ತೀರ್ಥಹಳ್ಳಿಯಲ್ಲೀಗ ಚಿರತೆ ದಾಳಿಯದೇ ಸುದ್ದಿ

ತೀರ್ಥಹಳ್ಳಿ, ಜೂನ್ 7: ಇದು ತೀರ್ಥಹಳ್ಳಿ ತಾಲೂಕಿನಲ್ಲಿ ಆತಂಕಕ್ಕೆ ಹಾಗೂ ಚರ್ಚೆಗೆ ಕಾರಣವಾಗಿರುವ ಸುದ್ದಿ. ತಾಲೂಕಿನ ದತ್ತರಾಜಪುರ ಹತ್ತಿರದ ಹುಲ್ಲತ್ತಿಯಲ್ಲಿ ಬೈಕ್ ಸವಾರರ ಮೇಲೆ ಚಿರತೆಯೊಂದು ದಾಳಿ ನಡೆಸಿದೆ.

ಈ ವೇಳೆ ಪೊರಲುಕೊಪ್ಪ ಮಂಜುನಾಥ ಎಂಬುವವರಿಗೆ ಗಾಯಗಳಾಗಿದ್ದು, ಕೋಣಂದೂರು ಸರಕಾರಿ ಆಸ್ಪತ್ರೆಗೆ ಸೇರಿಸಲಾಗಿದೆ. ಅವರ ಮಗ ಹದಿನೈದು ವರ್ಷದ ಚೇತನ್ ಈ ಘಟನೆಯಿಂದ ಗಾಬರಿಯಾಗಿದ್ದಾನೆ.

Leopard attacked on bike rider in Tirthahalli taluk

ರಾತ್ರಿ ಬೈಕ್ ನಲ್ಲಿ ಹೋಗುವಾಗ ಇವರಿಬ್ಬರ ಮೇಲೆ ಚಿರತೆ ಎರಗಿದೆ. ಆಗ ಬೈಕ್ ಏನಾದರೂ ಕೆಳಗೆ ಬಿದ್ದಿದ್ದರೆ ಇನ್ನೂ ಹೆಚ್ಚಿನ ಅನಾಹುತ ಆಗುವ ಸಾಧ್ಯತೆ ಇರುತ್ತಿತ್ತು. ಹಾಗೆ ಬೀಳದ ಕಾರಣಕ್ಕೆ ಬಚಾವಾಗಿ ಬಂದಿದ್ದಾರೆ. ಆ ನಂತರ ಚಿರತೆಯು ಸಮೀಪದಲ್ಲೇ ಒಂದು ದನ ಹಾಗೂ ನಾಯಿಯನ್ನು ಕೊಂದಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.[ಸ್ವಂತ ಮಗನನ್ನೇ ಸುಪಾರಿ ಕೊಟ್ಟು ಕೊಲ್ಲಿಸಿದ ಶಿವಮೊಗ್ಗದ ತಾಯಿ!]

ತೀರ್ಥಹಳ್ಳಿ ತಾಲೂಕಿನ ಮಂಡಗದ್ದೆ, ಅಗ್ರಹಾರ, ಕನ್ನಂಗಿ, ತ್ರಿಯಂಬಕಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಂಡಲಮನೆ, ಬಂಡಿಕೊಪ್ಪ, ಲಿಂಗನಕೊಪ್ಪ ಮತ್ತಿತರ ಕಡೆ ಚಿರತೆ ಹಾವಳಿ ಹೆಚ್ಚಾಗಿದೆ. ಶಾಲೆ-ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು, ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸುವವರು ಭಯದಲ್ಲೇ ಸಂಚರಿಸುವ ಸನ್ನಿವೇಶ ಎದುರಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+