ಮಧು ಬಂಗಾರಪ್ಪಗೆ ಸಚಿವ ಸ್ಥಾನ, ಇದು ದೇವೇಗೌಡರ ಹೊಸ ತಂತ್ರ!

Recommended Video

      ಮಧು ಬಂಗಾರಪ್ಪಗಾಗಿ ಎಚ್ ಡಿ ದೇವೇಗೌಡ ಮಾಡಿದ್ದಾರಾ ಮಾಸ್ಟರ್ ಪ್ಲಾನ್ | Oneindia Kannada

      ಶಿವಮೊಗ್ಗ, ನವೆಂಬರ್ 06 : ಶಿವಮೊಗ್ಗ ಲೋಕಸಭಾ ಉಪ ಚುನಾವಣೆ, ಸೊರಬ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಸೋಲು ಕಂಡರೂ ಮಧು ಬಂಗಾರಪ್ಪ ಅವರು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸಂಪುಟದಲ್ಲಿ ಸಚಿವರಾಗಲಿದ್ದಾರೆ?.

      ಮಂಗಳವಾರ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಉಪ ಚುನಾವಣಾ ಫಲಿತಾಂಶ ಪ್ರಟಕವಾಗಿದೆ. ಉಪ ಚುನಾವಣೆಗೆ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದ ಮಧು ಬಂಗಾರಪ್ಪ ಅವರು 4,91,158 ಮತಗಳನ್ನು ಪಡೆದು ಸೋಲು ಅನುಭವಿಸಿದ್ದಾರೆ.

      2018ರ ಮೇ ತಿಂಗಳಿನಲ್ಲಿ ನಡೆದ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿಯೂ ಸಹ ಮಧು ಬಂಗಾರಪ್ಪ ಅವರು ಸೊರಬ ಕ್ಷೇತ್ರದಲ್ಲಿ ಸೋಲು ಅನುಭವಿಸಿದ್ದರು. ಈ ಬಾರಿ ಲೋಕಸಭೆ ಚುನಾವಣೆಯಲ್ಲಿಯೂ ಸೋತರೂ ಸಚಿವರಾಗುವ ಸಾಧ್ಯತೆ ಇದೆ.

      ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರು 2019ರ ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಇಂತಹ ತಂತ್ರವನ್ನು ಮಾಡಿದ್ದಾರೆ. ಇದಕ್ಕೆ ಎಚ್.ಡಿ.ಕುಮಾರಸ್ವಾಮಿ ಅವರು ಒಪ್ಪಿಗೆ ನೀಡಲಿದ್ದಾರೆಯೇ? ಕಾದು ನೋಡಬೇಕು....

      ದೇವೇಗೌಡರಿಂದ ಫೋನ್ ಕರೆ

      ದೇವೇಗೌಡರಿಂದ ಫೋನ್ ಕರೆ

      ಲೋಕಸಭಾ ಉಪ ಚುನಾವಣೆ ಫಲಿತಾಂಶ ಪ್ರಕಟಗೊಂಡ ತಕ್ಷಣ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ಮಧು ಬಂಗಾರಪ್ಪ ಅವರಿಗೆ ಕರೆ ಮಾಡಿದ್ದಾರೆ. 52,148 ಮತಗಳ ಗೆಲುವು ಉಪ ಚುನಾವಣೆಯಲ್ಲಿ ದೊಡ್ಡದಲ್ಲ. ಕ್ಷೇತ್ರದಲ್ಲಿ ಬಿ.ವೈ.ರಾಘವೇಂದ್ರ ಅವರಿಗೆ ಪ್ರಬಲ ಪ್ರತಿಸ್ಪರ್ಧೆ ಒಡ್ಡಿದ್ದಕ್ಕೆ ದೇವೇಗೌಡರು ಸಂತಸ ವ್ಯಕ್ತಪಡಿಸಿದರು.

      3 ಕ್ಷೇತ್ರಗಳಲ್ಲಿ ಲೀಡ್

      3 ಕ್ಷೇತ್ರಗಳಲ್ಲಿ ಲೀಡ್

      ಮಧು ಬಂಗಾರಪ್ಪ ಅವರು 491158 ಮತಗಳನ್ನು ಪಡೆದು ಲೋಕಸಭಾ ಉಪ ಚುನಾವಣೆಯಲ್ಲಿ ಸೋತಿರಬಹುದು. ಆದರೆ, ಅವರು ಮೂರು ಕ್ಷೇತ್ರಗಳಲ್ಲಿ ಲೀಡ್ ಪಡೆದಿದ್ದಾರೆ.

      ಸೊರಬರಲ್ಲಿ 68,605, ಸಾಗರದಲ್ಲಿ 68,993 ಮತ್ತು ಭದ್ರಾವತಿಯಲ್ಲಿ 62,415 ಮತಗಳನ್ನು ಪಡೆದಿದ್ದಾರೆ. ಈ ಮತಗಳನ್ನು ಹಾಗೆಯೇ ಉಳಿಸಿಕೊಂಡರೆ 2019ರ ಚುನಾವಣೆಯಲ್ಲಿ ಸಹಾಯಕವಾಗಲಿದೆ ಎಂಬುದು ಎಚ್.ಡಿ.ದೇವೇಗೌಡರ ಲೆಕ್ಕಾಚಾರವಾಗಿದೆ.

      ಸಚಿವ ಸ್ಥಾನದ ಮಾತುಕತೆ

      ಸಚಿವ ಸ್ಥಾನದ ಮಾತುಕತೆ

      ಮಧು ಬಂಗಾರಪ್ಪ ಅವರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಿ ಎಚ್.ಡಿ.ಕುಮಾರಸ್ವಾಮಿ ಅವರ ಸಂಪುಟಕ್ಕೆ ಸೇರಿಸಿಕೊಳ್ಳುವ ಸಾಧ್ಯತೆ ಇದೆ. ನಂತರ ಅವರಿಗೆ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನ ನೀಡಿ, 2019ರ ಲೋಕಸಭೆ ಚುನಾವಣೆಗೆ ಕ್ಷೇತ್ರದಲ್ಲಿ ಪಕ್ಷವನ್ನು ಸಂಘಟಿಸುವ ಜವಾಬ್ದಾರಿ ನೀಡಲಾಗುತ್ತದೆ. ಇದು ದೇವೇಗೌಡರ ತಂತ್ರವಾಗಿದ್ದು, ಕುಮಾರಸ್ವಾಮಿ ಅವರು ಇನ್ನೂ ಒಪ್ಪಿಗೆ ನೀಡಬೇಕಿದೆ.

      ಒಂದು ಪರಿಷತ್ ಸ್ಥಾನ ಖಾಲಿ

      ಒಂದು ಪರಿಷತ್ ಸ್ಥಾನ ಖಾಲಿ

      ಮಧು ಬಂಗಾರಪ್ಪ ಅವರು ಎಚ್.ಡಿ.ಕುಮಾರಸ್ವಾಮಿ ಅವರ ಪರಮಾಪ್ತರು. ಅದಕ್ಕಾಗಿಯೇ ಮಧು ಬಂಗಾರಪ್ಪ ಅವರು ನಾಮಪತ್ರವನ್ನು ಸಲ್ಲಿಸುವ ದಿನ ಕುಮಾರಸ್ವಾಮಿ ಅವರು ಶಿವಮೊಗ್ಗಕ್ಕೆ ಬಂದಿದ್ದರು. ಜೆಡಿಎಸ್ ಒಂದು ಪರಿಷತ್ ಸ್ಥಾನವನ್ನು ಖಾಲಿ ಇಟ್ಟುಕೊಂಡಿದೆ. ಮಧು ಬಂಗಾರಪ್ಪ ಅವರನ್ನು ಪರಿಷತ್ ಸದಸ್ಯರನ್ನಾಗಿ ಮಾಡಿ ಸಂಪುಟಕ್ಕೆ ಸೇರಿಸಿಕೊಳ್ಳಬಹುದು ಎಂಬುದು ಸದ್ಯದ ಲೆಕ್ಕಾಚಾರ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+