ಕೃಷಿ ಸಾಲ ಮನ್ನಾ ಯೋಜನೆ ಗೊಂದಲಮಯವಾಗಿದೆ: ಯಡಿಯೂರಪ್ಪ

Recommended Video

      ರೈತರ ಕೃಷಿ ಸಾಲ ಮನ್ನಾ ಬಗ್ಗೆ ಬಿ ಎಸ್ ಯಡಿಯೂರಪ್ಪನವರಿಗೆ ಗೊಂದಲ | Oneindia Kannada

      ಶಿವಮೊಗ್ಗ, ಜು.21: ಕೃಷಿ ಸಾಲಮನ್ನಾ ಭಾಗ್ಯದಿಂದ ರಾಜ್ಯಕ್ಕೆ ಆರ್ಥಿಕ ಹೊರೆಯಾಗುತ್ತಿದೆ ಅಷ್ಟೇ ಅಲ್ಲದೆ ಸಾಲಮನ್ನಾ ಗೊಂದಲಮಯವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ಹೇಳಿದ್ದಾರೆ.

      ಶಿವಮೊಗ್ಗದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾಲಮನ್ನಾ ರಾಜ್ಯಕ್ಕೆ ಆರ್ಥಿಕ ಹೊರೆಯನ್ನು ತಂದೊಡ್ಡಿದೆ, ಪ್ರತಿ ಪ್ರಜೆಯ ಮೇಲೆ 46,886 ರೂನಷ್ಟು ಹೊರೆ ಬೀಳಲಿದೆ, ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇದನ್ನು ಪ್ರಾರಂಭಿಸಿದರು ಇದೀಗ ಕುಮಾರಸ್ವಾಮಿಯವರು ಸಾಲಭಾಗ್ಯವನ್ನು ಯೋಜನೆಯನ್ನು ಮುಂದುವರೆಸುತ್ತಿದ್ದಾರೆ ಎಂದರು.

      ಹಳೇ ಸಾಲ ಮನ್ನಾವಾದರೆ ಮಾತ್ರ ಹೊಸ ಸಾಲ ಸಿಗುತ್ತದೆ ಇಲ್ಲವಾದಲ್ಲಿ ಸಾಲ ಸಿಗುವುದಿಲ್ಲ, ರೂತರಿಗೆ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಸಾಲ ಸಿಗುವುದಿಲ್ಲ, ಕುಮಾರಸ್ವಾಮಿಯವರು ಕೆಲವು ದಿನಗಳ ಕಾಲ ಕಾಯುವಂತೆ ನನ್ನ ಬಳಿ ಹೇಳಿದ್ದಾರೆ ನಾನು ಇದೀಗ ಈ ಕುರಿತು ಹೆಚ್ಚಿಗೆ ಮಾತನಾಡುವುದಿಲ್ಲ.

      Lot of confusion over farmars loan waive off

      ಹಾಲು ಉತ್ಪಾದಕರ 730 ಕೋಟಿ ರೂ ಇನ್ನೂ ಬಾಕಿ ಇದೆ. ವಿವಿಧ ಇಲಾಖೆಗಳು ನೀಡುವ ಬಿಲ್‌ಗಳ ಬಾಕಿ ಹಣವು ಇನ್ನೂ ನೀಡಿಲ್ಲ, ಇದರ ಮಧ್ಯೆ ಈ ಸಾಲ ಮನ್ನಾ ರಾಜ್ಯಕ್ಕೆ ಆರ್ಥಿಕ ಹೊರೆಯಾಗಲಿದೆ ಎಂದರು.

      ಶಿವಮೊಗ್ಗದಲ್ಲಿ 10 ಸಾವಿರ ಎಕರೆ ಭೂಮಿ ಸಂಪೂರ್ಣ ಜಲಾವೃತವಾಗಿದೆ. ಹೇಳುವವರು, ಕೇಳುವವರು ಇಲ್ಲದಂತಾಗಿದೆ, ಇಷ್ಟು ಮಳೆ ಬಂದರೂ ಜಲಾವೃತವಾದ ರ್ಸಥಳಕ್ಕೆ ಜಿಲ್ಲಾಧಿಕಾರಿ ಇದುವರೆಗೂ ಭೇಟಿ ನೀಡಿಲ್ಲ, ಶಿವಮೊಗ್ಗ ಜನರ ಪರಿಸ್ಥಿತಿ ವಿಚಾರಿಸಲು ಯಾರು ಇಲ್ಲದಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+