ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶಿವಮೊಗ್ಗದಲ್ಲಿ ಬುದ್ಧಿ ಹೇಳಿದ ತಾತನನ್ನೇ ಕೊಂದ ಮೊಮ್ಮಗನಿಗೆ ಜೀವಾವಧಿ ಶಿಕ್ಷೆ

By ಶಿವಮೊಗ್ಗ ಪ್ರತಿನಿಧಿ
|
Google Oneindia Kannada News

ಶಿವಮೊಗ್ಗ, ಫೆಬ್ರವರಿ 27: ಕುಡಿಯಬೇಡ ಎಂದು ಬುದ್ಧಿ ಹೇಳಿದ ತನ್ನ ಅಜ್ಜನನ್ನೇ ಕೊಲೆ ಮಾಡಿದ್ದ ಅಪರಾಧಕ್ಕಾಗಿ ಸಾತ್ವಿಕ್ ಎಂಬ ಯುವಕನಿಗೆ 5ನೇ ಹೆಚ್ಚುವರಿ ಮತ್ತು ಜಿಲ್ಲಾ ಸೆಷನ್ಸ್ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.

ಜಿಲ್ಲೆಯ ಸಾಗರ ತಾಲೂಕಿನ ಕೆಳದಿ ಗ್ರಾಮದಲ್ಲಿ 2018ರ ಮೇ 9ರಂದು ಸಾತ್ವಿಕ್ ತನ್ನ ಅಜ್ಜ ರಾಮರಾವ್ ಅವರನ್ನು ಕೊಲೆ ಮಾಡಿದ್ದ. ಸಾತ್ವಿಕ್ ಪೋಲಿ ಹುಡುಗರ ಸಹವಾಸ ಮಾಡಿ ಪ್ರತಿನಿತ್ಯ ಕುಡಿದು ಮನೆಗೆ ಬರುತ್ತಿದ್ದ. ಕೆಟ್ಟತನ ಕಲಿಯದಂತೆ ಕುಡಿತ ಬಿಡುವಂತೆ ಅಜ್ಜ ರಾಮರಾವ್ ಮೊಮ್ಮಗನಿಗೆ ಬುದ್ಧಿ ಮಾತು ಹೇಳಿದ್ದಾರೆ. ಇದರಿಂದ ಕೋಪಗೊಂಡ ಸಾತ್ವಿಕ್ ಆಯುಧದಿಂದ ತನ್ನ ಅಜ್ಜನ ತಲೆಗೆ ಹೊಡೆದಿದ್ದ. ಇದರಿಂದ ರಾಮರಾವ್ ಮೃತಪಟ್ಟಿದ್ದರು. ಈ ಸಂಬಂಧ ರಾಮರಾವ್ ಪತ್ನಿ ಬಂಗಾರಮ್ಮ ಮೊಮ್ಮಗ ಸಾತ್ವಿಕ್ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದರು.

 Life Imprisonment For Person Who Killed His Grandfather In Sagara

 ಅಪಘಾತ ಪ್ರಕರಣ: ಶಿಕ್ಷೆಯಿಂದ ಪಾರಾದ 'ಬಾಲಾಪರಾಧಿ' ಯುವಕ! ಅಪಘಾತ ಪ್ರಕರಣ: ಶಿಕ್ಷೆಯಿಂದ ಪಾರಾದ 'ಬಾಲಾಪರಾಧಿ' ಯುವಕ!

ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದ ಸಾಗರ ಗ್ರಾಮಾಂತರ ಠಾಣೆ ಪೊಲೀಸರು ತನಿಖೆ ನಡೆಸಿ ಸಾತ್ವಿಕ್ ವಿರುದ್ಧ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಶೋಭಾ, ಆರೋಪಿ ಸಾತ್ವಿಕ್ ‍ಗೆ ಜೀವಾವಧಿ ಶಿಕ್ಷೆ ವಿಧಿಸಿದ್ದಾರೆ.

English summary
The 5th Additional and District Sessions Court has sentenced a young man to life imprisonment for murdering his grandfather in sagara, who advised him not to drink
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X