ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪರಿಷತ್ ಚುನಾವಣೆ; ಶಿವಮೊಗ್ಗದ ಚುನಾವಣಾ ಚಿತ್ರಣ

|
Google Oneindia Kannada News

ಶಿವಮೊಗ್ಗ, ನವೆಂಬರ್ 30; ಸ್ಥಳೀಯ ಸಂಸ್ಥೆಗಳಿಂದ 25 ವಿಧಾನ ಪರಿಷತ್ ಸದಸ್ಯರನ್ನು ಆಯ್ಕೆ ಮಾಡಲು ಚುನಾವಣೆ ಘೋಷಣೆಯಾಗಿದೆ. ಡಿಸೆಂಬರ್ 10ರಂದು ಚುನಾವಣೆ ನಡೆಯಲಿದ್ದು, ಡಿಸೆಂಬರ್ 14 ರಂದು ಫಲಿತಾಂಶ ಪ್ರಕಟವಾಗಲಿದೆ.

ಶಿವಮೊಗ್ಗದಲ್ಲಿ ಕಾಂಗ್ರೆಸ್‌ನಿಂದ ಆಯ್ಕೆಯಾಗಿರುವ ಆರ್. ಪ್ರಸನ್ನ ಕುಮಾರ್ ನಿವೃತ್ತಿಯಿಂದ ತೆರವಾಗುವ ಸ್ಥಾನಕ್ಕೆ ಚುನಾವಣೆ ನಡೆಯುತ್ತಿದೆ. ಈಗಾಗಲೇ ನಾಮಮಪತ್ರ ಸಲ್ಲಿಕೆ ಕಾರ್ಯ ಪೂರ್ಣಗೊಂಡಿದ್ದು, ಒಟ್ಟು 4 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಶಿವಮೊಗ್ಗ; ವಿಧಾನ ಪರಿಷತ್ ಮತದಾನ ಬಹಿಷ್ಕಾರಶಿವಮೊಗ್ಗ; ವಿಧಾನ ಪರಿಷತ್ ಮತದಾನ ಬಹಿಷ್ಕಾರ

ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಆರ್. ಪ್ರಸನ್ನ ಕುಮಾರ್, ಬಿಜೆಪಿಯಿಂದ ಡಿ. ಎಸ್. ಅರುಣ್, ಜೆಡಿಯುನಿಂದ ಶಶಿಕುಮಾರ್ ಬಿ. ಕೆ., ಪಕ್ಷೇತರ ಅಭ್ಯರ್ಥಿಯಾಗಿ ರವಿ ಪಿ .ವೈ. ಕಣದಲ್ಲಿದ್ದಾರೆ. ಡಿಸೆಂಬರ್ 10ರಂದು ಬೆಳಗ್ಗೆ 8 ರಿಂದ ಸಂಜೆ 4 ಗಂಟೆಯ ತನಕ ಮತದಾನ ನಡೆಯಲಿದೆ.

ಪರಿಷತ್ ಚುನಾವಣೆ; ನಾಮಪತ್ರ ವಾಪಸ್ ಪಡೆದ ಜೆಡಿಎಸ್ ಅಭ್ಯರ್ಥಿ!ಪರಿಷತ್ ಚುನಾವಣೆ; ನಾಮಪತ್ರ ವಾಪಸ್ ಪಡೆದ ಜೆಡಿಎಸ್ ಅಭ್ಯರ್ಥಿ!

legislative council

ಮತದಾರರ ವಿವರ; ಶಿವಮೊಗ್ಗ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ ಸದಸ್ಯರನ್ನು ಆಯ್ಕೆ ಮಾಡಲು 4,180 ಮಂದಿ ಮತದಾನ ಮಾಡುವ ಹಕ್ಕು ಹೊಂದಿದ್ದಾರೆ. ಇವರಲ್ಲಿ 2,175 ಪುರುಷ ಹಾಗೂ 2005 ಮಹಿಳಾ ಮತದಾರರು ಇದ್ದಾರೆ.

ಎಂಎಲ್‌ಸಿ ಸ್ಥಾನಕ್ಕೆ ಜೆಡಿಎಸ್ ನಾಯಕನ ರಾಜೀನಾಮೆ ಎಂಎಲ್‌ಸಿ ಸ್ಥಾನಕ್ಕೆ ಜೆಡಿಎಸ್ ನಾಯಕನ ರಾಜೀನಾಮೆ

ಸೊರಬ ತಾಲೂಕಿನಲ್ಲಿ 295 ಪುರುಷರು 24 ಮಹಿಳೆಯರು ಸೇರಿದಂತೆ 319 ಮಂದಿ. ಶಿಕಾರಿಪುರ ತಾಲೂಕಿನಲ್ಲಿ 259 ಪುರುಷರು 243 ಮಹಿಳೆಯರು ಸೇರಿ 502 ಮಂದಿ. ಹೊನ್ನಾಳಿ ತಾಲೂಕಿನಲ್ಲಿ 169 ಪುರುಷರು ಮತ್ತು 175 ಮಹಿಳೆಯರು ಸೇರಿ 344ಮಂದಿ, ನ್ಯಾಮತಿ ತಾಲೂಕಿನಲ್ಲಿ 103 ಪುರುಷರು 87 ಮಹಿಳೆಯರು ಸೇರಿ 190 ಮಂದಿ ಮತದಾರರು ಇದ್ದಾರೆ.

ಚನ್ನಗಿರಿ ತಾಲೂಕಿನಲ್ಲಿ 365 ಪುರುಷರು ಮತ್ತು 396 ಮಹಿಳೆಯರು ಸೇರಿ 761 ಮಂದಿ. ಭದ್ರಾವತಿಯಲ್ಲಿ 225 ಪುರುಷರು ಮತ್ತು 254 ಮಹಿಳೆಯರು ಸೇರಿ 479ಮಂದಿ. ಶಿವಮೊಗ್ಗದಲ್ಲಿ 237 ಪುರುಷರು ಮತ್ತು 265 ಮಹಿಳೆಯರು ಸೇರಿ 502 ಮಂದಿ ಮತದಾನ ಮಾಡುವ ಹಕ್ಕು ಹೊಂದಿದ್ದಾರೆ.

ಸಾಗರ ತಾಲೂಕಿನಲ್ಲಿ 204 ಪುರುಷರು ಮತ್ತು 215 ಮಹಿಳೆಯರು ಸೇರಿ 419 ಮಂದಿ. ಹೊಸನಗರ ತಾಲೂಕಿನಲ್ಲಿ 148 ಪುರುಷರು ಮತ್ತು 163 ಮಹಿಳೆಯರು ಸೇರಿ 311 ಮಂದಿ. ತೀರ್ಥಹಳ್ಳಿಯಲ್ಲಿ 170 ಪುರುಷರು ಮತ್ತು 183 ಮಹಿಳೆಯರು ಸೇರಿ 353 ಮತದಾರರು ಮತದಾನ ಮಾಡಬಹುದಾಗಿದೆ.

ಮತದಾನಕ್ಕಾಗಿ ಒಟ್ಟು 365 ಮತಗಟ್ಟೆಗಳನ್ನು ಸ್ಥಾಪನೆ ಮಾಡಲಾಗುತ್ತದೆ. ಸೊರಬ 28, ಶಿಕಾರಿಪುರ 43, ಹೊನ್ನಾಳಿ 29, ನ್ಯಾಮತಿ 17, ಚನ್ನಗಿರಿ 62, ಭದ್ರಾವತಿ 38, ಶಿವಮೊಗ್ಗ 41, ಸಾಗರ 37, ಹೊಸನಗರ 31 ಮತ್ತು ತೀರ್ಥಹಳ್ಳಿಯಲ್ಲಿ 39 ಮತಗಟ್ಟೆ ಇರಲಿವೆ.

ಈಗಾಗಲೇ ಮಾದರಿ ನೀತಿ ಸಂಹಿತೆ ಅನುಷ್ಠಾನಕ್ಕಾಗಿ 33 ನೋಡಲ್ ಅಧಿಕಾರಿಗಳು, ಚುನಾವಣಾ ಪ್ರಕ್ರಿಯೆಗಳ ಮೇಲುಸ್ತವಾರಿಗಾಗಿ 28 ನೋಡಲ್ ಅಧಿಕಾರಿಗಳು, 34 ಫ್ಲೈಯಿಂಗ್ ಸ್ಕ್ವಾಡ್‍ಗಳನ್ನು ರಚಿಸಲಾಗಿದೆ.

ಸುಗಮ ಮತದಾನಕ್ಕಾಗಿ 365 ಮತಗಟ್ಟೆ ಅಧಿಕಾರಿ ಹಾಗೂ ಸಿಬ್ಬಂದಿಗಳ ತಂಡ ರಚನೆ ಮಾಡಲಾಗಿದೆ. 65 ತಂಡಗಳನ್ನು ಕಾಯ್ದಿರಿಸಲಾಗಿದ್ದು, ಒಟ್ಟು 430 ಮತಗಟ್ಟೆ ಅಧಿಕಾರಿ ತಂಡಗಳಿವೆ.

ಯಾರು ಮತದಾನ ಮಾಡುತ್ತಾರೆ?; ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ ಸದಸ್ಯರನ್ನು ಆಯ್ಕೆ ಮಾಡಲು ನಡೆಯುವ ಚುನಾವಣೆಯಲ್ಲಿ ಲೋಕಸಭಾ, ರಾಜ್ಯಸಭಾ, ವಿಧಾನಸಭಾ, ವಿಧಾನ ಪರಿಷತ್, ಗ್ರಾಮ ಪಂಚಾಯತ್ ಸದಸ್ಯರು ಮತದಾನದ ಹಕ್ಕು ಹೊಂದಿರುತ್ತಾರೆ. ಆದರೆ ಈ ಬಾರಿ ಕೆಲವು ಸ್ಥಳೀಯ ಸಂಸ್ಥೆಗಳ ಸದಸ್ಯರು ಮತದಾನ ಮಾಡುವಂತಿಲ್ಲ.

Recommended Video

ಈ ವೈರಸ್ ಅಂದ್ರೆ ಸಾಮಾನ್ಯ ಅಲ್ಲ!! | Oneindia Kannada

ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಸದಸ್ಯರು ಮತದಾನ ಮಾಡುವ ಹಕ್ಕನ್ನು ಈ ಬಾರಿ ಹೊಂದಿಲ್ಲ. ಎರಡೂ ಪಂಚಾಯಿತಿಗಳಿಗೆ ಹೊಸದಾಗಿ ಚುನಾವಣೆ ಇನ್ನೂ ನಡೆಯದ ಕಾರಣ ಈ ಬಾರಿಯ ಪರಿಷತ್ ಚುನಾವಣೆಯಲ್ಲಿ ಸದಸ್ಯರು ಮತದಾನ ಮಾಡುವ ಹಕ್ಕನ್ನು ಕಳೆದುಕೊಂಡಿದ್ದಾರೆ.

English summary
Karnataka legislative council election will be held on December 10, 2021. Here are the ground report of Shivamogga seat.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X