Breaking: ಆನ್‌ಲೈನ್ ಟ್ರೆಡಿಂಗ್, ಹಣ ಕಳೆದುಕೊಂಡ ಯುವಕ ನಾಪತ್ತೆ
ಬೆಂಗಳೂರು, ಆಗಸ್ಟ್ 31: ಆನ್‌ಲೈನ್ ಟ್ರೆಡಿಂಗ್ ವಿಚಾರದಲ್ಲಿ ಬಹಳ ಎಚ್ಚರವಾಗಿರಬೇಕು ಎಂದು ಪದೇ ಪದೇ ಜಾಗೃತಿ ಮೂಡಿಸಲಾಗುತ್ತಿದೆ. ಆದರೆ ಬೇಗ ಹಣ ಮಾಡಲು ಹೋಗಿ ಲಕ್ಷಾಂತರ ರೂಪಾಯಿ ಹೂಡಿಕೆ ಮಾಡಿ ಜನರು ಸಂಕಷ್ಟಕ್ಕೆ ಸಿಲುಕುತ್ತಲೇ ಇದ್ದಾರೆ. ಹೀಗೆ ಆನ್‌ಲೈನ್ ಟ್ರೆಡಿಂಗ್‌ನಲ್ಲಿ ಹೂಡಿಕೆ ಮಾಡಿದ್ದ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ಯುವಕನೊಬ್ಬರ ನಾಪತ್ತೆಯಾಗಿದ್ದಾನೆ. ಬೈಕ್ ತುಂಗಾ ನದಿಯ ಬಳಿ ಪತ್ತೆಯಾಗಿದ್ದು, ಯುವಕನಿಗಾಗಿ ಹುಡುಕಾಟ ನಡೆದಿದೆ.
ಆನ್‌ಲೈನ್ ಟ್ರೆಡಿಂಗ್‌ನಲ್ಲಿ ಹೂಡಿಕೆ ಮಾಡಿ, ಹಣ ಕಳೆದುಕೊಂಡ ಯುವಕ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಕುರುವಳ್ಳಿ ಸಮೀಪ ನಾಪತ್ತೆಯಾಗಿದ್ದಾನೆ. ಯುವಕನನ್ನು ಜಯದೀಪ್ ಎಂದು ಗುರುತಿಸಲಾಗಿದೆ. ಆತ ತುಂಗಾ ನದಿಗೆ ಹಾರಿರುವ ಶಂಕೆ ಇದ್ದು, ಬೈಕ್ ತುಂಗಾ ಸೇತುವೆಯ ಬಳಿ ಪತ್ತೆಯಾಗಿದೆ.

ಜಯದೀಪ್ ನಾಪತ್ತೆಯಾಗುವ ಮೊದಲು ವಾಟ್ಸ್‌ಅಪ್ ಸ್ಟೇಟಸ್‌ನಲ್ಲಿ ಡೆತ್ ನೋಟ್ ಮಾದರಿಯ ಉದ್ದದ ಬರಹವನ್ನು ಹಾಕಿದ್ದಾನೆ. ಅಪ್ಪ-ಅಮ್ಮ ನನ್ನನ್ನು ಕ್ಷಮಿಸಿ ಎಂದು ಬರೆದಿರುವ ಜಯದೀಪ್ ಸುಮಾರು 90 ಸಾವಿರ ಸಾಲ ಪಡೆದುಕೊಂಡಿರುವ ಮಾಹಿತಿ ಇದೆ. ಬೈಕ್ ಮಾರಿ ಸಾಲ ತೀರಿಸಿ ಎಂದು ಪೋಷಕರಿಗೆ ಆತ ಹೇಳಿದ್ದು, ನಾಪತ್ತೆಯಾಗಿದ್ದಾನೆ.
ಜಯದೀಪ್ ಬೈಕ್ ಸಿಕ್ಕ ಸ್ಥಳಕ್ಕೆ ತೀರ್ಥಹಳ್ಳಿ ಠಾಣೆ ಪೊಲೀಸರು ಮತ್ತು ಅಗ್ನಿ ಶಾಮಕದಳದ ಸಿಬ್ಬಂದಿ ಭೇಟಿ ನೀಡಿ, ಶೋಧ ನಡೆಸುತ್ತಿದ್ದಾರೆ. ಮಳೆಗಾಲವಾದ ಕಾರಣ ತುಂಗಾ ನದಿಯಲ್ಲಿ ನೀರಿನ ಮಟ್ಟ ಹೆಚ್ಚಿದ್ದು, ಜಯದೀಪ್ ನದಿಗೆ ಹಾರಿದ್ದಾನೆಯೇ? ಎಂದು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.
ಯುವಕನ ವಾಟ್ಸಪ್ ಸ್ಟೇಟಸ್: ಜಯದೀಪ್ ಎಂ. ಜೆ. ವಾಟ್ಸಪ್ ಸ್ಟೇಟಸ್‌ನಲ್ಲಿ, 'ನನ್ನ ಒಂದು ಸಣ್ಣ ತಪ್ಪು ನನ್ನ ಇವತ್ತು ನನ್ನ ಸಾವಿನ ಕಡೇ ತಳ್ಳುತ್ತ ಇದೆ. money Thading Iinvestment ಅಂತ ಕಳೆದ 3 ದಿನದಲ್ಲಿ ಸಿಕ್ಬಿದ್ದೆ. ನನ್ನಂತ ತಿಳುವಳಿಕೆ ಇದ್ದವನು ಹೇಗೆ ಸಿಕ್ಕಿದ್ದೆ ಅಂತ ನಂಬಕ್ ಆಗ್ತಾ ಇಲ್ಲ. ಎಲ್ಲರ ಬಳಿ ಸಾಲಕ್ಕೆ ಬೇಡಿಕೆ ಇಟ್ಟೆ. ಸುಮಾರು ಜನದ ಬಳಿ ದುಡ್ಡು phone pay- google pay ಮಾಡುಸ್ಕೊಂಡೆ. ಸುಮಾರು 90000 ಸಾಲ ಮಾಡಿದೆ. ಪಾಪ ಅವರು ನನ್ ಮೇಲೆ ನಂಬಿಕೆ ಇಟ್ಟು ಕಳಸುದ್ರು. ಆದರೆ ಅವರ ನಂಬಿಕೆ ಉಳಿಸಿಕೊಳ್ಳಲು ನನಗೆ ಆಗಲಿಲ್ಲ.
ಅವರು ಯಾರು ಹಣಕ್ಕಾಗಿ ಒತ್ತಾಯ ಮಾಡಲಿಲ್ಲ. ಆದರೇ ನನಗೇ ಒಂದು ರೀತಿ ಜಿಗುಪ್ಸೆವುಂಟಾಗುತ್ತಿದೆ. ಈ ಸಣ್ಣ ಅಮೌಂಟ್‌ಗಳು ನನಿಗೆ ದೊಡ್ಡ ವಿಷಯ ಯೇನು ಆಗಿರಲಿಲ್ಲ. ಆದರೆ ಎಲ್ಲರ ನಂಬಿಕೆ ಉಳಿಸಿಕೊಳ್ಳೋದು ನನಗೆ ಈ ಸಂದರ್ಭದಲ್ಲಿ ಕಷ್ಟ ಆಯಿತು. ನಾನು ಬರುತಿದ್ದರೆ ಇನ್ನು ಸ್ವಲ್ಪ ದಿನಗಳಲ್ಲಿ ಡಿಗ್ರಿ ಮುಗಿಸಿತ್ತು. ನಾನು ಒಬ್ಬ ಒಳ್ಳೆ ವಿದ್ಯಾರ್ಥಿ ಈ ಸಲ ರ‍್ಯಾಂಕ್ ಬರೋ ಚಾನ್ಸ್ ಸಹ ಇತ್ತು. ಆದರೇ ಅದು ಇನ್ನೂ ನೆನಪು ಮಾತ್ರ.
ಅಪ್ಪ-ಅಮ್ಮ ಸಂಜಯ್ ನನ್ನ ಕ್ಷಮಿಸಿ ಬಿಡಿ. ನಿಮ್ಮ ಆಸೆ ನಂಬಿಕೆ ಎಲ್ಲ ನಾನು ಹಾಳು ಮಾಡುತ್ತ ಇದಿನಿ ಅಂತ ಬೇಜಾರು ಆಗಬೇಡಿ. ನನ್ನ ಸಾಲ ನಿಮ್ಮ ಮೇಲೆ ಹಾಕಿ ಹೋಗ್ತಾ ಇದಿನಿ ಅಂತ ಸಿಟ್ಟು ಮಾಡಿಕೋಬೇಡಿ. ನನ್ನ ಬೈಕ್ ಮಾರೀ ಸ್ವಲ್ಪ ಅಡ್ ಜೆಸ್ಟ್ ಮಾಡಿ ಎಲ್ಲರಿಗೂ ಕೊಡಿ. ನನ್ನ ಜೀವನಾನೇ ಒಂದು ರೀತಿ ಉಪ್ಪಿಲ್ಲದ ಊಟದ ರೀತಿ ಈ ಸುಮಾರು 3 ವರ್ಷದಿಂದ ಆಗಿದೆ.
ನನ್ನ ಜೀವನದಲ್ಲಿ ವಯಸ್ಸು 24 ಆದರೂ ಹುಡುಗಿ ಅಂತ ಇಲ್ಲ. ಸಣ್ಣ ಸಣ್ಣ ಹುಡುಗರಿಗೆಲ್ಲ lover ಇದ್ರು ನನಗೆ ಇಲ್ಲ ಅನ್ನೋ ಬೇಜಾರು. oneside ಅಲ್ಲಿ ನಾನ್ ಒಬ್ಬಳನ್ನು love ಮಾಡಿದ್ದೆ. ಅವಳು ಒಪ್ಲಿಲ್ಲ. ಒಳ್ಳೆ ಕೆಲಸ ಹುಡುಕೋದ್ರಲ್ಲಾ ವಿಫಲವಾದೆ. ಇತ್ತೀಚಿನ ದಿನಗಳಲ್ಲಿ ಬರಿಸಾಲ ಮಾನಸಿಕ ಖಿನ್ನತೆ ನನ್ನ ಎಲ್ಲಾದರೂ ದೂರ ಹೋಗುವಂತೆ ಪ್ರೇರೇಪಿಸಿತು.
ಊರು ಬಿಡೋಣ ಅಂತ ಮಾಡಿದೆ. ಆದರೆ ಊರು ಬಿಡೋಕ್ಕಿಂತ ಸಾವೇ ನನ್ನ ಮುನ್ನುಗ್ಗಿ ಕರೆಯಿತು. ಎಲ್ಲರಿಗೂ SoRRy please ಕ್ಷಮಿಸಿಬಿಡಿ ನನ್ನ ಸಾವಿಗೆ ನನ್ನ ಕೆಟ್ಟ ನಿರ್ಧಾರಗಳೇ ಕಾರಣ ಎಂದು ಸ್ಟೇಟಸ್ ಹಾಕಿದ್ದಾರೆ. ಯುವಕನಿಗಾಗಿ ಪೊಲೀಸರ ಹುಡುಕಾಟ ಮುಂದುವರೆದಿದೆ.
ನಿಮ್ಹಾನ್ಸ್, ರೋಟರಿ ಸಂಸ್ಥೆ ಹಾಗೂ ಮೆಡಿಕೊ ಪ್ಯಾಸ್ಟೊರಾಲ್ ಅಸೋಸಿಯೇಷನ್ ನೆರವಿನಿಂದ ಆತ್ಮಹತ್ಯೆ ತಡೆಗಟ್ಟಲು, ಮಾನಸಿಕ ಖಿನ್ನತೆಯಿಂದ ಬಳಲುವವರಿಗಾಗಿ SAHAI ಸಹಾಯವಾಣಿ ಇದೆ. ನಂಬರ್ 080 - 25497777.
-
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು -
Jowar Price Today: ಕರ್ನಾಟಕದಲ್ಲಿ ಕ್ವಿಂಟಾಲ್ ಜೋಳದ ಬೆಲೆ ಎಷ್ಟಿದೆ, ಮಾರುಕಟ್ಟೆವಾರು ಪಟ್ಟಿ ಇಲ್ಲಿದೆ. -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
RCB: ಆರ್ಸಿಬಿ ಪಂದ್ಯದ ನಡುವೆಯೆ ಮತ್ತೊಮ್ಮ ಅಭಿಮಾನಿಗಳ ಮನಗೆದ್ದ 'ಕ್ರಶ್' ಅನನ್ಯಾ ಬಿರ್ಲಾ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ












Click it and Unblock the Notifications