ಕುಮಾರಸ್ವಾಮಿಗೆ ಕುಮಾರ ಬಂಗಾರಪ್ಪ ಎಸೆದ ವಿಚಿತ್ರ ಸವಾಲು!
Recommended Video

ಶಿವಮೊಗ್ಗ, ಅಕ್ಟೋಬರ್ 30: ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಅವರ ವಿರುದ್ಧ ಬಾಂಬ್ ಸಿಡಿಸಿರುವ ಸೊರಬ ಶಾಸಕ ಕುಮಾರ್ ಬಂಗಾರಪ್ಪ, ರಾಧಿಕಾರನ್ನು ಚುನಾವಣಾ ಪ್ರಚಾರಕ್ಕೆ ಬಳಸಿಕೊಳ್ಳುವಂತೆ ಸವಾಲು ಹಾಕಿದ್ದಾರೆ.
ಕುಮಾರಸ್ವಾಮಿ ತಮ್ಮ ಕಟುಂಬದಲ್ಲಿ ರಾಜಕಾರಣ ಮಾಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿರುವ ಕುಮಾರ್ ಬಂಗಾರಪ್ಪ, ಕುಮಾರಸ್ವಾಮಿಯವರು ಎಚ್ಚರದಿಂದ ಇರಬೇಕು ಮುಂದಿನ ದಿನಗಳಲ್ಲಿ ಅವರ ವಿರುದ್ಧವೂ ಮಿಟೂ ಬಾಂಬ್ ಸಿಡಿಯುವ ಸಾಧ್ಯತೆ ಇದೆ.
ಸಾಮಾಜಿಕ ಜಾಲತಾಣ ಈಗಾಗಲೇ ಅವರ ಮತ್ತೊಂದು ಕುಟುಂಬದ ಫೋಟೊಗಳು ಓಡಾಡುತ್ತಿವೆ, ಅವರಿಗೆ ಧೈರ್ಯವಿದ್ದರೆ ಹಾಸನದಲ್ಲಿ ಚುನಾವಣಾ ಪ್ರಚಾರಕ್ಕೆ ಬಳಸಿಕೊಳ್ಳಲಿ ಅಥವಾ ಯಾವುದಾದರೂ ಕ್ಷೇತ್ರದಿಂದ ಸ್ಪರ್ಧಿಸಲಿ ಎಂದು ಸವಾಲು ಹಾಕಿದ್ದಾರೆ.

ಕುಮಾರಸ್ವಾಮಿ ಅವರ ಕುಟುಂಬದಲ್ಲಿ ಈಗಾಗಲೇ ಒಬ್ಬ ಪತ್ನಿ ರಾಮನಗರದಿಂದ ಸ್ಪರ್ಧಿಸುತ್ತಿದ್ದಾರೆ, ಅವರ ಕುಟುಂಬದ ಸದಸ್ಯರು ಹಾಸನ ಜಿಲ್ಲೆಯಲ್ಲಿ ಜಿಲ್ಲಾ ಪಂಚಾಯತ್ ಸದಸ್ಯರಾಗಿದ್ದಾರೆ.ಹಾಗೆಯೇ ರಾಧಿಕಾರನ್ನು ಯಾಕೆ ಚುನಾವಣಾ ಪ್ರಚಾರಕ್ಕೆ ಕರೆಸಿಕೊಳ್ಳಬಾರದು ಎಂದರು.
ಬೇರೆಯವರ ಕುಟುಂಬದ ಬಗ್ಗೆ ಹಗುರವಾಗಿ ಮಾತನಾಡುವ ಕುಮಾರಸ್ವಾಮಿಯವರಿಗೆ ತಮ್ಮ ಬಗ್ಗೆ ಗೊತ್ತಿರಬೇಕು, ಇಂತಹ ರಾಜಕಾರಣ ಸರಿಯಲ್ಲ, ಮುಂದಿನ ದಿನಗಳಲ್ಲಿ ಅವರು ಇದಕ್ಕೆ ಬೆಲೆ ತೆರಬೇಕಾದೀತು ಎಂದಿದ್ದಾರೆ.
ನಿನ್ನೆಯಷ್ಟೇ ಬಹಿರಂಗ ಪ್ರಚಾರದಲ್ಲಿ ಭಾಗಿಯಾಗಿದ್ದ ಕುಮಾರಸ್ವಾಮಿ ಕುಮಾರ ಬಂಗಾರಪ್ಪ ವಿರುದ್ಧ ವಾಗ್ದಾಳಿ ನಡೆಸಿದ್ದರು. ಆ ವೇಳೆ ದಿವಂಗತ ಬಂಗಾರಪ್ಪ ಅವರನ್ನು ಕುಮಾರ್ ಬಂಗಾರಪ್ಪ ಅವರು ಮನೆಯಿಂದ ಓಡಿಸಿದ್ದರು ಎಂದು ಹೇಳಿದ್ದರು. ಅದಕ್ಕೆ ಕುಮಾರ್ ಬಂಗಾರಪ್ಪ ರಾಧಿಕಾ ಅವರ ಹೆಸರು ಬಳಸಿ ವಾಗ್ದಾಳಿ ನಡೆಸಿದ್ದಾರೆ.












Click it and Unblock the Notifications