ಶಿವಮೊಗ್ಗ: ಕಾರು ಪಲ್ಟಿಯಾಗಿ ಸಚಿವ ಡಿ.ಕೆ ಶಿವಕುಮಾರ್ ಆಪ್ತ ಸಾವು
ಶಿವಮೊಗ್ಗ, ನವೆಂಬರ್ 25 : ಕಾರು ಪಲ್ಟಿಯಾಗಿ ರಾಜ್ಯ ಸಚಿವ ಡಿ.ಕೆ.ಶಿವಕುಮಾರ್ ಆಪ್ತ ಸೇರಿದಂತೆ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಶಿವಮೊಗ್ಗ ತಾಲೂಕಿನ ಕುಂಸಿ ಬಳಿ ಶನಿವಾರ ನಡೆದಿದೆ.
ಸಚಿವ ಡಿ.ಕೆ.ಶಿವಕುಮಾರ್ ಆಪ್ತ, ಇಂಧನ ಇಲಾಖೆಯ ಶಾಖಾಧಿಕಾರಿ ಲೋಕೇಶ್ (35) ಹಾಗೂ ಪತ್ನಿ ಮೃತಪಟ್ಟಿದ್ದಾರೆ. ಲೋಕೇಶ್ ಬಳಿ ಇದ್ದ ಗುರುತಿನ ಪತ್ರ (ಐಡಿ ಕಾರ್ಡ್) ನಿಂದ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಪಿಎ ಎಂದು ಗುರುತಿಸಲಾಗಿದೆ.

ಬೆಂಗಳೂರಿನಿಂದ ಸಾಗರಕ್ಕೆ ಹೋರಟಿದ್ದ ಸಂದರ್ಭದಲ್ಲಿ ಈ ಅವಘಡ ಸಂಭವಿಸಿದ್ದು, ಮೃತ ಶವಗಳನ್ನ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ರವಾನಿಸಲಾಗಿದೆ.













Click it and Unblock the Notifications