿ ಎಂದ ಮೋದಿ

   "ಇಂದು ಪ್ರಧಾನಿ ನರೇಂದ್ರ ಮೋದಿಜಿ ಲಡಾಕ್ ರಾಜಧಾನಿ Lehಗೆ ಭೇಟಿ ನೀಡಿ ಅಲ್ಲಿನ ಪ್ರಸ್ತುತ ಸಂಗತಿಗಳ ಬಗ್ಗೆ ಸೇನಾಧಿಕಾರಿಗಳ ಜೊತೆ ಚರ್ಚಿಸುತ್ತಿದ್ದಾರೆ. ಒಬ್ಬ ದೇಶಪ್ರೇಮಿ ಪ್ರಧಾನಿ ಏನೆಂದು ತೋರಿಸಿದ್ದಾರೆ" ಎಂದು ಈಶ್ವರಪ್ಪ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.

   'ಸಿದ್ದರಾಮಯ್ಯನವರ ಟ್ವೀಟ್ ಎಫೆಕ್ಟ್ ನಿಂದ ಮಾನ ಉಳಿಸಿಕೊಳ್ಳಲು, ಪ್ರಧಾನಿ ಮೋದಿ ಲೇಹ್ ಗೆ ಭೇಟಿ ನೀಡಿದ್ದು' ಎನ್ನುವ ಪ್ರತಿಕ್ರಿಯೆಯೊಂದು ಈಶ್ವರಪ್ಪನವರ ಟ್ವೀಟಿಗೆ ಬಂದಿದೆ.

   "ದೇಶದ ಅಭಿವೃದ್ದಿಯನ್ನು ಮಾಡಿ ಎಂದರೆ, ಚಪ್ಪಾಳೆ ಹೊಡೆಯಿರಿ, ದೀಪ ಹಚ್ಚಿ ಅಂತಾರೆ. ಕೊರೊನಾ ಬಂದಾಗಿನಿಂದ ಎಂದಾದರೂ, ಮೋದಿ, ಹೊರಗಡೆ ಬಂದಿದ್ದಾರಾ"ಎಂದು ಸಿದ್ದರಾಮಯ್ಯ, ಡಿಕೆಶಿ ಪದಗ್ರಹಣ ಕಾರ್ಯಕ್ರಮದಲ್ಲಿ, ಮೋದಿಯನ್ನು ಟೀಕಿಸಿದ್ದರು.

   ಟಿಕ್ ಟಾಕ್ ನಿಂದ ಪಿಎಂ ಕೇರ್ಸ್ ಫಂಡ್ ಗೆ 30 ಕೋಟಿ: ಮೊದಲು ಅದನ್ನು ವಾಪಸ್ ಕೊಡಿಟಿಕ್ ಟಾಕ್ ನಿಂದ ಪಿಎಂ ಕೇರ್ಸ್ ಫಂಡ್ ಗೆ 30 ಕೋಟಿ: ಮೊದಲು ಅದನ್ನು ವಾಪಸ್ ಕೊಡಿ

   ಶುಕ್ರವಾರ (ಜು 3) ಲಡಾಖ್ ನ ನಿಮು ಪ್ರದೇಶಕ್ಕೆ ಭೇಟಿ ನೀಡಿದ ಪ್ರಧಾನಿ, ಭಾರತೀಯ ಯೋಧರನ್ನು ಉದ್ದೇಶಿಸಿ ಮಾತನಾಡಿದರು. "ಗಾಲ್ವಾನ್ ನದಿ ಕಣಿವೆಯಲ್ಲಿ ಹೋರಾಟ ನಡೆಸಿ ಹುತಾತ್ಮರಾದ ಭಾರತೀಯ ಯೋಧರ ಬಗ್ಗೆ ಪ್ರತಿಯೊಬ್ಬ ಭಾರತೀಯರಿಗೂ ಗೌರವ ಮತ್ತು ಹೆಮ್ಮೆಯಿದೆ" ಎಂದು ಮೋದಿ ಈ ಸಂದರ್ಭದಲ್ಲಿ ಹೇಳಿದರು.

   English summary
   Minister KS Eshwarappa Reply To Former CM Siddaramaiah Over His Remark On Modi,
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X